HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಎಡನೀರು ಶ್ರೀಗಳ  ಚಾತುಮರ್ಾಸ್ಯ -ಪೂರ್ವಭಾವೀ ಸಭೆ
   ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯ ವ್ರತಾಚರಣೆಯು ಆ.2 ರಿಂದ ಸಪ್ಟಂಬರ್ 25ರ ವರೆಗೆ ಶ್ರೀಮದ್ ಎಡನೀರು ಮಠದಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವೀ ಸಭೆ ಭಾನುವಾರ ಶ್ರೀಮಠದ ಸಭಾಂಗಣದಲ್ಲಿ ನಡೆಯಿತು.
   ಚಾತುಮರ್ಾಸ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ಡಾ.ಬಿ.ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಚಾತುಮರ್ಾಸ್ಯ ಕಾಲಾವಧಿಯಲ್ಲಿ ಶ್ರೀಮಠದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಚಚರ್ಿಸಿ ರೂಪುರೇಖೆ ರಚಿಸಲಾಯಿತು. ಚಾತುಮರ್ಾಸ್ಯದ ದಿನಗಳಂದು ಸಂಜೆ 6.30 ರಿಂದ ರಾತ್ರಿ 9ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಅವಕಾಶ ನೀಡಲಾಗುತ್ತಿದ್ದು, ವ್ಯಕ್ತಿ ಅಥವಾ ತಂಡಗಳು ಶ್ರೀಮಠವನ್ನು ಮುಂಚಿತವಾಗಿ ಸಂಪಕರ್ಿಸಬಹುದಾಗಿದೆ.
   ಸಭೆಯಲ್ಲಿ ರಾಮ್ ಪ್ರಸಾದ್ ಕಾಸರಗೋಡು, ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ಬಾಲಕೃಷ್ಣ ಪೊಕರ್ೂಡ್ಳು, ಅರವಿಂದ ಅಲೆವೂರಾಯ, ರತನ್ ಕುಮಾರ್ ಕಾಮಡ, ನ್ಯಾಯವಾದಿ ನಾರಾಯಣ ಭಟ್, ಜಯರಾಮ ಮಂಜತ್ತಾಯ, ಸೂರ್ಯನಾರಾಯಣ ಭಟ್ ಎಡನೀರು ಮೊದಲಾದವರು ಉಪಸ್ಥಿತರಿದ್ದರು.
   ಸಭೆಯಲ್ಲಿ ನ್ಯಾಯವಾದಿ ಐ.ವಿ.ಭಟ್ ಸ್ವಾಗತಿಸಿ, ಪ್ರಧಾನ ಕಾರ್ಯದಶರ್ಿ ಕೆಯ್ಯೂರು ನಾರಾಯಣ ಭಟ್ ಚಾತುಮರ್ಾಸ್ಯ ವ್ರತಾಚರಣೆಯ ನಿರ್ವಹಣೆಯ ಬಗ್ಗೆ ಮಾತನಾಡಿ ವಂದಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries