ಸುಳ್ಳು ಸುದ್ದಿಗೆ ಬ್ರೇಕ್: ವಾಟ್ಸಪ್ ಫಾರ್ವಡರ್್ ಮೆಸೇಜ್ ಗಳ ಮಿತಿ 5 ಮಂದಿಗೆ ಸೀಮಿತ
ನವದೆಹಲಿ: ಸುಳ್ಳು ಸುದ್ದಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ತನ್ನ ಚಾಟಿಂಗ್ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ತರಲು ಮುಂದಾಗಿದೆ.
ಇತ್ತೀಚೆಗೆ ದೇಶದಲ್ಲಿ ನಡೆದ ಸಾಮೂಹಿಕ ಹಲ್ಲೆ ಪ್ರಕರಣಗಳಿಂದ ಹತ್ತಾರು ಅಮಾಯಕರು ಸಾವನ್ನಪ್ಪಿದ ಪ್ರಕರಣಗಳು ಹಸಿರಾಗಿರುವಾಗಲೇ ಮೆಸೆಜಿಂಗ್ ಜಾಲತಾಣ ವಾಟ್ಸಪ್ ತನ್ನ ಫಾರ್ವಡರ್್ ಮೆಸೇಜ್ ಗಳಿಗೆ ಮಿತಿ ಹೇರಲು ನಿರ್ಧರಿಸಿದೆ.
ವಾಟ್ಸಪ್ ನೂತನ ಸೆಟ್ಟಿಂಗ್ಸ್ ನ ಅನ್ವಯ ಯಾವುದೇ ಸಂದೇಶ ಅಥವಾ ಫೋಟೋಗಳನ್ನು ಏಕಕಾಲಕ್ಕೆ ಐದು ಮಂದಿಗೆ ಮಾತ್ರ ರವಾನಿಸಬಹುದಾಗಿದೆ. ಅಲ್ಲದೆ ಪ್ರಸ್ತುತ ಇರುವ ಕ್ವಿಕ್ ಫಾರ್ವಡರ್್ ಆಯ್ಕೆಯನ್ನೂ ಕೂಡ ತೆಗೆದು ಹಾಕುವ ಕುರಿತು ವಾಟ್ಸಪ್ ಸಂಸ್ಥೆ ಚಿಂತನೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಅಂದರೆ ಜುಲೈ 10ರಿಂದ ಪಾರ್ವಡರ್್ ಮೆಸೇಜ್ ಗಳಿಗೆ ಫಾರ್ವಡರ್್ ಲೇಬಲ್ ವ್ಯವಸ್ಥೆಯನ್ನು ವಾಟ್ಸಪ್ ಅಳವಡಿಸಿತ್ತು. ಆ ಮೂಲಕ ಸುಳ್ಳು ಸುದ್ದಿಗಳನ್ನು ಕಂಡುಹಿಡಿಯುವುದಕ್ಕೆ ಆಯ್ಕೆಯನ್ನು ಕಲ್ಪಿಸಲಾಗಿತ್ತು.