HEALTH TIPS

No title

        ಬಾಬರಿ ಮಸೀದಿ ದ್ವಂಸದ ವೇಳೆ ಹಿಂದೂಗಳು ತಾಲಿಬಾನಿಗಳಂತೆ ವತರ್ಿಸಿದ್ದರು: ವಕೀಲ ರಾಜೀವ್ ಧವನ್
    ನವದೆಹಲಿ: ಬಾಬರಿ ಮಸೀದಿ ದ್ವಂಸವಾಗಿದ್ದ ಡಿಸೆಂಬರ್ 6, 1992 ರಂದು ಹಿಂದೂಗಳು ತಾಲಿಬಾನಿಗಳಂತೆ ವತರ್ಿಸಿದ್ದರು ಎಂದು ಅಯೋಧ್ಯೆ ವಿವಾದ ಪ್ರಕರಣದಲ್ಲಿ ಮುಸ್ಲಿಮ್ ಪಕ್ಷದ ಪರ ವಕೀಲರಾದ ರಾಜೀವ್ ಧವನ್ ಹೇಳಿದ್ದಾರೆ.
    ಸುಪ್ರೀಂ ಕೋಟರ್್ ನಲ್ಲಿ ಅಯೋಧ್ಯೆ ಪ್ರಕರಣ ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲರು ಈ ಹೇಳಿಕೆ ನಿಡಿದ್ದಾರೆ. "ಹಿಂದೂಗಳು ಅಂದು ತಾಲಿಬಾನಿಗಳ್ಂತೆ ವತರ್ಿಸಿದ್ದರು. ಡಿಸೆಂಬರ್ 6ರಂದು ಹಿಂದೂಗಳು ನಡೆಸಿದುದು ಒಂದು ಭಯೋತ್ಪಾದನೆ ಕೃತ್ಯವೇ ಹೊರತು ಬೇರಲ್ಲ" ಅವರು ಹೇಳಿದ್ದಾರೆ.
   ಇದಕ್ಕೂ ಮುನ್ನ ಧವನ್ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ದ್ವಂಸವನ್ನು ತಾಲಿಬಾನಿಗಳು ಅಫ್ಘಾನಿಸ್ಥಾನದ ಬಮಿಯಾನ್ ಬುದ್ದನ ಪ್ರತಿಮೆಗಳ ದ್ವಂಸಕ್ಕೆ ಹೋಲಿಸಿದ್ದರು. ಅಲ್ಲದೆ ಹಿಂದೂ ತಾಲಿಬಾನಿಗಳು ಬಾಬರಿ ಮಸೀದಿಯನ್ನು ನಾಶ ಮಾಡಿದ್ದಾರೆ ಎಂದು ವಾದಿಸಿದ್ದರು.
   ಡಿಸೆಂಬರ್ 1992ರ ಘಟನೆಯು  "ಹಿಂದೂ ಭಯೋತ್ಪಾದನೆ"ಗೆ ಒಂದು ಉದಾಹರಣಯಾಗಲಿದೆ ಎಂದು ಅವರು ಹೇಳಿದ್ದಾರೆ.1526 ರಿಂದ 1992 ರ ಡಿಸೆಂಬರ್ 6 - ಅದನ್ನು ದ್ವಂಸ ಮಾಡುವವರೆಗೂ ಅಲ್ಲಿ ಮಸೀದಿ ಇದ್ದಿತ್ತು ಎಂದು ಅವರು ವಾದಿಸಿದ್ದಾರೆ. ಅಲ್ಲಿ ಇದಕ್ಕೂ ಮುನ್ನ ದೇವಾಲಯವಿತ್ತು ಎಂದು ನಾನು ಭಾವಿಸಲಾರೆ. ಆದರೆ ಹಿಂದೂಗಳಿಗೆ ಅಲ್ಲಿ ಪೂಜೆ ನೆರವೇರಿಸಲು ಅವಕಾಶ ನಿಡಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries