HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಜುಲೈ 7 ರಂದು ಸುಬ್ರಹ್ಮಣ್ಯದಲ್ಲಿ ಅಥರ್ಾಂತರಂಗ
     ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆ ಸರಣಿ ರೂಪದಲ್ಲಿ ಮುನ್ನಡೆಸುತ್ತಿರುವ ತಾಳಮದ್ದಳೆ ಅಧ್ಯಯನ ಶಿಬಿರ "ಅಥರ್ಾಂತರಂಗ" ಕಾರ್ಯಕ್ರಮದ ಒಂಭತ್ತನೇ ಕಾರ್ಯಕ್ರಮ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮ ಸಮ್ಮೇಳನ ಮಂಟಪದಲ್ಲಿ ಜುಲೈ 7ನೇ ಶನಿವಾರ ಅಪರಾಹ್ನ ಗಂಟೆ 2 ರಿಂದ `ಅಥರ್ಾಂತರಂಗ-9'ಜರಗಲಿದೆ.
    ಪ್ರಸಿದ್ಧ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ಸಮರ್ಥ ನಿದರ್ೇಶನದಲ್ಲಿ ತಾಳಮದ್ದಳೆ ಅರ್ಥಗಾರಿಕೆಯ ಅಧ್ಯಯನವನ್ನು ಗುರಿಯಾಗಿರಿಸಿರುವ ಶಿಬಿರ ಸರಣಿ ಕಾರ್ಯಕ್ರಮ ಇದಾಗಿದೆ.
    ಶಿಬಿರವನ್ನು ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಲಿದ್ದು, ನಿವೃತ್ತ ಪ್ರಾಂಶುಪಾಲ ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಶಿಶಿಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂತರ್ಿ ಭಟ್, ಕಾರ್ಯ
ನಿರ್ವಹಣಾಧಿಕಾರಿ ರವೀಂದ್ರ ಎಚ್, ಗಣ್ಯರಾದ ಚಂದ್ರಶೇಖರ ಪೇರಾಲು, ಮಹೇಶ್ ಕುಮಾರ್ ಕರಿಕ್ಕಳ, ಬಾಲಸುಬ್ರಹ್ಮಣ್ಯ ಭಟ್ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಯಕ್ಷಗಾನ ವಿದ್ವಾಂಸರಾದ ಡಾ. ಪೂವಪ್ಪ ಕಣಿಯೂರು, ಕೆ.ರಾಮ ಶರ್ಮ, ಕೃಷ್ಣ ಶರ್ಮ, ಮಂಜು ಸುಳ್ಯ, ಉಪನ್ಯಾಸಕ ಗಣರಾಜ ಕುಂಬ್ಳೆ, ಸತ್ಯಶಂಕರ ಭಟ್, ಸುಬ್ಬಪ್ಪ ಕೈಕಂಬ, ಕಲಾವಿದ ಶಂಭಯ್ಯ ಭಟ್ ಕಂಜರ್ಪಣೆ ಭಾಗವಹಿಸಲಿದ್ದಾರೆ.
      ಶಿಬಿರದ ಪೀಠಿಕೆಯಲ್ಲಿ ವಿನ್ಯಾಸ ಮತ್ತು ವಿಸ್ತಾರ, ಸ್ವಗತ ಹಾಗೂ ಪೀಠಿಕೆ ವ್ಯತ್ಯಾಸ, ಸಂವಾದದಲ್ಲಿ ವೈವಿಧ್ಯ ವಿಷಯದ ಬಗೆಗೆ ಪ್ರಾತ್ಯಕ್ಷಿಕೆ ಹಾಗೂ ಮುಕ್ತ ಸಂವಾದ ಅವಲೋಕನ ನಡೆಯಲಿದೆ.
    ಕಲಾವಿದರಾಗಿ ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ರಮೇಶ ಭಟ್ ಪುತ್ತೂರು, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ್ ಐಲ, ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು, ವಿಷ್ಣುಶರ್ಮ ವಾಟೆಪಡ್ಪು ಭಾಗವಹಿಸಲಿದ್ದಾರೆ. ಶ್ರೀ ಕ್ಷೇತ್ರದ ಆಡಳಿತ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಅರ್ಚಕ, ನೌಕರ ವೃಂದ ಕಾರ್ಯಕ್ರಮಕ್ಕೆ ಸಹಕರಿಸಲಿದ್ದಾರೆ ಎಂದು ಸಿರಿಬಾಗಿಲು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries