HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಜುಲೈ 8ರಂದು ರಾಷ್ಟ್ರೀಯ ತುಳು ಯಕ್ಷಯಾನ -2018 ಸ್ವಾಗತ ಸಮಿತಿ ಸಭೆ
     ಕಾಸರಗೋಡು: ತುಳುನಾಡಿನಲ್ಲಿ  ತುಳುಭಾಷೆಯ ಬೆಳವಣಿಗೆಗೆ  ತುಳುಭಾಷೆ, ಸಾಹಿತ್ಯ, ಜನಪದ, ಸಂಸ್ಕೃತಿಯನ್ನು  ಉಳಿಸಿ ಬೆಳೆಸುವುದು ಅತೀ ಅಗತ್ಯವಾಗಿದೆ. ಭಾಷೆ, ಸಾಹಿತ್ಯ ಮತ್ತು ಜನಪದ ಸಂಸ್ಕೃತಿಯ ಒಟ್ಟು ರೂಪವೇ ನಮ್ಮ ತುಳುನಾಡಿನ ಯಕ್ಷಗಾನ(ಆಟ). ಆದರೆ ಇಂದು ಯಕ್ಷಗಾನವು ತುಳುಭಾಷೆಯಿಂದ ತುಂಬಾ ದೂರವಾದಂತಿದೆ. ಹಾಗೆಯೇ ತುಳುಭಾಷೆಯ ಯಕ್ಷಗಾನಗಳು ತುಂಬಾ ಕಡಿಮೆಯಾಗುತ್ತಿದೆ ಅಲ್ಲದೆ ಕೇವಲ ಹಾಸ್ಯಕ್ಕೆ ಮಾತ್ರ  ಇದು ಸೀಮಿತಗೊಳ್ಳುತ್ತಿದೆ.
    ಯಕ್ಷಗಾನದ ಹುಟ್ಟಿಗೆ ಕಾರಣ ತುಳುನಾಡಿನ ದೈವಾರಾಧನೆಯ ಭಾಗವಾದ ಜಾಲಾಟ. ಕ್ರಮೇಣ ಇದು ಆಟವಾಗಿ, ಯಕ್ಷಗಾನವಾಗಿ ಬದಲಾಯಿತು. ಆದುದರಿಂದಲೇ ಇದು ದೈವಿಕ ಕಲೆಯಾಗಿ, ಜಾನಪದ ಕಲೆಯಾಗಿ ಹಾಗೂ ಪರಿಷ್ಕೃತ ಕಲೆಯಾಗಿ ಬೆಳೆದು ನಿಂತಿದೆ. ಇಂತಹ ಮೇರು ಕಲೆಗೆ ಯಾವುದೇ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿಲ್ಲವೆಂಬುದು ವಿಷಾದನೀಯ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಯಕ್ಷಗಾನಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು, ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ದೊರಕುವ ಪಿಂಚಣಿ, ಸಂಬಳ ಹಾಗೂ ಇನ್ನಿತರ ಸಹಾಯ, ಸೌಲಭ್ಯಗಳನ್ನು ಯಕ್ಷಗಾನ  ಕಲಾವಿದರಿಗೆ ಲಭಿಸುವಂತೆ ಪ್ರಯತ್ನಿಸುವುದು, ಯಕ್ಷಗಾನ  ಕಲಾವಿದ ಮತ್ತು ಕಲಾವಿದ ನೌಕರರನ್ನು ಉದ್ಯೊಗ ಖಾತ್ರಿ ಯೋಜನೆಯಡಿ ತರುವುದು,  ಪೌರಾಣಿಕ ಹಾಗೂ ಚಾರಿತ್ರಿಕ ಆಟಗಳು, ಯಕ್ಷಗಾನದ ಸಾಹಿತ್ಯ ಛಂದಸ್ಸುಗಳು ತುಳುಭಾಷೆಯಲ್ಲಿಯೂ ಬರಬೇಕು ಎನ್ನುವ ಉದ್ದೇಶದಿಂದ `ತುಳುನಾಡು ಯಕ್ಷಯಾನ  ಫೌಂಡೇಶನ್ ಕುಡ್ಲ' ಎಂಬ ಸಂಘಟನೆಗೆ ರೂಪುನೀಡಲಾಗಿದೆ.
    ಇದರ ಪ್ರಥಮ ಹೆಜ್ಜೆಯಾಗಿ ರಾಷ್ಟ್ರೀಯ ತುಳು ಯಕ್ಷಯಾನ 2018 ಎಂಬ ಕಾರ್ಯಕ್ರಮವನ್ನು  ಮಂಗಳೂರಿನಲ್ಲಿ ಆಯೋಜಿಸಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ತುಳು ಯಕ್ಷಗಾನ ಪ್ರದರ್ಶನದ ತಿರುಗಾಟವನ್ನು ನಡೆಸಬೇಕೆಂದು ತೀಮರ್ಾನಿಸಿದೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ಜುಲೈ 8  ಭಾನುವಾರ ಮಧ್ಯಾಹ್ನ 3.30 ಕ್ಕೆ ಮಂಗಳೂರಿನ ಉರ್ವಸ್ಟೋರ್ ಬಳಿಯಿರುವ ತುಳುಭವನದಲ್ಲಿ ರಾಷ್ಟ್ರೀಯ ತುಳು ಯಕ್ಷಯಾನ -2018 ರ ಸಮಿತಿಗೆ ರೂಪುರೇಷೆಯನ್ನು ನೀಡಲು ನಿರ್ಧರಿಸಲಾಗಿದೆ. ಯಕ್ಷಗಾನದ ಹಾಗೂ ತುಳು ಅಭಿಮಾನಿಗಳು ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆಗಳನ್ನು ನೀಡಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries