ಜಗತ್ತಿನ ಅತಿ ಎತ್ತರದಲ್ಲಿ ಹಾರಿತು ತುಳು ಧ್ವಜ
ಮಂಗಳೂರು: ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಬೇಕು ಎಂಬ ಆಶಯದೊಂದಿಗೆ, ವಾಹನ ಪ್ರವೇಶಿಸಬಲ್ಲ ಜಗತ್ತಿನ ಅತೀ ಎತ್ತರದ ಪ್ರದೇಶವಾದ ಕಾಶ್ಮೀರದ ಖದರ್ುಂಗ್ ಲಾ ಎಂಬಲ್ಲಿ ತುಳುನಾಡ ಧ್ವಜ ಹಾರಿಸುವ ಮೂಲಕ ಉಡುಪಿಯ ಯುವಕ ಗಮನ ಸೆಳೆದಿದ್ದಾನೆ.
ಉಡುಪಿಯಿಂದ 4,600 ಕಿ.ಮೀ ಪ್ರಯಾಣ ಬೆಳೆಸಿ, ಜಮ್ಮು ಕಾಶ್ಮೀರದ ಖದರ್ುಂಗ್ ಲಾಗೆ ತಲುಪಿದ ಸಾಹಸಿ ಉಡುಪಿ ಕುಕ್ಕಿಕಟ್ಟೆ ನಿವಾಸಿ ಕಿಶನ್.ಎಂ(26). ತಮ್ಮ 2001 ಮಾಡೆಲ್ನ ಆರ್ಎಕ್ಸ್ 135 ಬೈಕ್ನಲ್ಲಿ ಆರು ಯುವಕರ ತಂಡ ಕಟ್ಟಿಕೊಂಡು ಈ ಸಾಧನೆಗೆ ಮುಂದಾದವರು. ತುಳುನಾಡು ಮತ್ತು ತುಳು ಭಾಷೆ ಅಭಿಮಾನವೇ ಅವರ ಈ ಸಾಧನೆಗೆ ಪ್ರೇರಣೆ. ತಮ್ಮ ಪ್ರಯಾಣದ ಉದ್ದಕ್ಕೂ `ನೀರಿನ ಮಿತ ವ್ಯಯ, ಅರಣ್ಯ ರಕ್ಷಣೆ' ಜಾಗೃತಿ ಸಂದೇಶ ಸಾರುತ್ತ ಸಾಗಿದ್ದಾರೆ.
ಯುವಕರ ತಂಡ: ಕಿಶನ್ ಜೊತೆಯಾದವರು ಉಡುಪಿ ಯುವಕರಾದ ಸುಜಿತ್, ಸುಜನ್, ರಾಕೇಶ್, ವಿಜಯ್, ಪ್ರಶಾಂತ್ ಮತ್ತು ವಿನಾಯಕ್. ಕಿಶನ್ ನೇತೃತ್ವದ ರೈಡಿಂಗ್ ತಂಡ ಜೂನ್ 20ರಂದು ಬೆಳಗ್ಗೆ ನಗರದ ಕಡಿಯಾಳಿ ಶ್ರೀ ಮಹಿಷಮದರ್ಿನಿ ದೇವಳದಲ್ಲಿ ಪೂಜೆ ಸಲ್ಲಿಸಿ ಪ್ರಯಾಣ ಆರಂಭಿಸಿತ್ತು. ಭಟ್ಕಳ, ಬೆಳಗಾವಿ, ಕೊಲ್ಹಾಪುರ, ಪೂನಾ, ಗುಜರಾತ್, ರಾಜಸ್ಥಾನ, ಪಂಜಾಬ್, ಜಮ್ಮು, ವೈಷ್ಣವಿದೇವಿ, ಶ್ರೀನಗರ ಮೂಲಕ ಹಾದುಹೋಗಿ ಲೇಹ್ ಲಡಾಖ್ನ ಜಗತ್ತಿನ ಅತೀ ಎತ್ತರದ ವಾಹನ ಪ್ರವೇಶಿಬಲ್ಲ ಪ್ರದೇಶ ಖುದರ್ುಂಗ್ ಲಾಗೆ ಜುಲೈ 8ಕ್ಕೆ ತಲುಪಿದ್ದರು. ಕಿಶನ್ ಮೊದಲು ಭಾರತದ ತ್ರಿವರ್ಣ ಧ್ವಜ ಹಾರಿಸಿ, ನಂತರ ತಮ್ಮ ಆಶಯದಂತೆ ತುಳು ನಾಡ ಧ್ವಜ ಹಿಡಿದು ಸಂಭ್ರಮಿಸಿದರು.
ಕಿಶನ್ ತಮ್ಮ ಬೈಕ್ನಲ್ಲಿ ಸಕಲ ಸುರಕ್ಷಾ ಪರಿಕರಗಳನ್ನು ಇರಿಸಿಕೊಂಡಿದ್ದರು. ರಾತ್ರಿ ಪ್ರಯಾಣಕ್ಕೆ ನಿಷೇಧ ಹಾಕಿಕೊಂಡಿದ್ದರು. ಲಗೇಜ್ ಬ್ಯಾಗ್, ಯೋಗ ಮ್ಯಾಟ್, ಪಿಲ್ಲೊ, ಟೆಂಟ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಟೂಲ್ಸ್ ಬಾಕ್ಸ್, ಜಾಕೆಟ್, ಸಣ್ಣ ಪ್ರಮಾಣದ ಆಕ್ಸಿಜನ್ ಸಿಲಿಂಡರ್, ಹೈಡ್ರೇಶನ್ ಪೈಪ್, ಗೊಪ್ರೊ ಕ್ಯಾಮರ ಮೊದಲಾದ ಪರಿಕರಗಳನ್ನು ತಮ್ಮ ಆರ್ಎಕ್ಸ್ ಬೈಕ್ನಲ್ಲಿ ಇರಿಸಿಕೊಂಡಿದ್ದರು. ದೂರದ ರೈಡಿಂಗ್ ಹೋಗುವವರು ಸಕಲ ವ್ಯವಸ್ಥೆ ಮಾಡದೆ ಸಮಸ್ಯೆ ಎದುರಿಸುತ್ತಾರೆ. ನಮ್ಮ ವೈಯಕ್ತಿಕ ದಾಖಲೆಪತ್ರ, ಬೈಕ್ ದಾಖಲೆ ಪತ್ರ, ಗ್ಲೌಸ್, ಜಾಕೆಟ್ ಹೆಲ್ಮೆಟ್ಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು, ರಸ್ತೆ ನಿಯಮ ಪಾಲೇಸಬೇಕು. ತನ್ನ ಮುಂದಿನ ಗುರಿ ಮೌಂಟ್ ಎವರೆಸ್ಟ್ಗೆ ಪ್ರಯಾಣ ಎನ್ನುತ್ತಾರೆ ಕಿಶನ್.