HEALTH TIPS

No title

                ಕೈಲಾಸ ಮಾನಸ ಯಾತ್ರ್ರೆ: ಸಿಮಿಕೋಟ್ ನಿಂದ 883 ಯಾತ್ರಿಗಳ ಸ್ಥಳಾಂತರ, ರಕ್ಷಣೆಯ ನಿರೀಕ್ಷೆಯಲ್ಲಿ 500 ಭಾರತೀಯರು
    ನವದೆಹಲಿ: ನೇಪಾಳದಲ್ಲಿ ಅಪಾಯಕ್ಕೆ ಸಿಲುಕಿರುವ ಕೈಲಾಸ ಮಾನಸ ಸರೋವರ ಯಾತ್ರಿಕರಲ್ಲಿ 883 ಯಾತ್ರಿಗಳನ್ನು ಕಳೆದ ಮೂರು ದಿನಗಳಲ್ಲಿ ನೇಪಾಳದ ಸಿಮಿಕೋಟ್ ವಲಯದಿಂದ ಸ್ಥಳಾಂತರಿಸಲಾಗಿದೆ.ಅದಾಗ್ಯೂ ಇನ್ನೂ ಸುಮಾರು 500 ಯಾತ್ರಾಥರ್ಿಗಳು ರಕ್ಷಣೆಗಾಗಿ ಕಾಯುತ್ತಿದ್ದಾರೆ ಎಂದು ಕೇಂದ್ರ ಸಕರ್ಾರ ಹೇಳಿದೆ.
   ಹಿಲ್ಸಾ ಹಾಗು ಸಿಮಿಕೋಟ್ ವಲಯದಲ್ಲಿರುವ ಯಾತ್ರಿಕರನ್ನು ಅಪಾಯದಿಂದ ರಕ್ಷಿಸಲುನೇಪಾಳದ ಭಾರತೀಯ ದೂತಾವಾಸ ಕಚೇರಿ ದೊಡ್ಡ ಪ್ರಮಾಣದಲ್ಲಿ ಪ್ರಯತ್ನ ನಡೆಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. "ವಾತಾವರಣ ಹಿತಕರವೆನಿಸಿದರೆ ಅವರನ್ನು ಮುಂದಿನ ದಿನಗಳಲ್ಲಿ ಯಾತ್ರೆಗೆ ಕಳಿಸಲಾಗುತ್ತದೆ" ಅವರು ಹೇಳಿದ್ದಾರೆ.
  ಕನಿಷ್ಠ 675 ಯಾತ್ರಿಕರನ್ನು ಹಿಲ್ಸಾ ಮತ್ತು ಸಿಮಿಕೋಟ್ ಗೆ ಸ್ಥಳಾಂತರಿಸಲಾಗಿದೆ.ಐವತ್ತ ಮೂರು ನಾಗರಿಕ ವಿಮಾನ ಯಾತ್ರಿಕರನ್ನು ರಕ್ಷಿಸುವ ಕಾಯರ್ಾಚರಣೆಯಲ್ಲಿ ತೊಡಗಿದೆ,. 142 ಚಾಪರ್ ಕ್ರಾಫ್ಟ್ ಸಹ ಈ ಕಾರ್ಯದಲ್ಲಿ ಬಳಕೆಯಾಗುತ್ತಿದೆ. ಸದ್ಯ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ನಾವು ಸಿಮಿಕೋಟ್ ನಲ್ಲಿ 516 ಹಾಗು ಸುಖರ್ೇತ್ ನಲ್ಲಿ 50 ಯಾತ್ರಿಗಳನ್ನು ಗುರುತಿಸಿದ್ದೇವೆ.ಇಲ್ಲಿ ಯಾವ ಬಿಕ್ಕಟ್ಟಿನ ವಾತಾವರಣವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
   ಅತಿಯಾದ ಎತ್ತರಕ್ಕೇರಿದ ಸಮಯದಲ್ಲಿ ಆಮ್ಲಜನಕ ಕೊರತೆಯಿಂದ ಅನೇಕ ಯಾತ್ರಾಥರ್ಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.ಈ ರೀರಿಯ ಆರೋಗ್ಯ ಸಮಸ್ಯೆಯಿಂದಾಗಿ ಹಲವರು ಸಾವನ್ನಪ್ಪುತ್ತಾರೆ. ಈ ವರ್ಷ ಇದುವರೆಗೆ ಒಟ್ಟು ಎಂಟು ಯಾತ್ರಾಥರ್ಿಗಳು ಹೀಗೆ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries