HEALTH TIPS

No title

                 ಸೋಣ ಪರ್ಬದ ವಿಜ್ಞಾಪನಾ ಪತ್ರ ಬಿಡುಗಡೆ
      ಮಂಜೇಶ್ವರ: ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಕಳೆದ 9 ವರ್ಷಗಳಿಂದ ಹೊಸಂಗಡಿ ಹಿಲ್ಸೈಡ್  ಸಭಾಂಗಣದಲ್ಲಿ  ಬ್ರಹ್ಮ ಶ್ರೀ ನಾರಾಯಣ ಗುರುಗಳ  ಸಂದೇಶವನ್ನು ಮುಂದಿಟ್ಟುಕೊಂಡು ಸಮಾಜದ ಮಕ್ಕಳಿಗೆ, ವಿದ್ಯೆಗೆ ಪ್ರೋತ್ಸಾಹ ಸಹಕಾರವನ್ನು ನೀಡುತ್ತಾ, ಮಕ್ಕಳಲ್ಲಿರುವ ಪ್ರತಿಭೆಗಳನ್ನು  ಪ್ರೋತ್ಸಾಹಿಸುವುದಕ್ಕಾಗಿ ಚಿಣ್ಣರ ಮೇಳ ಮತ್ತು ಸೋಣದ ಪರ್ಬ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.ಈ ಕಾರ್ಯಕ್ರಮದಲ್ಲಿ ಧನ ಸಹಾಯ ಮತ್ತು ಉತ್ತಮ ರ್ಯಾಂಕ್ ಪಡೆದ ಒಬ್ಬ ವಿಧ್ಯಾಥರ್ಿಗೆ ಪ್ರತಿ ವರ್ಷ "ಬ್ರಹ್ಮ ಶ್ರೀ" ಬಂಗಾರದ ಪದಕ ಮತ್ತು ಮಕ್ಕಳಿಗೆ ಬೆಳ್ಳಿ ಪದಕವನ್ನು ಕೊಡುವುದರೊಂದಿಗೆ ಸಮಾಜದ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.  ಪ್ರತಿವರ್ಷ ನಡೆಸುವ ಸೋಣದ ಪರ್ಬ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕ್ರತಿಯನ್ನು ಉಳಿಸಿ, ಬೆಳೆಸುವ, ಆಹಾರ, ಅಚಾರ-ವಿಚಾರ ಕಾರ್ಯಕ್ರಮವನ್ನು ಹನ್ನೆರಡು ಉಪಸಮಿತಿಗಳ ಪ್ರೋತ್ಸಾಹದೊಂದಿಗೆ, ಕೊಡುಗೆ ದಾನಿಗಳ ಸಹಕಾರದೊಂದಿಗೆ ಕಳೆದ 9 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು, ಈ ವರ್ಷ 10ನೇಯ ವರ್ಷದ ದಶಮಾನೋತ್ಸವ ಕಾರ್ಯಕ್ರಮ ಸೆಪ್ಟಂಬರ್ 30ರಂದು ಕ್ರೀಡೋತ್ಸವ ಹಾಗೂ  ಅಕ್ಟೋಬರ್ 7ರಂದು ದಶಮಾನೋತ್ಸವ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ.
    ಕಾರ್ಯಕ್ರಮದ ಯಶಸ್ವಿಗಾಗಿ ಎಂದಿಗೂ ಕೂಡಾ ಸ್ಮರಣೀಯಗೊಳಿಸಲು ವೈವಿದ್ಯಮಯ ಲೇಖನ, ಸಾಹಿತ್ಯವನ್ನೊಳಗೊಂಡ ಸ್ಮರಣಸಂಚಿಕೆಯೊಂದು ಬಿಡುಗಡೆಗೊಳ್ಳಲಿದೆ. ಈ ಸ್ಮರಣ ಸಂಚಿಕೆಯ ಮೊದಲ ಭಾಗವಾಗಿ ವಿಜ್ಞಾಪನ ಪತ್ರಿಕೆಯ ಬಿಡುಗಡೆ ಸಮಾರಂಭ ಮಂಗಳವಾರ ಸಂಜೆ ಹೊಸಂಗಡಿಯ ಹಿಲ್ಸೈಡ್ ಸಭಾಂಗಣದಲ್ಲಿ ನಡೆಯಿತು. ಮಾಡೂರು ಶ್ರೀ ಶಿರಡಿ ಸಾಯಿಬಾಬ ಮಂದಿರದ ಆಡಳಿತ  ಮೊಕ್ತೇಸರ  ಸುರೇಶ್ .ಕೆ. ಪಿ  ಮಾಡೂರು ಬಿಡುಗಡೆಗೊಳಿಸಿದರು. ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆಯ ಕಾಸರಗೋಡು ಜಿಲ್ಲಾಧ್ಯಕ್ಷ  ಕೃಷ್ಣ ಶಿವ ಕೃಪಾ ಕುಂಜತ್ತೂರು ಸಮಾರಂಭದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಸ್ಮರಣ ಸಂಚಿಕೆಯ ಸಂಪಾದಕ ರಘನಾಥ ವಕರ್ಾಡಿ, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದಶರ್ಿ ಹರೀಶ್ ಸುವರ್ಣ ಹೊಸಬೆಟ್ಟು, ಸ್ಮರಣ ಸಂಚಿಕೆಯ ಸಂಚಾಲಕ ಕೃಷ್ಣಪ್ಪ ಪೂಜಾರಿ ಬಡಾಜೆ, ಸ್ಮರಣ ಸಂಚಿಕೆಯ ಪ್ರಧಾನ ಸಂಚಾಲಕ ರವಿ ಮುಡಿಮಾರ್, ಸಹ ಸಂಪಾದಕ ಜಯಪ್ರಶಾಂತ್ ಮಾಸ್ತರ್ ಪಾಲೆಂಗ್ರಿ, ಸದಸ್ಯರಾದ ದೇವದಾಸ್ ಪೊಸೋಟ್, ಉದಯ ಪೊಸೋಟ್, ಮೊದಲಾದವರು ಉಪಸ್ಥಿತರಿದ್ದರು.  ಜಿಲ್ಲಾ ಸಮಿತಿ ಪ್ರ. ಕಾರ್ಯದಶರ್ಿ ಹರೀಶ್ ಸುವರ್ಣ ಹೊಸಬೆಟ್ಟು ಸ್ವಾಗತಿಸಿ, ಶಶಿಕಲಾ ಭಾಸ್ಕರ ಬಾಕ್ರಬೈಲ್ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಸ"ುತಿ ಸಂಘಟನಾ ಕಾರ್ಯದಶರ್ಿ ಅಶ್ವಿನ್ ಕುಮಾರ್ ಕಲ್ಲಗದ್ದೆ ವಂದಿಸಿದರು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries