HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಸಮರ್ಪಣ ಭಾವದ ಕರ್ತವ್ಯ ನಿಷ್ಠೆ ಕೀತರ್ಿಗೆ ಕಾರಣ-ಕಾನತ್ತಿಲ ಮಹಾಲಿಂಗ ಭಟ್
                       ಹಿಂದಿ ಪ್ರಚಾರಕ್ ಎಸ್.ಆರ್ ಶೇಟ್ ಅಭಿನಂದನಾ ಸಮಾರಂಭ
     ಬದಿಯಡ್ಕ : ಶೇಟ್ ಮಾಷ್ಟ್ರಂತಹ ಉತ್ತಮ ಹಿಂದಿ ಪ್ರಚಾರಕರಿಂದ ರಾಷ್ಟ್ರ ಭಾಷೆ ಹಿಂದಿಯು ವಿಶ್ವಭಾಷೆಯಾಗಲು ಸಾಧ್ಯ ಎಂದು ಮದ್ರಾಸ್ ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕ ಕಾನತ್ತಿಲ ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು.
ಅವರು ಶನಿವಾರ ಪೆರಡಾಲ ನವಜೀವನ ಹೈಸ್ಕೂಲ್ ಸಭಾಂಗಣದಲ್ಲಿ ಹಿಂದಿ ಪ್ರಚಾರಕ್ ಎಸ್. ಆರ್. ಶೇಟ್ರವರಿಗೆ ನಡೆದ ಗೌರವಾರ್ಪಣಾ ಕಾರ್ಯಕ್ರಮದಲ್ಲಿ ಎಸ್. ಆರ್. ಶೇಟ್ರವರನ್ನು ಸನ್ಮಾನಿಸಿ ಮಾತನಾಡಿದರು.
   ಹಿಂದಿ ಅಧ್ಯಾಪಕರಾಗಿದ್ದು ಸುಮಾರು 40 ವರ್ಷಗಳಿಂದ ದಕ್ಷಿಣಭಾರತ ಹಿಂದಿ ಪ್ರಚಾರ ಸಭಾದ ಹಿಂದಿ ಪ್ರಚಾರಕರಾಗಿ ಅನೇಕ ಜನರನ್ನು ಹಿಂದಿ ಅಧ್ಯಾಪಕರನ್ನಾಗಿ ರೂಪಿಸುವಲ್ಲಿ ಕಾರಣಕರ್ತರಾಗಿ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದಾರೆ.ಸಮರ್ಪಣಾ ಮನೋಭಾವದ ಕರ್ತವ್ಯ ನಿಷ್ಠೆ ಬದುಕಿನಲ್ಲಿ ಎತ್ತರಕ್ಕೇರಿಸುತ್ತದೆ. ದೇಶದಲ್ಲಿ ಇಂತಹ ವ್ಯಕ್ತಿಗಳು ವಿರಳ ಎಂದು ಅವರು ಹೇಳಿದರು.
ಪೆರಡಾಲ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ನ್ಯಾಯವಾದಿ ಐ.ವಿ.ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಶಾಲೆ ಹಾಗೂ ಅಧ್ಯಾಪನ ವೃತ್ತಿಯನ್ನು ಪ್ರೀತಿಸಿ, ಅನೇಕ ಹಿಂದಿ ಅಧ್ಯಾಪಕರನ್ನು ರೂಪಿಸಿ, ಊರಿನ ಜನತೆಯ ಪ್ರೀತಿಯನ್ನು ಪಡೆದ ಶ್ರೀಯುತ ಎಸ್.ಆರ್. ಶೇಟ್ ಅವರಿಗೆ ಈ ಪ್ರದೇಶ ಚಿರಋಣಿಯಾಗಿದೆ. ಶಾಲೆಯ ಕೆಲಸದ ಜೊತೆಗೆ ವ್ಯವಸ್ಥಾಪನಾ ಮಂಡಳಿಗೂ ಉತ್ತಮ ಸಹಕಾರವನ್ನು ನೀಡಿದ್ದಾರೆ ಎಂದರು.
ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಪೆರಡಾಲ ಎಜ್ಯುಕೇಶನ್ ಸೊಸೈಟಿಯ ವ್ಯವಸ್ಥಾಪಕ ಡಾ. ಸೂರ್ಯ ಎನ್. ಶಾಸ್ತ್ರಿ, ನವಜೀವನ ಹೈಯರ್ ಸೆಕೆಂಡರಿಯ ಪ್ರಾಂಶುಪಾಲ ಪಿ. ರಾಮಚಂದ್ರನ್, ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಮಾತನಾಡಿದರು.
ಪೆರ್ಲ ಎಸ್.ಎನ್.ಎಚ್.ಎಸ್.ನ ನಿವೃತ್ತ ಹಿಂದಿ ಅಧ್ಯಾಪಕ ಎಸ್.ಬಿ.ಖಂಡಿಗೆ ಮಾತನಾಡಿ, ಸರಳ ಜೀವನಶೈಲಿಯ ವ್ಯಕ್ತಿ, ಉದ್ಯೋಗದ ಜೊತೆಗೆ ಶಾಲೆಯ ಉನ್ನತಿಗಾಗಿ ದುಡಿದಿದ್ದಾರೆ ಎಂದರು. ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ ವಸಂತ ಪೈ ಬದಿಯಡ್ಕ, ಶಾಲಾ ಮುಖ್ಯೋಪಾಧ್ಯಾಯ ಕೆ.ಶ್ಯಾಮ ಭಟ್, ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ ಎಂ. ನಾರಾಯಣ ಭಟ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಎನ್. ಮಯ್ಯ,  ನಿವೃತ್ತ ಪ್ರಾಂಶುಪಾಲ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್, ಶಾಲಾ ವ್ಯವಸ್ಥಾಪಕ ಮಂಡಳಿಯ ರಮೇಶ ಕುಂಡೆಪ್ಪಾಡಿ, ವೆಂಕಟ್ರಮಣ ಭಟ್ ಪೆಮರ್ುಖ, ಗೀತಾ ಎಸ್.ಆರ್. ಶೇಟ್ ಉಪಸ್ಥಿತರಿದ್ದರು. ಹಿಂದಿ ಅಧ್ಯಾಪಕ ಹರೀಶ ಐ. ಸನ್ಮಾನ ಪತ್ರವನ್ನು ವಾಚಿಸಿದರು. ಹಿಂದಿ ಅಧ್ಯಾಪಕ ನಾರಾಯಣ ಮುರಿಯಂಕೂಡ್ಲು ಸ್ವಾಗತಿಸಿ, ಮುಂಡಿತ್ತಡ್ಕ ಶಾಲೆಯ ಅಧ್ಯಾಪಕ ಪ್ರಶಾಂತ ರೈ ವಂದಿಸಿದರು.  ಶಾಲಾ ವಿದ್ಯಾಥರ್ಿಯರು ಪ್ರಾರ್ಥನೆ ಹಾಗೂ ದೇಶಭಕ್ತಿಗೀತೆಗಳನ್ನು ಹಾಡಿದರು. ಅಧ್ಯಾಪಕ ಎಂ.ನಾರಾಯಣ ಆಸ್ರ ನಿರೂಪಿಸಿದರು.
   ಬಾಕ್ಸ್: ಕನರ್ಾಟಕದ ಕುಮಟಾದಿಂದ 40 ವರ್ಷಗಳ ಹಿಂದೆ ಬದಿಯಡ್ಕ ನವಜೀವನ ಶಾಲೆಗೆ ಅಧ್ಯಾಪಕ ವೃತ್ತಿಗೆ ಆಗಮಿಸಿ ಇದೀಗ ಪುನಃ ಊರಿಗೆ ತೆರಳಲಿರುವ ಸಂದರ್ಭದಲ್ಲಿ ಶಿಷ್ಯವೃಂದ, ಹಿತೈಷಿಗಳು ಹಾಗೂ ಊರ ಅಭಿಮಾನಿಗಳು ಅಭಿನಂದಿಸಿದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries