HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                        ಜು.8ರಂದು ನೀಚರ್ಾಲಿನಲ್ಲಿ ಯಕ್ಷಗಾನ ಪ್ರದರ್ಶನ
    ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ಸಭಾಭವನದ ಮೇಲಂತಸ್ತು ನಿಮರ್ಾಣದ ನಿಧಿಸಂಗ್ರಹದ ಸದುದ್ದೇಶದಿಂದ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾಸಂಘ ನೇರಳಕಟ್ಟೆ ಮತ್ತು ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮಳೆಗಾಲದ ಅಮೋಘ ಯಕ್ಷಗಾನ ಪ್ರದರ್ಶನವು ಜುಲೈ 8ರಂದು ಅಪರಾಹ್ನ 2 ಗಂಟೆಯಿಂದ ನೀಚರ್ಾಲು ಶಾಲಾ ವಠಾರದಲ್ಲಿ ನಡೆಯಲಿರುವುದು. `ಉಷಾ ಪರಿಣಯ' `ಮೈಂದ ದ್ವಿವಿದ' ಎಂಬ ಕಥಾಭಾಗದಲ್ಲಿ ಭಾಗವತರುಗಳಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ ಐಲ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಮಧೂರು ರಾಧಾಕೃಷ್ಣ ನಾವಡ, ಜಗದಾಭಿರಾಮ ಪಡುಬಿದ್ರೆ, ಮರಕ್ಕಡ ಲಕ್ಷ್ಮಣ ಕುಮಾರ್, ಬಾಲಕೃಷ್ಣ ಸೀತಾಂಗೋಳಿ, ಪೆರುವೋಡಿ ಸುಬ್ರಹ್ಮಣ್ಯ ಭಟ್, ನೀಚರ್ಾಲು ಪ್ರಕಾಶ್ ನಾಯಕ್, ಗುಂಡಿಮಜಲು ಗೋಪಾಲ ಭಟ್, ಶಂಭಯ್ಯ ಭಟ್ ಕಂಜರ್ಪಣೆ, ಶರತ್ ಶೆಟ್ಟಿ ತೀರ್ಥಹಳ್ಳಿ, ಮಹೇಶ್ ಮಣಿಯಾಣಿ, ಶಶಿಕಿರಣ ಕಾವು ಹಾಗೂ ಅತಿಥಿ ಕಲಾವಿದರಾಗಿ ಪುತ್ತಿಗೆ ರಘುರಾಮ ಹೊಳ್ಳ, ಪ್ರಸಾದ ಬಲಿಪ, ಅಡೂರು ಲಕ್ಷ್ಮೀನಾರಾಯಣ, ಕೃಷ್ಣಪ್ರಕಾಶ್ ಉಳಿಯತ್ತಾಯ, ಸುಬ್ರಾಯ ಹೊಳ್ಳ ಕಾಸರಗೋಡು, ಪೆಮರ್ುದೆ ಜಯಪ್ರಕಾಶ ಶೆಟ್ಟಿ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ದೀಪಕ್ ರಾವ್ ಪೇಜಾವರ, ಚಂದ್ರಶೇಖರ ಧರ್ಮಸ್ಥಳ ಪಾಲ್ಗೊಳ್ಳಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries