HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಕಾರಡ್ಕ : ಕುಟುಂಬಶ್ರೀ ಮಳೆ ಬೆಳೆ ಕಾರ್ಯಕ್ರಮ
       ಮುಳ್ಳೇರಿಯ: ಕೃಷಿ ಮತ್ತು ಗ್ರಾಮೀಣ ಬದುಕಿನ ಮರಳಲು  ಹೊಸ ತಲೆಮಾರು ಉತ್ಸುಕವಾಗಿದೆ. ಆದರೆ ಅವರಿಗೆ ಬೇಕಾದ ಮಾರ್ಗದರ್ಶನ, ಧೈರ್ಯಗಳನ್ನು ಒದಗಿಸುವ ಪ್ರಯತ್ನಗಳಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಳೆ-ಬೆಳೆ ಕಾರ್ಯಕ್ರಮ ಉತ್ತಮ ಪ್ರಯತ್ನ ಎಂದು ಡಿವೈಎಸ್ಪಿ ಸುಕುಮಾರನ್.ಎನ್.ವಿ ತಿಳಿಸಿದರು.
    ಕಾರಡ್ಕ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್, ಎಂಕೆಎಸ್ಪಿ ಮತ್ತು ಕೃಷಿಭವನದ ಆಶ್ರಯದಲ್ಲಿ ಬುಧವಾರ ಕಾನಕ್ಕೋಡು ಕೊಳ್ಳಾಡಿ ಭತ್ತದ ಗದ್ದೆಯಲ್ಲಿ ಆಯೋಜಿಸಿಲಾದ ಮಳೆ ಬೆಳೆ ಉತ್ಸವ 2018 ಉದ್ಘಾಟಿಸಿ ಅವರು ಮಾತನಾಡಿದರು.
  ಸಾತ್ವಿಕ ಮನೋಸ್ಥಿತಿಯ ಕೃಷಿ ಬದುಕು ಕೋಟಿ ಜನರಿಗೆ ಆಹಾರ-ಬದುಕು ನೀಡುತ್ತದೆ. ನಮ್ಮ ಪರಂಪರೆಯನ್ನು ಗೌರವಿಸುವ, ಆ ಬಗ್ಗೆ ಒಲವು ಮೂಡಿಸುವ ಕಾರ್ಯಕ್ರಮಗಳು ನಿತ್ಯೋತ್ಸವಗಳಂತೆ ಆಗಬೇಕು ಎಂದು ಅವರು ಈ ಸಂದರ್ಭ ಕರೆನೀಡಿದರು. ಪ್ರಕೃತಿ ಮತ್ತು ಜನಜೀವನ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ಪರಸ್ಪರ ಒಂದಾಗುವಿಕೆಯೊಂದಿಗೆ ಸುಖೀ ಜೀವನ ನಡೆಸುವಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದು ಕರೆನೀಡಿದರು.
  ಕಾರಡ್ಕ ಪಂಚಾಯಿತಿ ಅಧ್ಯಕ್ಷೆ  ಸ್ವಪ್ನ.ಜಿ ಅಧ್ಯಕ್ಷತೆ ವಹಿಸಿದರು. ಡಿಎಂಸಿ ಜಿಲ್ಲಾ ಮಿಶನ್ನ ಟಿ.ಟಿ.ಸುರೇಂದ್ರನ್ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಾಲಕೃಷ್ಣ,  ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಉಷಾ, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾದೇವಿ, ಜನನಿ, ವಿಜಯ ಕುಮಾರ್, ಬ್ಲಾಕ್ ಪಂಚಾಯಿತಿ ಸದಸ್ಯ ವಾರಿಜಾಕ್ಷನ್, ಶ್ರೀಧರ ಬೆಳ್ಳೂರು, ಸುಂದರ ಮವ್ವಾರು,  ಪಂಚಾಯಿತಿ ಸದಸ್ಯ ಬಾಲಕೃಷ್ಣ, ಅನಸೂಯ ರೈ, ಶ್ರೀವಿದ್ಯಾ, ಮುಹಮ್ಮದ್, ಸೌದಾಬಿ,  ತಸ್ನಿ, ಸ್ಮಿತಾ, ಸುಜಲ, ತಂಬಾನ್, ವಿನೋದನ್ ನಂಬ್ಯಾರ್, ಪಂಚಾಯಿತಿ ಕಾರ್ಯದಶರ್ಿ ದೇವದಾಸ್, ಕೃಷಿ ಅಧಿಕಾರಿ ಬಿಂದು, ಬೈಜು, ರಮ್ಯಾ, ಶಾಂತಾ ಕುಮಾರಿ, ಪದ್ಮಾವತಿ ಮೊದಲಾದವರು ಉಪಸ್ಥಿತರಿದ್ದರು.
    ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಗೀತಾ ದಾಮೋದರನ್ ಸ್ವಾಗತಿಸಿ, ಸಿಡಿಎಸ್ ಸದಸ್ಯ ಕಾರ್ಯದಶರ್ಿ ಬೇಬಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries