ಬೆಳ್ಳೂರು ಶಾಲೆಯಲ್ಲಿ ಆರೋಗ್ಯ ಸಂರಕ್ಷಣಾ ತರಗತಿ
ಮುಳ್ಳೇರಿಯ:ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಪುಟಾಣಿಗಳಿಗೆ ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗುರುವಾರ ಆರೋಗ್ಯ ಸಂರಕ್ಷಣಾ ತರಗತಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ವಾರಿಜಾ ನೇರೋಳು ಅವರು ಜೀವನದ ಯಶಸ್ಸಿನ ಹಿಂದೆ ಎಲ್ಲದಕಿಂತಲೂ ಪ್ರಮುಖವಾದುದು ನಿರೋಗಿಗಳಾಗಿ ಬದುಕುವುದಾಗಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜೀವನ ಶೈಲಿಯನ್ನು ಸಕಾರಾತ್ಮಕವಾಗಿ ರೂಪಿಸಬೇಕಿದ್ದು, ಈ ನಿಟ್ಟಿನ ಅರಿವು ಅಗತ್ಯ ಎಂದು ತಿಳಿಸಿದರು. ಶುಚಿತ್ವ, ಶುದ್ದ ಆಹಾರ ಸೇವನೆ ಮತ್ತು ಸತ್ ಚಿಂತನೆಯ ಮನೋಸ್ಥಿತಿಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬರೂ ಕಟಿಬದ್ದರಾಗಬೇಕೆಂದು ಅವರು ಕರೆನೀಡಿದರು.
ಬೆಳ್ಳೂರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹಜೀಶ್ ತರಗತಿ ನಡೆಸಿಕೊಟ್ಟರು. ನಾಲ್ಕನೇ ತರಗತಿ ವಿದ್ಯಾಥರ್ಿನಿ ಅತೀಕ್ಷಾ ಮತ್ತು ಬಳಗದವರು ಪ್ರಾಥರ್ಿಸಿದರು.ಹುದಾ ಫಾತಿಮಾ ಸ್ವಾಗತಿಸಿ, ಮೂರನೇ ತರಗತಿಯ ಶ್ರೀನಿತ್ಯಾ ವಂದಿಸಿದರು.ನಾಲ್ಕನೇ ತರಗತಿಯ ಸ್ವಸ್ತಿ ನಿರೂಪಿದರು.
ಹಿರಿಯ ಅಧ್ಯಾಪಕ ಕುಂಞಿರಾಮ ಮಣಿಯಾಣಿ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಮೋಹನನ್ ಒದೆಯೋತ್, ಕಿರಿಯ ಪ್ರಾಥಮಿಕ ವಿಭಾಗದ ಅಧ್ಯಾಪಕರಾದ ದಾಸಪ್ಪ, ಮಾಲತಿ ಉಪಸ್ಥಿತರಿದ್ದರು. ಅಧ್ಯಾಪಕರು ಸಹಕರಿಸಿದರು.