HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸವಿತಾ ರೈ ನೆರವಿಗೆ ಮುಂದಾದ ಜಿಲ್ಲಾ  ಬಿಜೆಪಿ
    ಕಾಸರಗೋಡು: ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ  ಪಾಡಿ ನಿವಾಸಿ ಮಹಾಬಲ ರೈ ಮತ್ತು ಸುಮಿತ್ರಾ ದಂಪತಿಯ ಪುತ್ರಿ, ಕನ್ನಡ ಬಿಎ ಪದವೀಧರೆ ಸವಿತಾ ರೈ ಅವರು ಎದುರಿಸುತ್ತಿರುವ ಬಡತನ ಸಂಕಷ್ಟಕ್ಕೆ ಪರಿಹಾರವಾಗಿ ಆಕೆಗೆ ಸಹಾಯ ಒದಗಿಸಲು ಬಿಜೆಪಿ ಕಾಸರಗೋಡು ಜಿಲ್ಲಾ  ಸಮಿತಿ, ಪಕ್ಷದ ಕಾರ್ಯಕರ್ತರು ಮತ್ತು  ಇತರ ಕೊಡುಗೈದಾನಿಗಳು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ  ಸಹಕಾರ ನೀಡುತ್ತಿದ್ದಾರೆ.
   ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಎನ್ಎಸ್ಎಸ್ ಘಟಕದೊಂದಿಗೆ ಕೈ  ಜೋಡಿಸಿ ಸವಿತಾರಿಗೆ ದ್ವಿಚಕ್ರ ವಾಹನವನ್ನು  ಬಿಜೆಪಿ ಕಾರ್ಯಕರ್ತರ ನೆರವಿನೊಂದಿಗೆ ಒದಗಿಸುವ ಭರವಸೆ ಕೊಡಲಾಗಿದೆ. ಸವಿತಾ ಅವರು ಕಾಲೇಜಿಗೆ ತೆರಳಲು ಬಸ್ ನಿಲ್ದಾಣಕ್ಕೆ ಮನೆಯಿಂದ ಕಿಲೋ ಮೀಟರ್ಗಳಷ್ಟು  ನಡೆದು ಕ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ  ಆಕೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಸಮಸ್ಯೆ ಆಗಬಾರದೆಂಬ ನಿರೀಕ್ಷೆಯೊಂದಿಗೆ ದ್ವಿಚಕ್ರ ವಾಹನ ದೊರಕಿಸುವ ಭರವಸೆಯನ್ನು  ಬಿಜೆಪಿ ಜಿಲ್ಲಾ  ಸಮಿತಿಯು ವ್ಯಕ್ತಪಡಿಸಿದೆ.
   ಸವಿತಾ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವಲೋಕನ ನಡೆಸಲು ಹಾಗೂ ಅವರಲ್ಲೇ ಸಮಗ್ರ ವಿಷಯ ತಿಳಿದುಕೊಳ್ಳಲು ಬಿಜೆಪಿ ಜಿಲ್ಲಾಧ್ಯಕ್ಷ, ಜಿಲ್ಲಾ  ಪಂಚಾಯತ್ ಸದಸ್ಯ ಹಾಗೂ ನ್ಯಾಯವಾದಿ ಕೆ.ಶ್ರೀಕಾಂತ್, ನಗರಸಭಾ ಕೌನ್ಸಿಲರ್ ಸವಿತಾ ಟೀಚರ್ ಅವರ ನೇತೃತ್ವದಲ್ಲಿ ಬಿಜೆಪಿ ನೇತಾರರು ಮತ್ತು  ಕಾರ್ಯಕರ್ತರ ತಂಡವು ಪಾಡಿಯಲ್ಲಿರುವ ಸವಿತಾ ಅವರ ಮನೆಯನ್ನು  ಸಂದಶರ್ಿಸಿ ಆಕೆ ಮತ್ತು  ಮನೆಯವರಿಂದ ಎಲ್ಲ  ಮಾಹಿತಿಗಳನ್ನು  ಸಂಗ್ರಹಿಸಿದೆ.
   ಈ ಸಂದರ್ಭದಲ್ಲಿ ಸವಿತಾರಿಗೆ ದ್ವಿಚಕ್ರ ವಾಹನ ನೆರವು ನೀಡುವ ಭರವಸೆಯನ್ನು  ಕೆ.ಶ್ರೀಕಾಂತ್ ತಿಳಿಸಿದರು. ಕನ್ನಡ ಬಿಎ ಪದವೀಧರೆಯಾದ ಸವಿತಾ ಅವರು ಕಣ್ಣೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ  ತೃತೀಯ ಸ್ಥಾನ ಪಡೆದಿದ್ದರು. ಸ್ನಾತಕೋತ್ತರ ಪದವಿ ಗಳಿಸಿ ಉನ್ನತ ವಿದ್ಯಾಭ್ಯಾಸದೊಂದಿಗೆ ಉಪನ್ಯಾಸಕಿ ಆಗಬೇಕೆಂಬುದು ಆಕೆಯ ಬಹುದಿನಗಳ ಕನಸಾಗಿದೆ. ಆದರೆ ಯಾವುದೇ ಸೌಕರ್ಯಗಳಿಲ್ಲದ ಜೋಪಡಿಯಂತಹ ಮನೆಯಲ್ಲಿ  ಸವಿತಾ ಮತ್ತು  ಮನೆಯವರು ವಾಸವಾಗಿದ್ದಾರೆ.
   30 ವರ್ಷಕ್ಕಿಂತಲೂ ಹಳೆಯದಾದ ಈ ಮನೆಯ ಗೋಡೆಯನ್ನು  ಮಣ್ಣಿನಿಂದ ನಿಮರ್ಿಸಲಾಗಿದೆ. ಮಳೆನೀರು ಸೋರಿ ಗೋಡೆ ಕರಗಿ ಜರಿದು ಬಿದ್ದಿದೆ. ಮನೆಯ ಛಾವಣಿಗೆ ಪಕ್ಕಾಸುಗಳೂ ಇಲ್ಲ. ಸೋಗೆಯಿಂದ ಛಾವಣಿ ನಿಮರ್ಿಸಲಾಗಿದೆ. ಮಳೆನೀರು ಸೋರದಿರಲು ಅದರ ಮೇಲೆ ಟಪರ್ಾಲು ಹೊದಿಸಲಾಗಿದೆ. ಮಳೆ ಆರಂಭಗೊಂಡ ಬಳಿಕ ಈ ಮನೆ ಸಂಪೂರ್ಣ ಸೋರತೊಡಗಿದೆ. ಅದರಿಂದಾಗಿ ರಾತ್ರಿ ಮಲಗಲೂ ಸಾಧ್ಯವಾಗದ ದುಸ್ಥಿತಿ ತಲೆದೋರಿದೆ.
   ಮನೆ ಯಾವುದೇ ಕ್ಷಣದಲ್ಲೂ  ಧರಾಶಾಹಿಯಾಗುವ ಹಂತದಲ್ಲಿದೆ. ಸವಿತಾರ ಸಹೋದರಿಯ ಮದುವೆಗಾಗಿ ಬ್ಯಾಂಕ್ನಿಂದ ಪಡೆದ ಒಂದು ಲಕ್ಷ  ರೂ. ಸಾಲ ಮರು ಪಾವತಿಸಲೂ ಇನ್ನೊಂದೆಡೆ ಬಾಕಿಯಿದೆ. ತಂದೆ ಮಾಡುವ ಕೃಷಿ ಕೆಲಸ ಮತ್ತು  ತಾಯಿ ಬೀಡಿ ಕಟ್ಟಿ ಲಭಿಸುವ ಸಂಪಾದನೆ ಮಾತ್ರವೇ ಈ ಬಡ ಕುಟುಂಬದ ಆಥರ್ಿಕ ಆಶ್ರಯವಾಗಿದೆ. ಇದೀಗ ಬಿಜೆಪಿ ಜಿಲ್ಲಾ  ಸಮಿತಿ, ಪಕ್ಷದ ಕಾರ್ಯಕರ್ತರು ಸೇರಿದಂತೆ ವಿವಿಧ ವಲಯಗಳ ಉದಾರ ದಾನಿಗಳು ಸವಿತಾರಿಗೆ ಈಗ ಸಹಾಯಹಸ್ತದೊಂದಿಗೆ ಮುಂದೆ ಬಂದಿದ್ದಾರೆ.
    ಏನಂತಾರೆ:
   ಶೈಕ್ಷಣಿಕ ಬದುಕಿಗೆ ಸಹಕಾರ : ಚೆಂಗಳದ ಪಾಡಿ ಮಹಾಬಲ ರೈ ಮತ್ತು  ಸುಮಿತ್ರಾ ದಂಪತಿಯ ಪುತ್ರಿ ಸವಿತಾ ರೈ ಅವರು ಉತ್ತಮ ಶಿಕ್ಷಣ ಪಡೆಯುವ ತವಕದಲ್ಲಿದ್ದಾರೆ. ಅಲ್ಲದೆ ಉಪನ್ಯಾಸಕಿಯಾಗುವ ಕನಸು ಕಂಡಿದ್ದಾರೆ. ಈ ನಿಟ್ಟಿನಲ್ಲಿ  ಅವರಿಗೆ ಸಹಕಾರವಾಗಲೆಂದು ಕಾಲೇಜಿಗೆ ಮತ್ತು  ಉನ್ನತ ವಿದ್ಯಾಭ್ಯಾಸಕ್ಕೆ ವಿವಿಧೆಡೆಗಳಿಗೆ ತೆರಳಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ದ್ವಿಚಕ್ರ ವಾಹನದ ಭರವಸೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ  ಪಕ್ಷದ ಕಾರ್ಯಕರ್ತರ ಸಹಕಾರದೊಂದಿಗೆ ಭರವಸೆಯನ್ನು  ಆದಷ್ಟು  ಬೇಗನೆ ಪೂರೈಸಲಾಗುವುದು. ಅವರ ನೂತನ ಮನೆ ನಿಮರ್ಾಣದ ಕೆಲಸವನ್ನು  ಸಂಘಟನೆಯೊಂದರ ನೇತೃತ್ವದಲ್ಲಿ  ಮಾಡಲಾಗುತ್ತಿದೆ. ಆದ್ದರಿಂದ ಶೈಕ್ಷಣಿಕ ವಿಚಾರವಾಗಿ ಸಮಸ್ಯೆ ಆಗದಂತೆಯೂ ವಾಹನ ಒದಗಿಸುವ ಘೋಷಣೆ ಮಾಡಲಾಗಿದೆ.
            - ನ್ಯಾಯವಾದಿ ಕೆ.ಶ್ರೀಕಾಂತ್,
               ಅಧ್ಯಕ್ಷರು, ಬಿಜೆಪಿ ಜಿಲ್ಲಾ  ಸಮಿತಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries