HEALTH TIPS

No title

             ಗ್ರಾಮೀಣ ವಿದ್ಯಾಥರ್ಿಗಳ ಪ್ರತಿಭಾ ಅನಾವರಣಕ್ಕೆ ಶಿಕ್ಷಣ ಅವಕಾಶ ನೀಡಲಿ-ಭಾನುಮತಿ
    ಕುಂಡಂಗುಳಿ: ಕುಂಡಂಗುಳಿಯಂತಹ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಸಾಹಿತ್ಯ ಸಭೆಯಂತಹ ವೇದಿಕೆಯು ಬೆಳವಣಿಗೆಗೆ ಪೂರಕವಾಗಿದೆ ಎಂದು ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯೆ ಭಾನುಮತಿ ಹೇಳಿದರು.
   ಅವರು ಕುಂಡಂಗುಳಿ ಸರಕಾರಿ ಪ್ರೌಢಶಾಲೆಯ ಕನ್ನಡ ವಿಭಾಗದ ವಾರದ ಸಾಹಿತ್ಯ ಸಭೆ "ಪ್ರತಿಭಾ ದರ್ಶನ"ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
  ಗ್ರಾಮೀಣ ಪ್ರದೇಶಗಳ ವಿದ್ಯಾಥರ್ಿಗಳಲ್ಲಿ ಇತರೆರಡೆಗಳಿಗಿಂತ ಹೆಚ್ಚಿನ ಭಾಷಾ ಪ್ರೇಮ, ವಿಶೇಷ ಪ್ರತಿಭೆಗಳು ಸುಪ್ತವಾಗಿರುತ್ತದೆ. ಆದರೆ ಅವನ್ನು ಬೆಳಕಿಗೆ ತರುವ ಯತ್ನಗಳು ಆಗಬೇಕು ಎಂದು ತಿಳಿಸಿದ ಅವರು, ಶಾಲಾ ಶಿಕ್ಷಣ ಕೇವಲ ಪಠ್ಯಗಳಿಗೆ ಮಾತ್ರ ಸೀಮಿತವಾಗಿರದೆ ಅಡಗಿರುವ ಪ್ರತಿಭಾ ಅನಾವರಣಕ್ಕೆ ವಿಸ್ತರಿಸಲ್ಪಡಲಿ ಎಂದು ಅವರು ಕರೆನೀಡಿದರು. 
   ಮನೋರಮಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಾಥಮಿಕ ಕನ್ನಡ ವಿದ್ಯಾಥರ್ಿಗಳು ತಯಾರಿಸಿದ ಕ್ರಿಯಾತ್ಮಕ ಜನರೇಟರ್ ಈ ಬಾರಿಯ ಪ್ರತಿಭಾ ದರ್ಶನದ ವಿಶೇಷತೆಯಾಗಿತ್ತು.  ವಿದ್ಯಾಥರ್ಿಗಳು ವರದಿವಾಚನ, ಸಮೂಹಗಾನ, ರಸಪ್ರಶ್ನೆ, ಜನಪದ ಗೀತೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದರು.
  ವಿದ್ಯಾಥರ್ಿಗಳಾದ ಸ್ವಸ್ತಿಕ್ ಸ್ವಾಗತಿಸಿ, ಯತಿನ್ ವಂದಿಸಿದರು.ಅಶ್ವಿತಾ ನಿರೂಪಿಸಿದಳು. ಅಧ್ಯಾಪಕರಾದ ಶ್ರೀಶ ಪಂಜಿತ್ತಡ್ಕ, ಪ್ರೀತಾ, ಶಶಿಕಲಾ, ಸವಿತಾ, ಶಶಿಕಲಾ ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries