HEALTH TIPS

No title

                   ಸಾಮಾಜಿಕ ಮಾಧ್ಯಮ ಉಸ್ತುವಾರಿ ಕೇಂದ್ರ ಸ್ಥಾಪನೆಗೆ 'ಸುಪ್ರೀಂ' ಆಕ್ಷೇಪ
     ನವದೆಹಲಿ: ಆನ್ ಲೈನ್ ಅಂಕಿಅಂಶಗಳ ಮೇಲುಸ್ತುವಾರಿಗೆ ಸಾಮಾಜಿಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಧರ್ಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋಟರ್್, ಸದಾ ಕಣ್ಗಾವಲಿನ ಪರಿಸ್ಥಿತಿಯನ್ನು ನಿಮರ್ಾಣ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
    ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂತರ್ಿಗಳಾದ ಎ ಎಂ ಖನ್ವಿಲ್ಕರ್ ಮತ್ತು ಡಿ ವೈ ಚಂದ್ರಾಚೂಡ್ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಸಕರ್ಾರಕ್ಕೆ ಈ ಸಂಬಂಧ ನೊಟೀಸ್ ಕಳುಹಿಸಿ ಎರಡು ವಾರಗಳೊಳಗೆ ಉತ್ತರಿಸುವಂತೆ ಹೇಳಿದೆ. ಅಟೊನರ್ಿ ಜನರಲ್ ಕೆ ಕೆ ವೇಣುಗೋಪಾಲ್ ಈ ವಿಷಯದಲ್ಲಿ ಸಹಕರಿಸುವಂತೆ ಕೋಟರ್್ ಹೇಳಿದೆ. ತೃಣಮೂಲ ಕಾಂಗ್ರೆಸ್ ಶಾಸಕ ಮಹುವಾ ಮೊಯ್ಟ್ರಾ ಅವರು ಸಲ್ಲಿಸಿದ್ದ ಅಜರ್ಿಯನ್ನು ಪರಿಶೀಲಿಸಿದ ನ್ಯಾಯಾಲಯದ ವಿಭಾಗೀಯ ಪೀಠ ಹೀಗೆ ಹೇಳಿದೆ.
ಕೇಂದ್ರ ಸಕರ್ಾರ ಜನರ ವಾಟ್ಸಾಪ್ ಮೆಸೇಜ್ ಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಸಾಮಾಜಿಕ ಜಾಲತಾಣ ಕೇಂದ್ರವನ್ನು ಸ್ಥಾಪಿಸುವ ಕೇಂದ್ರ ಸಕರ್ಾರದ ಕ್ರಮ ಸದಾ ಕಣ್ಗಾವಲಿನ ಪರಿಸ್ಥಿತಿಯನ್ನು ನಿಮರ್ಾಣ ಮಾಡಿದಂತಾಗುತ್ತದೆ ಎಂದು ಸುಪ್ರೀಂ ಕೋಟರ್್ ಹೇಳಿದೆ.
   ಮೊಯ್ಟ್ರಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎ ಎಂ ಸಿಂಘ್ವಿ, ಸಕರ್ಾರ ಪ್ರಸ್ತಾವನೆಗೆ ಮನವಿ ಮಾಡಿದ್ದು ಆಗಸ್ಟ್ 20ಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ಸಾಮಾಜಿಕ ಮಾಧ್ಯಮ ಕೇಂದ್ರದ ಸಹಾಯದಿಂದ ಅದರಲ್ಲಿನ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸಕರ್ಾರ ಬಯಸುತ್ತದೆ ಎಂದು ವಾದ ಮಂಡಿಸಿದರು. ಮುಂದಿನ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಿ ಈ ವಾದದಲ್ಲಿ ಸಕರ್ಾರಿ ಪರ ವಕೀಲರು ಸಕರ್ಾರಕ್ಕೆ ಸಹಾಯ ಮಾಡಬಹುದು ಎಂದು ಹೇಳಿದೆ.
ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ವಿಷಯಗಳನ್ನು ಸಂಗ್ರಹಿಸಿ ವಿಶ್ಲೇಷಿಸುವ ಸೋಷಿಯಲ್ ಮೀಡಿಯಾ ಕಮ್ಯೂನಿಕೇಷನ್ ಹಬ್ ನ್ನು ಸ್ಥಾಪಿಸುವ ಕೇಂದ್ರ ಸಕರ್ಾರದ ನಿರ್ಣಯಕ್ಕೆ ತಡೆ ತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅಜರ್ಿಯ ತುತರ್ು ವಿಚಾರಣೆ ನಡೆಸಲು ಸುಪ್ರೀಂ ಕೋಟರ್್ ಜೂನ್ 18ರಂದು ನಿರಾಕರಿಸಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries