ವಿಹಿಂಪ, ಭಜರಂಗದಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ
ಬದಿಯಡ್ಕ : ಮಧ್ಯಪ್ರದೇಶದಲ್ಲಿ ಎಳೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆಗೈದ ಘಟನೆಯನ್ನು ಖಂಡಿಸಿ ಬದಿಯಡ್ಕದಲ್ಲಿ ವಿಶ್ವಹಿಂದೂಪರಿಷತ್, ಭಜರಂಗದಳದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ವಿ.ಹಿಂ.ಪ. ಬದಿಯಡ್ಕ ಪ್ರಖಂಡ ಅಧ್ಯಕ್ಷ ಕರಿಂಬಿಲ ಲಕ್ಷ್ಮಣ ಪ್ರಭು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಇಂತಹ ದುಷ್ಕೃತ್ಯವನ್ನು ಮಾಡಿದ ಮುಹಮ್ಮದ್ ಇಫರ್ಾನ್ನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಕ್ಕೆ ಅಗತ್ಯವುಳ್ಳ ಆಥರ್ಿಕ ಸಹಾಯವನ್ನು ಒದಗಿಸಬೇಕು. ಇಂತಹ ಕಾಮಾಂಧರಿಗೆ ಬೆಂಬಲ ಕೊಡುವ, ಆಥರ್ಿಕ ಸಹಾಯವನ್ನು ನೀಡಿ ಬೆಂಬಲಿಸುವ ದೇಶದ್ರೋಹಿ ಸಂಘಟನೆಗಳನ್ನು ಮಟ್ಟಹಾಕಬೇಕು ಎಂದು ಗುಡುಗಿದರು.
ನೇತಾರರಾದ ಅವಿನಾಶ ವಿ ರೈ ಬದಿಯಡ್ಕ, ಸುನಿಲ್ ಕುಮಾರ್ ಕಿನ್ನಿಮಾಣಿ, ಹರೀಶ ರೈ ಸ್ಕಂದ, ನ್ಯಾಯವಾದಿ ಗಣೇಶ್, ರೋಹಿತ್ ಬದಿಯಡ್ಕ, ವಿಶ್ವನಾಥ ಪ್ರಭು ಕರಿಂಬಿಲ, ರೂಪೇಶ್ ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.