HEALTH TIPS

No title

                  ಸಮಸ್ಯೆ ತಂದಿತ್ತ ಗೈಲ್- ಶೋಚನೀಯ ಕಾಲುದಾರಿ- ಸಂಚಾರ ಸಂಕಷ್ಟ
   ಉಪ್ಪಳ: ಮಂಗಲ್ಪಾಡಿ ಗ್ರಾಮ ಪಮಚಾಯತಿ ವ್ಯಾಪ್ತಿಯ ಐತಿಹಾಸಿಕ ಗ್ರಾಮ ಹೇರೂರು ಬಯಲು ಪ್ರದೇಶದ ಗದ್ದೆಗಳ ಕಟ್ಟಪುಣಿಗಳ ಶೋಚನೀಯಾವಸ್ಥೆಯಿಂದ ವಿದ್ಯಾಥರ್ಿಗಳ ಸಹಿತ ನೂರಾರು ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಪರಿಸರದಲ್ಲಿ ಹಾದುಹೋಗುವ ಗೈಲ್ ಪೈಫ್ಲೈನಿಗಾಗಿ ಕಟ್ಟಪುಣಿಗಳನ್ನು ಕೊಚ್ಚಿ ಹಾಳುಗೆಡವಿದ್ದರಿಂದ ಕಟ್ಟಪುಣಿಗಳಿಲ್ಲದೆ ತೀವ್ರ ಸಮಸ್ಯೆಯೆದುರಾಗಿದೆ.
  ಹೇರೂರು ಬಳಿಯ ಮಯ್ಯರಮೂಲೆ, ಕಳಾಯಿ,ಪಾದೆ, ಪಾಂಡಿಬೈಲು ಪರಿಸರದಲ್ಲಿ ಸುಮಾರು 400 ರಷ್ಟು ಕುಟುಂಬಗಳು ವಾಸಿಸುತ್ತಿವೆ. ಈ ಪರಿಸರದ ಸುಮಾರು 400 ರಷ್ಟು ವಿದ್ಯಾಥರ್ಿಗಳು ದಿನನಿತ್ಯ ಮೀಪಿರಿ, ಕುಬಣೂರು, ಧರ್ಮತ್ತಡ್ಕ, ಕಯ್ಯಾರು ಶಾಲೆಗಳಿಗೆ ಇದೇ ಹಾದಿಯ ದುರ್ಗಮತೆಯ ಮಧ್ಯೆ ಓಲಾಡುತ್ತಾ, ತೇಲಾಡುತ್ತ ಸಂಚರಿಸಬೇಕಾಗಿದೆ. ವಿದ್ಯಾಥರ್ಿಗಳ ಸಮವಸ್ತ್ರ ಈ ದಾರಿಯ ಅಸಮರ್ಪಕತೆಯಿಂದ ಕೊಳೆಯಾಗುತ್ತಿದ್ದು, ಶಾಲೆಗಳಲ್ಲಿ ಈ ಬಗ್ಗೆ ಅಹಿತಕರ ಮಾತುಗಳೂ ಕೇಳಿಬಂದಿದೆ ಎಂದು ವಿದ್ಯಾಥರ್ಿಗಳು ಅವಲತ್ತುಕೊಂಡಿದ್ದಾರೆ. ಗದ್ದೆಯ ಹೊರತಾದ ಬಿ.ಸಿ ರೋಡು ಮೂಲಕ ವಾಹನಕ್ಕೆ ತೆರಳಬಹುದಾಗಿದ್ದರೂ ಈ ಹಾದಿ ಸುಮಾರು 4 ಕಿಲೋಮೀಟರ್ ಸುತ್ತುಬಳಸಿಯಾಗಿರುವುದೂ ಸಮಸ್ಯೆಯಾಗಿದೆ.
   ಹೇರೂರು ಪರಿಸರದಲ್ಲಿ 100 ಎಕ್ರೆಗಳಿಗಿಂತಲೂ ಹೆಚ್ಚಿನ ಗದ್ದೆಗಳಲ್ಲಿ ಸಾಂಪ್ರದಾಯಿಕ ಭತ್ತದ ಬೇಸಾಯ ನಡೆಸುತ್ತಿದ್ದು, ಆದರೆ ಈ ಬಾರಿ ಗೈಲ್ ಯೋಜನೆಯ ಅವಾಂತರದಿಂದಾಗಿ ಸಾಗುವಳಿಯನ್ನೂ ಮಾಡದ ಸ್ಥಿತಿ ನಿಮರ್ಾಣವಾಗಿದೆ. ಸಾರ್ವಜನಿಕರಿಗೆ ಎದುರಾಗಿರುವ ಸಮಸ್ಯೆಯಿಂದ ಬೇಸತ್ತು ಇದೀಗ ಜನರು ಕ್ರಿಯಾ ಸಮಿತಿ ರಚಿಸಿ ಹೋರಾಟದ ಹಾದಿ ಹಿಡಿಯುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಸಂಬಂಧಪಟ್ಟವರು ಗದ್ದೆಗೆ ಕಟ್ಟಪುಣಿಗಳನ್ನು ನಿಮರ್ಿಸಿ ಕನಿಷ್ಠ ನಡೆದಾಡಲಾದರೂ ಅವಕಾಶ ನೀಡಬೇಕೆಂದು ಗ್ರಾಮಸ್ಥರು ವಿನಂತಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries