ಸ್ವರ್ಗ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ
ಪೆರ್ಲ:ಸ್ವರ್ಗ ಸ್ವಾಮೀ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾ ಸಭೆ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷ ಶ್ಯಾಮಪ್ರಕಾಶ್ ನೇರೋಳು ಅಧ್ಯಕ್ಷತೆ ವಹಿಸಿ ಮಕ್ಕಳ ಕಲಿಕೆಯಲ್ಲಿ ರಕ್ಷಕರ ಕರ್ತವ್ಯವನ್ನು ಸರಿಯಾಗಿ ಪಾಲಿಸಿಕೊಂಡು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಲು ಶ್ರಮಿಸೋಣ ಎಂದರು. 2018-19ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ಅನುಷ್ಠಾನ ಗೊಳಿಸುತ್ತಿರುವ ವಿವಿಧ ಯೋಜನೆಗಳ ಸ್ಥಿತಿಗತಿಗಳ ಅವಲೋಕನ ಹಾಗೂ ಲೆಕ್ಕಪತ್ರಗಳ ವರದಿಯನ್ನು ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಯವರು ವಾಚಿಸಿದರು. ಶೈಕ್ಷಣಿಕ ವರ್ಷದಲ್ಲಿ ಕೈಗೊಳ್ಳಲಿರುವ ಚಟುವಟಿಕೆಗಳ ವಿವರವನ್ನು ಶಿಕ್ಷಕ ಪದ್ಮನಾಭ ಆರ್.ರೈ ತಿಳಿಸಿದರು. ಶಿಕ್ಷಕ ವೆಂಕಟ ವಿದ್ಯಾಸಾಗರ್ ಸ್ವಾಗತಿಸಿ, ಶಿಕ್ಷಕ ಸಚ್ಚಿದಾನಂದ ಮುಗೇರು ವಂದಿಸಿದರು. ಶಿಕ್ಷಕಿ ಗೀತಾಂಜಲಿ ಪ್ರಾಥರ್ಿಸಿ, ಕಲಾವತಿ ಕಾರ್ಯಕ್ರಮ ನಿರೂಪಿಸಿದರು.