HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಜಿಲ್ಲಾಧಿಕಾರಿ ಕಚೇರಿ  ದಿಗ್ಭಂಧನ ಚಳುವಳಿ ನಡೆಸಿದ ಕನ್ನಡಿಗರ ಬಂಧನಕ್ಕೆ ವಾರಂಟ್!
          ಮೌನವಾದ ಸಂಘಟನೆಗಳು; ನಾಲ್ವರಿಗೆ ನ್ಯಾಯಾಲಯದ ಜಾಮೀನು; ಕೆಲವರಿಂದ ದಂಡ ಪಾವತಿ
     ಕುಂಬಳೆ: ಕೇರಳದ ಶಿಕ್ಷಣ ಸಂಸ್ಥೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸಿರುವುದನ್ನು ಪ್ರತಿಭಟಿಸಿ ಕನ್ನಡಿಗರು ನಡೆಸುತ್ತಿರುವ ಆಂದೋಲನದ ದಿಕ್ಕುಗೆಡಿಸಿ, ಚಳುವಳಿಯ ಕಾವನ್ನು ಸಮಗ್ರ ಕುಗ್ಗಿಸಲು ಸರಕಾರ ಮುಂದಾಗಿದೆ. ಕನ್ನಡಿಗರ ಹೋರಾಟದಂಗವಾಗಿ ಕಳೆದ ವರ್ಷ ನಡೆದ ಜಿಲ್ಲಾಡಳಿತ ಕೇಂದ್ರ ದಿಗ್ಭಂಧನ ಚಳುವಳಿಯಲ್ಲಿ ಪಾಲ್ಗೊಂಡವರು ಸಾವಿರಾರು ಮಂದಿಗಳಿದ್ದರೂ, ಕೆಲವರ ಮೇಲಷ್ಟೇ ಕೇಸು ದಾಖಲಿಸಿ ಇದೀಗ ಬಂಧನ ವಾರಂಟ್ ಹೊರಡಿಸಿದೆ. ಪ್ರಮುಖ ನಾಯಕರೂ ಒಳಗೊಂಡಂತೆ ಕನ್ನಡಾಭಿಮಾನದ ಹೆಸರಲ್ಲಿ ಚಳುವಳಿಯಲ್ಲಿ ಪಾಲ್ಗೊಂಡ ಕೆಲ ಗ್ರಾಮೀಣ ಕನ್ನಡಿಗರೂ ಸೇರಿದಂತೆ ಕೆಲವರು ಬಂಧನ ಭೀತಿ ಮತ್ತು ಕೋಟರ್ಿಗೆ ಅಲೆಯುವ ಸಮಸ್ಯೆಯಿಂದ ಪಾರಾಗಲು ಈಗಾಗಲೇ ಕೋಟರ್ಿನಲ್ಲಿ ದಂಡ ಪಾವತಿಸಿ ಕೇಸಿನಿಂತ ಮುಕ್ತರಾಗಿದ್ದಾರೆ. ಮೊದಲ ಸರದಿಯಲ್ಲಿ 13ಮಂದಿಗಳ ವಿರುದ್ಧ ಕೇಸು ದಾಖಲಿಸಿ, ದಂಡ ಪಾವತಿಸದ ಕಾರಣ ವಾರಂಟ್ ಹೊರಡಿಸಲಾಗಿದ್ದು, ಈ ಪೈಕಿ ಪ್ರಪ್ರಥಮವಾಗಿ ನಾಲ್ವರು ಚಳುವಳಿಗಾರರು ಪ್ರಥಮ ದಜರ್ೆ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದಾರೆ.
    ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, 'ಕಣಿಪುರ' ಸಂಪಾದಕ, ಹಿರಿಯ  ಪತ್ರಕರ್ತ ಎಂ.ನಾ. ಚಂಬಲ್ತಿಮಾರ್, ಕನರ್ಾಟಕ ಕೊಂಕಣಿ ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು ಕುಂಬಳೆ, ಕುಂಬಳೆ ಗ್ರಾ. ಪಂ ಸದಸ್ಯ ರಮೇಶ್ ಭಟ್ ಕುಂಬ್ಳೆ ಇವರು ಜಾಮೀನು ಪಡೆದು, ಕನ್ನಡಕ್ಕಾಗಿ ಹೋರಾಡಿದ್ದಕ್ಕೆ ದಂಡ ಪಾವತಿಸದಿರಲು ನಿರ್ಧರಿಸಿದ್ದಾರೆ.
    ಜಿಲ್ಲಾಡಳಿತ ಕೇಂದ್ರವನ್ನು ಒಂದಿಡೀ ದಿನ ಸ್ತಬ್ಧ ಗೊಳಿಸಿದ ಕನ್ನಡಿಗರ ಚಳುವಳಿಯನ್ನು ಪೋಲೀಸರು ವಿಡಿಯೋ ದಾಖಲಿಸಿದ್ದು, ಆ ಮೂಲಕ ಗುರುತಿಸಲ್ಪಟ್ಟ ಆಯ್ದ ಕೆಲವರ ಮೇಲಷ್ಟೇ ಕೇಸುದಾಖಲಿಸಲಾಗಿದೆ. ಆದರೆ ಚಳುವಳಿಗೆ ಕರೆಕೊಟ್ಟ ಸಂಘಟನಾ ಪದಾಧಿಕಾರಿಗಳು, ಬೆಂಬಲ ಪ್ರಕಟಿಸಿದ ಸಂಘಟನಾ ಮುಖ್ಯಸ್ಥರು ಪ್ರಸ್ತುತ ಕೇಸಿನಲ್ಲಿ ಸಿಲುಕದೇ ಪಾರಾಗಿದ್ದಾರೆ. ಪ್ರಸ್ತುತ ಕೇಸಿನಲ್ಲಿ ಸಿಲುಕಿರುವ ಕನ್ನಡಿಗರ ಪರವಾಗಿ ಈ ತನಕ ಯಾವೊಂದು ಕನ್ನಡ ಸಂಘಟನೆಗಳೂ ಬೆಂಬಲಕ್ಕೆ, ಸಹಾಯಕ್ಕೆ ಬಾರದೇ ಇರುವುದು ಕನ್ನಡಿಗರ ಹೋರಾಟದ ಔಚಿತ್ಯವನ್ನೇ ಪ್ರಶ್ನಿಸುವಂತೆ ಮಾಡಿದೆಯಲ್ಲದೇ ಜಾಲ ತಾಣಗಳಲ್ಲಿ ಚಚರ್ೆಯೂ ನಡೆಯತೊಡಗಿದೆ.
  ಕನ್ನಡಿಗರ ಚಳುವಳಿಯಲ್ಲಿ ಪಾಲ್ಗೊಂಡು ಕೇಸು ಹಾಕಲ್ಪಟ್ಟಾಗ ಕೇಸಿನಲ್ಲಿರುವವರಿಗೆ ಸಂಘನೆಗಳ ಬೆಂಬಲಗಳು ಸಿಗದೇ ಇರುವುದರಿಂದ ಅನೇಕರು ಹತಾಶರಾಗಿದ್ದಾರೆ. ಈ ಬೆಳವಣಿಗೆಯಿಂದಾಗಿ ಮುಂದಕ್ಕೆ ಕನ್ನಡಿಗರ ಚಳುವಳಿಗೆ ಕನ್ನಡಿಗರೇ ಬಾರದಿರುವ ಪರಿಸ್ಥಿತಿ ನಿಮರ್ಾಣವಾಗಲಿದೆ ಎಂಬುದಂತೂ ನಿಶ್ಚಿತ. ಈ ಕಾರಣದಿಂದಲೇ ಕೇಸಿಗೊಳಪಟ್ಟ ಗ್ರಾಮೀಣ ಕನ್ನಡಿಗರು ಸಮಸ್ಯೆಯಿಂದ ಪಾರಾಗಲು ತಾವೇ 6ಸಾವಿರ ರೂಪಾಯಿ ದಂಡ ತೆತ್ತು ಕೇಸಿನಿಂದ ಮುಕ್ತರಾಗಿದ್ದಾರೆ. ಕನ್ನಡ ವಿದ್ಯಾಥರ್ಿಗಳ ಹಿತಾಸಕ್ತಿಗಾಗಿ, ಕನ್ನಡ ಅಭಿಮಾನದ ಹೆಸರಲ್ಲಿ ಚಳುವಳಿಯಲ್ಲಿ ಪಾಲ್ಗೊಂಡದಕ್ಕೆ ಈ ಪರಿಸ್ಥಿತಿಯಾದರೆ ಮುಂದಕ್ಕೆ ಕನ್ನಡ ಚಳುವಳಿಗೆ ಉತ್ಸಾಹದಿಂದ ಬರುವವರು ಎಷ್ಟು ಮಂದಿಗಳಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಈಗಾಗಲೇ ಚಚರ್ೆ ಎದ್ದಿದೆ. ಕನ್ನಡ ಹೋರಾಟದ ಸಂದರ್ಭದಲ್ಲಿ ಬೆಂಬಲ ಘೋಷಿಸಿದ ಹಲವು ಸಂಘಟನೆಗಳಿದ್ದರೂ ಅವರ್ಯಾರೂ ಪ್ರಸ್ತುತ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸಂದೇಹಕ್ಕೆ ಕಾರಣವಾಗಿದೆ.
   ಕಾನೂನು ವಿಧೇಯ ಜಿಲ್ಲಾಡಳಿತ ಕೇಂದ್ರವನ್ನು ಸ್ತಬ್ಧಗೊಳಿಸಿರುವುದೇನೋ ಅಪರಾಧ. ಆದರೆ ಅದು ಸಾವಿರಾರು ಕನ್ನಡಿಗರ ಹೋರಾಟದಿಂದಾಗಿ ನಡೆದದ್ದು. ಅಲ್ಲದೇ ಇದಕ್ಕೆ ಅನೇಕ ಕನ್ನಡ ಸಂಘಟನೆಗಳು ನೇತೃತ್ವ ನೀಡಿವೆ. ಈ ಹಿನ್ನೆಲೆಯಲ್ಲಿ ಚಳುವಳಿಗೆ ನೇತೃತ್ವ ನೀಡಿದ ಸಂಘಟನಾ ಪದಾಧಿಕಾರಿಗಳ ಮೇಲೆ ಕೇಸುಹಾಕಬೇಕಾಗಿದ್ದ ಪೋಲೀಸರು, ಯಾವುದೇ ಕನ್ನಡ ಸಂಘಟನಾ ಪದಾಧಿಕಾರಿಗಳಲ್ಲದವರ ಮೇಲೆ ಕೇಸು ಹಾಕಿರುವುದು ಸಂದೇಹಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಕೇಂದ್ರವನ್ನು ಚಳುವಳಿಗಳ ಅಂಗವಾಗಿ ಸ್ತಬ್ಧಗೊಳಿಸಿರುವುದು ಕೇರಳದಲ್ಲಿ ಇದೇ ಮೊದಲೇನಲ್ಲ. ವರ್ಷಂಪ್ರತಿ ಹತ್ತಾರು ರಾಜಕೀಯ ಸಂಘಟನೆಗಳಿಂದ ಈ ರೀತಿಯ ಚಳುವಳಿಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಪೋಲೀಸರು ಕೇಸು ಹಾಕಿದಾಗ ಸಂಘಟನೆಗಳೇ ಕೇಸಿನ ಜವಾಬ್ದಾರಿಯನ್ನು ತೆಗೆಯುವುದು ರೂಢಿ. ಆದರೆ ಕನ್ನಡಿಗರ ಚಳುವಳಿಯ ಮೇಲೆ ಕೇಸು ಹಾಕಲ್ಪಟ್ಟಾಗ ಕನ್ನಡ ಸಂಘಟನೆಗಳು ಮೌನವಾಗಿರುವುದು ಸರಕಾರದ ಪಾಲಿಗೆ ಅಗತ್ಯವಾಗಿದೆ. ಈ ಮೂಲಕ ಕನ್ನಡಿಗರ ಹೋರಾಟದ ಕೆಚ್ಚನ್ನು, ಕಾವನ್ನು ನಿಷ್ಕ್ರಿಯಗೊಳಿಸಲು ಸುಲಭ ಸಾಧ್ಯವಾಗಿದೆ.
ಪ್ರಸ್ತುತ ಜಾಮೀನು ಪಡೆದ ನಾಲ್ವರು ಕೂಡಾ ಕೇಸಿಗಂಜದೇ, ಹೋರಾಟಕ್ಕೆ ಸ್ವತಂತ್ರವಾಗಿಯೇ ನಿರ್ಧರಿಸಿದ್ದಾರೆ. ಕನ್ನಡ ಪರ ಹೋರಾಟದಲ್ಲಿ ಕೇಸು ಹಾಕಿ, ಜೈಲಿಗಟ್ಟದರೂ ಅಂಜದೇ ಜಿಲ್ಲೆಯ ಸಾವಿರಾರು ವಿದ್ಯಾಥರ್ಿಗಳ ಹಿತಾಸಕ್ತಿಗಾಗಿ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಪ್ರಥಮ ದಜರ್ೆ ನ್ಯಾಯಾಲಯದಲ್ಲಿ ಚಳುವಳಿಗಾರರ ಪರವಾಗಿ ನ್ಯಾಯವಾದಿ ಬಳ್ಳಕ್ಕುರಾಯರ ಜೂನಿಯರ್ ವಕೀಲರಾದ ಸೌಮ್ಯ ವಾದಿಸಿದ್ದರು.
          ಸಂಘಟನೆಗಳೇ ಎಚ್ಚೆತ್ತು ಸ್ಪಂದಿಸುವುದಿಲ್ಲವೇ?
   ಸಭೆ, ಸಮಾರಂಭಗಳನ್ನು ನಡೆಸಿ ಅದನ್ನೇ ಕನ್ನಡ ಹೋರಾಟವೆಂದು ಬಿಂಬಿಸುವ ಜಿಲ್ಲೆಯ ಕನ್ನಡ ಪರ ಸಂಘಟನೆಗಳು ಪ್ರಸ್ತುತ ಎಚ್ಚೆತ್ತು ಕಾರ್ಯನಿರ್ವಹಿಸಬೇಕಾಗಿದೆ. ಚಳುವಳಿಯಲ್ಲಿ ಪಾಲ್ಗೊಂಡು ಕೇಸಿನಲ್ಲಿ ಸಿಲುಕಿರುವ ಸಮಗ್ರ ಹೋರಾಟಗಾರರ ಪರವಾಗಿ ಬೆಂಬಲನೀಡಿ ಸ್ಪಂದಿಸಬೇಕಾಗಿದೆ. ಕೇಸು ಹಾಕಿ ವರ್ಷ ಸಂದರೂ, ಇದೀಗ ವಾರಂಟ್ ಬರಲಾರಂಭಿಸಿದ ಕಾರಣ ಪರಿಸ್ಥಿತಿ ಬಿಗಡಾಯಿಸಿದೆ. ಕೇಸಿಗೆ ಸಿಲುಕಿದವರನ್ನು ಕೈಬಿಡದೇ, ಅವರಿಗೆ ಸಮಗ್ರ ಕನ್ನಡಿಗರು ಬೆಂಬಲ ನೀಡಬೇಕಾದ ಸಂದರ್ಭವಿದು. ಈ ಹಿನ್ನೆಲೆಯಲ್ಲಿ ಕೇಸಿಗೊಳಪಟ್ಟ ಸರ್ವರನ್ನೂ ಗುರುತಿಸಿ, ಕೇಸನ್ನು ಮುನ್ನಡೆಸುವ ವಿಧಾನಗಳ ಬಗ್ಗೆ ನ್ಯಾಯವಾದಿಗಳ ಸಹಕಾರದೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸಬೇಕಾಗಿದೆ. ಈಗಾಗಲೇ ನಡೆಯಬೇಕಾಗಿದ್ದ ಈ ರೀತಿಯ ಪ್ರಕ್ರಿಯೆಗಳಿಗಳಿಗೆ ಇನ್ನಾದರೂ ಜೀವ ಬಾರದೇ ಇದ್ದರೆ ಮುಂದಿನ ದಿನಗಳಲ್ಲಿ ಕನ್ನಡ ಚಳುವಳಿಗೆ ಯಾವೊಬ್ಬ ಕನ್ನಡಿಗರೂ ಬರಲಾರರು ಎಂಬುದಂತೂ ಸ್ಪಷ್ಟ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries