HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕಿಸಾನ್ ಸಂಘದ ಸಭೆ
     ಉಪ್ಪಳ: ಭಾರತೀಯ ಕಿಸಾನ್ ಸಂಘದ ಪೈವಳಿಕೆ ಪಂಚಾಯತಿ ಮಟ್ಟದ ಸಭೆ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ  ಸುರೇಶ್ ಹೊಳ್ಳರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಬದುಕಿಸಲು ಊರಿನ ಎಲ್ಲಾ ಮಹನೀಯರಗಳ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ 500 ಸಸಿಗಳನ್ನು ಸಾರ್ವಜನಿಕ ಸ್ಥಳ ಮತ್ತು ರಸ್ತೆ ಬದಿಗಳಲ್ಲಿ ನೆಟ್ಟು ಬೆಳೆಸಲು ಯೋಜನೆಯನ್ನು ಹಾಕಿಕೊಂಡಿರುವುದಾಗಿ ಅವರು ತಿಳಿಸಿದರು.
   ಭಾರತೀಯ  ಕಿಸಾನ್ ಸಂಘ ಪೈವಳಿಕೆ ಘಟಕದ ವತಿಯಿಂದ ಜು. 25 ರಂದು ಕೇರಳ ಸರಕಾರದ ಕೃಷಿ ವಿರೋಧಿ ನೀತಿಯ ವಿರುದ್ಧವಾಗಿ ಕೃಷಿಭವನ ಮತ್ತು ಗ್ರಾಮ ಕಚೇರಿಗಳ  ಮುಂಭಾಗದಲ್ಲಿ ಒಂದು ದಿನದ ಧರಣಿ ನಡೆಸಿ ಆ ಮುಖಾಂತರ ಸರಕಾರಕ್ಕೆ ರೈತರ ನ್ಯಾಯಯುತ ಬೇಡಿಕೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಕರೆನೀಡಿದರು.
   ಭೂ ತೀವರ್ೆಯನ್ನು 5 ಎಕ್ರೆವರೆಗೆ ರೂ. 200 ಏರಿಸಿದನ್ನು ಈ ಕೂಡಲೇ ಕಡಿಮೆ ಮಾಡಬೇಕು. ಭೂ ತೀವರ್ೇಯನ್ನು ಗ್ರಾಮ ಕಚೇರಿಗಳಲ್ಲೇ ಪಾವತಿಸುವಂತಿರಬೇಕು. ಹೊರತು ಅಕ್ಷಯ ಕೇಂದ್ರಗಳ ಮೂಲಕ ಪಾವತಿಸುವುದನ್ನು ರದ್ದುಗೊಳಿಸಬೇಕು. ಪುಂಜ ಭೂಮಿಗೆ ನಂಜದಷ್ಟೆ ತೆರಿಗೆಯು ನ್ಯಾಯಯುತವಲ್ಲ. ಇದನ್ನು ಇನ್ನಷ್ಟು ಕಡಿಮೆ ಮಾಡಬೇಕು.ಕೃಷಿಗೆ ಉಪಯೋಗಿಸುವ ಪಂಪ್ಸೆಟ್ ಗಳ ನೋಂದಾವಣೆಯ ಅವಧಿಯುನ್ನು ಜುಲೈ 31 ರ ಬದಲಾಗಿ ಇನ್ನೂ 6 ತಿಂಗಳಿಗೆ ಮುಂದುವರಿಸಬೇಕು. ಒಬ್ಬರ ಹೆಸರಿನಲ್ಲಿ ಒಂದೇ ಪಂಪ್ಸೆಟ್ಟಿಗೆ ಸಬ್ಸಿಡಿಯಲ್ಲಿ ವಿದ್ಯುತ್ ಕೊಡುವ ವ್ಯವಸ್ಥೆ ಬದಲಿಸಿ ಒಬ್ಬನಿಗೆ ಕನಿಷ್ಠ 2 ಪಂಪ್ಸೆಟ್ಗೆ ಸಬ್ಸಿಡಿ ನೀಡಬೇಕು. ಹೊಳೆಯ ನೀರನ್ನು ಹಾಗೂ ಕೊಳವೆಬಾವಿ ನೀರನ್ನು ಉಪಯೋಗಿಸುವಲ್ಲಿ ಯಾವುದೇ ಅಡೆತಡೆಗಳನ್ನು ಒಡ್ಡಬಾರದು.ಸರಕಾರವು ಕುಡಿನೀರು ಒದಗಿಸಲು ಹೊಳೆ ನೀರಿನ ಬದಲು ಬೇರೆ ಮೂಲಗಳನ್ನು ಅವಲಂಬಿಸಬೇಕು, ಕೃಷಿಗೆ ಸಬ್ಸಿಡಿ ನೀಡುವಾಗ ನಿಜವಾದ ಕೃಷಿ ಭೂಮಿ 5 ಎಕ್ರೆಯವರೆಗೆ ಸಬ್ಸಡಿ ನೀಡಬೇಕು.  ಪೈವಳಿಕೆ ಪಂಚಾಯತು ತೆಂಗು ಕೃಷಿಗೆ ಇದ್ದ ಸಬ್ಸಿಡಿಯನ್ನು ಈ ವರೆಗೆ ವಿತರಿಸಿಲ್ಲ. ಆದುದರಿಂದ ತೆಂಗುಕೃಷಿಗೆ ಕೂಡಾ ಇತರ ಕೃಷಿಗಳಿಗೆ ನೀಡುವ ಸಬ್ಸಿಡಿ ನೀಡಬೇಕು. ಎಲ್ಲಾ ಬಿಲ್ಗಳು, ನೋಟಿಸುಗಳನ್ನು ಕನ್ನಡದಲ್ಲಿ ಮುದ್ರಿಸಿ ಕೊಡಬೇಕು ಎಂದು ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲಾಯಿತು.
  ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಸಮಿತಿ ಸದಸ್ಯ ರಾಮ ಮಾಸ್ತರ್ ಕಳತ್ತೂರು ಮಾರ್ಗದರ್ಶನ ನೀಡಿದರು. ಜಿಲ್ಲಾ ಕಾರ್ಯದಶರ್ಿ ಕೊಮ್ಮುಂಡ ಸದಾಶಿವ ಶೆಟ್ಟಿ  ಜು.25 ರಂದು ನಡೆಸಲಿರುವ ಧರಣಿಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಉಳುವಾನ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಜಿಲ್ಲಾ ಕೋಶಾಧಿಕಾರಿ ಜಗದೀಶ್ ಕಲ್ಲಗದ್ದೆ ಸ್ವಾಗತಿಸಿ, ಪೈವಳಿಕೆ ಘಟಕದ ಕಾರ್ಯದಶರ್ಿ ವಿಶ್ವನಾಥ ಮಾಣಿಪ್ಪಾಡಿ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries