ಬಾಯಾರು : ಯಕ್ಷಗಾನ ತಾಳಮದ್ದಳೆ
ಉಪ್ಪಳ: ಬಾಯಾರು ಹೆದ್ದಾರಿ ಶಾಲಾ ಮಿತ್ರ ಮಂಡಳಿ ಗ್ರಂಥಾಲಯ ಹಾಗೂ ವಾಚನಾಲಯದ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ ಸೀತಾ ಕಲ್ಯಾಣ ಕಾರ್ಯಕ್ರಮವು ಹೆದ್ದಾರಿ ಶಾಲಾ ಪರಿಸರದಲ್ಲಿ ಇತ್ತೀಚೆಗೆ ಜರಗಿತು. ಗ್ರಂಥಾಲಯದ ಸಕ್ರಿಯ ಸದಸ್ಯ, ಹೆದ್ದಾರಿ ಶಾಲಾ ಪ್ರಬಂಧಕ ಬಾಯಾರು ಶ್ರೀ ಪಂಚಲಿಂಗೇಶ್ವರ ಕಲಾವೃಂದದ ಸ್ಥಾಪಕ ಸದಸ್ಯರು ಮತ್ತು ಅಧ್ಯಾಪಕರಾಗಿದ್ದ ನಿಡುವಜೆ ರಾಮಕೃಷ್ಣ ಭಟ್ ಅವರ ನಿಧನಕ್ಕೆ ಈ ಸಂದರ್ಭ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮವನ್ನು ತಾಲೂಕು ಲೈಬ್ರೆರಿ ಕೌನ್ಸಿಲ್ನ ಅಧ್ಯಕ್ಷ ಎಸ್.ನಾರಾಯಣ ಭಟ್ ಉದ್ಘಾಟಿಸಿ ಮಾತನಾಡಿದರು. ತಾಲೂಕು ಲೈಬ್ರೆರಿ ಕೌನ್ಸಿಲರ್ ವೆಂಕಟ್ರಮಣ ಆಚಾರ್ಯ, ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಆದಿನಾರಾಯಣ ಭಟ್, ಹಿರಿಯ ಯಕ್ಷಗಾನ ಕಲಾವಿದ ರಮೇಶ್ ಶೆಟ್ಟಿ ಬಾಯಾರು, ಸೋಮಪ್ಪ ಟೈಲರ್ ಮೊದಲಾದವರು ಶುಭಹಾರೈಸಿದರು.
ಬಳಿಕ ಸೀತಾಕಲ್ಯಾಣ ಎಂಬ ಕಥಾಭಾಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶೇಖರ ಶೆಟ್ಟಿ ಕುಳ್ಯಾರು, ವಸಂತ ಕಲ್ಲಗದ್ದೆ , ನಾರಾಯಣ ಆಚಾರ್ಯ ಸಹಕರಿಸಿದರು. ಮುಮ್ಮೇಳದಲ್ಲಿ ರಮೇಶ್ ಶೆಟ್ಟಿ ಬಾಯಾರು, ಸೋಮಪ್ಪ ಟೈಲರ್, ಹರಿಣಾಕ್ಷ ಬದಿಯಾರು, ಗಣಪತಿ ಭಟ್, ಮುಂಡಪ್ಪ ಟೈಲರ್, ಚನಿಯಪ್ಪ ತಾಳ್ತಜೆ, ಶಿವಪ್ಪ ಜೋಗಿ ಭಾಗವಹಿಸಿದ್ದರು. ಗ್ರಂಥಾಲಯದ ಕಾರ್ಯದಶರ್ಿ ಈಶ್ವರ ಭಟ್ ಸಿ.ಎಚ್. ಸ್ವಾಗತಿಸಿ, ಜೊತೆ ಕಾರ್ಯದಶರ್ಿ ಗಣಪತಿ ಭಟ್ ಓಟೆಪಡ್ಪು ವಂದಿಸಿದರು.