ಪತ್ರಿಕೆ ವ್ಯಕ್ತಿತ್ವ, ಜ್ಞಾನ ಮತ್ತು ಚಿಂತನೆಗೆ ಪೂರಕವಾಗಬೇಕು : ನರಸಿಂಗ ರಾವ್
ಕಾಸರಗೋಡು: ಪತ್ರಿಕೆ ಹೊಸತನದ ಪರಿಕಲ್ಪನೆಯೊಂದಿಗೆ ವಾಸ್ತವದ ಸತ್ಯಾಂಶ ಅನಾವರಣದೊಂದಿಗೆ ಓದುಗರ ನಂಬಿಕೆಗೆ ಪಾತ್ರವಾಗಬೇಕು. ವ್ಯಕ್ತಿತ್ವ, ಜ್ಞಾನ ಮತ್ತು ಚಿಂತನೆಗೆ ಪೂರಕವಾಗಿ ಪತ್ರಿಕಾ ಮಾಧ್ಯಮ ಬೆಳೆದು ಬರಬೇಕು ಎಂದು ಹವ್ಯಾಸಿ ಪತ್ರಕರ್ತ ನರಸಿಂಗ ರಾವ್ ಅವರು ಹೇಳಿದರು.
ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆ ಮತ್ತು ತಂತ್ರಜ್ಞಾನದ ಆವಿಷ್ಕಾರದ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ. ಕನ್ನಡ ಭಾಷೆ, ಸಾಹಿತ್ಯಕ್ಕೆ ಕಾಸರಗೋಡಿನ ಕೊಡುಗೆ ಅದ್ಭುತ ಎಂದು ಹೇಳಿದ ಅವರು ಮೌಖಿಕ ಜನಪದೀಯ, ಪಾಡ್ದನಗಳನ್ನು ಇವತ್ತಿನ ವರೆಗೂ ತಂದಿರುವುದು ಈ ಪ್ರದೇಶದ ಹಿರಿಮೆಗೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯಪೂರ್ವ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟವೇ ಮುಖ್ಯ ಉದ್ದೇಶವಾಗಿ ಹುಟ್ಟಿಕೊಂಡಿತು. ಆದರೆ ಆ ಬಳಿಕ ಪತ್ರಿಕೋದ್ಯಮ ವಾಣಿಜೀಕರಣವಾಗಿ ಬೆಳೆಯಿತು ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಅವರು ಪತ್ರಿಕೆಯ ಹುಟ್ಟು, ನಡೆದು ಬಂದ ದಾರಿ ಬಗ್ಗೆ ಸಮಗ್ರ ಚಿತ್ರಣ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಕಿದೂರು ಶಂಕರನಾರಾಯಣ ಭಟ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ, ಪ್ರಮಾಣ ಪತ್ರವನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು. ಸಮ್ಮಾನಿತ ಕಿದೂರು ಶಂಕರನಾರಾಯಣ ಭಟ್ ಅವರು ತನಗಿತ್ತ ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ಕೆ.ಭಾಸ್ಕರ ಅವರು ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ಕನ್ನಡ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದಶರ್ಿ ಗಂಗಾಧರ ಯಾದವ್ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭಹಾರೈಸಿದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿ, ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು. ಶ್ರದ್ಧಾ ನಾಯರ್ಪಳ್ಳ ಪ್ರಾರ್ಥನೆ ಹಾಡಿದರು. ದಿವಾಕರ ಅಶೋಕನಗರ ಪ್ರಮಾಣಪತ್ರ ವಾಚಿಸಿ, ವಂದಿಸಿದರು.