ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!
ಉಡುಪಿ: ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಅಂತ್ಯಕ್ರಿಯೆ ನಡೆಯಿತು.
ಶಿರೂರು ಮೂಲ ಮಠದ ಒಳಾಂಗಣದಲ್ಲಿ ಬೃಂದಾವನ ರಚನೆ ಮಾಡಿ, ಶ್ರೀಗಳು ಬಳಸುತ್ತಿದ್ದ ಕಪರ್ೂರ, ಕಾಳು ಮೆಣಸು, ಉಪ್ಪು, ಪೂಜಾ ಪರಿಕರಗಳು ಮತ್ತು ಹತ್ತಿ ಇವುಗಳನ್ನೆಲ್ಲಾ ಬೃಂದಾವನದಲ್ಲಿ ಇರಿಸಿ ಕುಳಿತ ಸ್ಥಿತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರ ತೀವ್ರ ಅನಾರೋಗ್ಯದಿಂದ ಶ್ರೀಗಳು ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಹೊಟ್ಟೆಯಲ್ಲಿ ತೀವ್ರ ರಕ್ತ ಸ್ರಾವವಾಗಿ ನಿನ್ನೆ ದಾಖಲಾಗಿದ್ದ ಶ್ರೀಗಳನ್ನು ವೈದ್ಯರು ಕಾಲಕಾಲಕ್ಕೆ ನಿಗಾವಹಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದರು.