ಬ್ರೈನ್ ಓ ಬ್ರೈನ್-ಪ್ರಮಾಣ ಪತ್ರ ವಿತರಣೆ
ಬದಿಯಡ್ಕ : ಶರೀರದ ಅವಯವಗಳು ವ್ಯಾಯಾಮದಿಂದ ಹೇಗೆ ಉಲ್ಲಸಿತವಾಗಿರುತ್ತವೆಯೋ ಅದೇರೀತಿ ನಮ್ಮ ಮೆದುಳಿಗೂ ವ್ಯಾಯಾಮವನ್ನು ನೀಡುವ ಮೂಲಕ ಬುದ್ಧಿಶಕ್ತಿ ಬೆಳವಣಿಗೆಯನ್ನು ಮಾಡಿಕೊಳ್ಳಬೇಕು. ಮೆದುಳಿನ ಚುರುಕತನಕ್ಕೆ ಬ್ರೈನೋ ಬ್ರೈನ್ನ ಅಬಾಕಸ್ ತರಗತಿಗಳು ಸಹಕಾರಿಯಾಗಲಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಶಂಕರ್ ಸಾರಡ್ಕ ಅಭಿಪ್ರಾಯಪಟ್ಟರು.
ಅವರು ಭಾನುವಾರ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಬ್ರೈನ್ ಓ ಬ್ರೈನ್ ಬದಿಯಡ್ಕ ಶಾಖೆಯ ವಿದ್ಯಾಥರ್ಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿ ಮಾತನಾಡಿದರು.
ನಾವು ಆಶಾವಾದಿಗಳಾಗಬೇಕು, ನಿರಾಶಾವಾದಿಗಳಾಗಬಾರದು. ಗೊತ್ತಿಲ್ಲದ ವಿಷಯಗಳು ಮಾತ್ರ ನಮಗೆ ಕಷ್ಟಕರವಾಗುತ್ತದೆ. ಮಕ್ಕಳಿಗೆ ಅವಕಾಶಗಳನ್ನು ಗಿಟ್ಟಿಸಿಕೊಡುವಲ್ಲಿ ಪಾಲಕರು ಶ್ರಮವಹಿಸಬೇಕು. ಮಕ್ಕಳು ಯಾವ ರೀತಿ ಇರುತ್ತಾರೆ, ಏನುಮಾಡುತ್ತಾರೆ ಎಂಬುದರ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.
ಬದಿಯಡ್ಕ ಹೋಲಿಫ್ಯಾಮಿಲಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಸವಿತಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಮಾತನಾಡಿದರು. ಪದ್ಮಶ್ರೀ ಟ್ಯುಟೋರಿಯಲ್ಸ್ನ ಪದ್ಮರಾಜ್ ಪಟ್ಟಾಜೆ ಸ್ವಾಗತಿಸಿ, ಕೃಷ್ಣಕುಮಾರ್ ವಂದಿಸಿದರು. ಮಧುರಾ ಕೃಷ್ಣಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ರಾಜ್ ಪಟ್ಟಾಜೆ ಪ್ರಾರ್ಥನೆಯನ್ನು ಹಾಡಿದರು.