HEALTH TIPS

No title

              ಜನಸಂಖ್ಯಾ ಸ್ಪೋಟ ಹಲವು ಸಮಸ್ಯೆಗಳಿಗೆ ಕಾರಣ- ಪ್ರೊ.ಶಂಕರ ಪಾಟಾಳಿ
    ಪೆರ್ಲ: ಜನಸಂಖ್ಯಾ ಸ್ಪೋಟವು ಹಲವಾರು  ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ ಎಂದು ವಿಟ್ಲ ಸರಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಂಕರ ಪಾಟಾಳಿ ಅವರು ಹೇಳಿದರು. 
   ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮತ್ತು ಎನ್.ಎಸ್.ಎಸ್. ನ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾದ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸವನ್ನು ನೀಡಿದರು.
  ಇಂದು ಜಾಗತಿಕ  ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ 2025 ಕ್ಕಾಗುವಾಗ ಮೊದಲ ಸ್ಥಾನಕ್ಕೆ  ಬರಬಹುದು. ಆದುದರಿಂದ ಇಂದಿನ ಯುವ ಜನಾಂಗ ಇದರಿಂದಾಗುವ ಅನಾಹುತವನ್ನು ಮನಗಂಡು ಜಾಗೃತವಾಗದಿದ್ದರೆ ಮುಂದೊಂದು ದಿನ ದೇಶ ದೊಡ್ಡ ಗಂಡಾಂತರವನ್ನು ಎದುರಿಸ ಬೇಕಾದೀತು. ಮಾನವ ಸಂಪನ್ಮೂಲ ಹೆಚ್ಚಿದಂತೆ ಇತರ ಉತ್ಪಾದನಾ ಸಾಮಥ್ರ್ಯ ಹೆಚ್ಚಾಗಬೇಕು. ಹಿಂದೆ `ನಾವಿಬ್ಬರು   ನಮಗಿಬ್ಬರು' ಎಂಬ ತತ್ವವಿತ್ತು ಆದರೆ ಇಂದು `ನಾವಿಬ್ಬರು ನಮಗೊಬ್ಬರು' ಎಂಬ ತತ್ವವನ್ನು  ಬದುಕಿನಲ್ಲಿ ಅಳವಡಿಸಿ ಸಂತಾನಹರಣ ಮಾಡಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಹುಟ್ಟಿದ ಮಗುವಿಗೆ ಯೋಗ್ಯ ವಿದ್ಯಾಭ್ಯಾಸ,  ಕೌಶಲ್ಯಯುತ ಶಿಕ್ಷಣ ನೀಡಿ ಮಾನವ ನನ್ನಾಗಿಸಬೇಕು ಎಂದರು.
   ಅರ್ಥಶಾಸ್ತ್ರದ ಮುಖ್ಯಸ್ಥ ಅಶೋಕ್ ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಗತಿಕ ಮಟ್ಟದ ಜನಸಂಖ್ಯಾ ಪ್ರಮಾಣವನ್ನು  ತಿಳಿಸಿ ಸಮಸ್ಯೆಯ ಭೀಕರತೆಯನ್ನು ಮನವರಿಕೆ ಮಾಡಿ ಕೊಟ್ಟರು. ಕಾಲೇಜಿನ ಕಾರ್ಯ ನಿರ್ವಹಣಾಧಿಕಾರಿ. ಕೆ.ಶಿವಕುಮಾರ್ ಜನಸಂಖ್ಯೆ ಏರಿದಂತೆ ಭೂಪ್ರದೇಶ ಹೆಚ್ಚುವುದಿಲ್ಲ. ಹಾಗಿದ್ದಾಗ ಪ್ರಕೃತಿ ನಾಶವೇ ಮೊದಲಾದ ಸಮಸ್ಯೆಗಳು ಎದುರಾಗುತ್ತವೆ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನೌಕರ ಸಂಘದ ಕಾರ್ಯದಶರ್ಿ ಕೆ.ಕೇಶವ ಶರ್ಮ ಶುಭಹಾರೈಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಉಪನ್ಯಾಸಕ  ಸುರೇಶ್ ಸ್ವಾಗತಿಸಿ, ಎನ್.ಎಸ್.ಎಸ್. ಕಾರ್ಯದಶರ್ಿ ವಿನಾಯಕ್ ವಿ.ಚಂದ್ರನ್ ವಂದಿಸಿದರು. ಉಪನ್ಯಾಸಕಿ ಗೀತಾ ವಿ.ಭಟ್ ಕಾರ್ಯಕ್ರಮ ನಿರೂಪಿಸಿದರು.
  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries