HEALTH TIPS

No title

                      ಮಂಜೇಶ್ವರದಲ್ಲಿ ಹೆಚ್ಚಿದ ಕಡಲಬ್ಬರ
                  ಉಪ್ಪಳದಲ್ಲಿ ಭೀತಿ ಹೆಚ್ಚಿಸಿದ ಸಮುದ್ರದ ಅಲೆಗಳು
           ಕುಂಬಳೆ, ಕಾಸರಗೋಡು, ಕಾಞಂಗಾಡು, ನೀಲೇಶ್ವರದಲ್ಲಿನ ತೀರವಾಸಿಗಳಿಗೂ ಸಮಸ್ಯೆ
       ಅಲೆಗಳ ರುದ್ರ ನರ್ತನಕ್ಕೆ ಮನೆ, ಹಿತ್ತಿಲು, ಬಾವಿ, ತೆಂಗಿನ ಮರಗಳು, ಆರಾಧನಾ ಕೇಂದ್ರ ಸಮುದ್ರ ಪಾಲು
    ಮಂಜೇಶ್ವರ: ತೀವ್ರ ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಕರಾವಳಿ ತೀರ ಪ್ರದೇಶದಲ್ಲಿ ಕಡಲಬ್ಬರವೂ ಹೆಚ್ಚಾಗಿದೆ. ಕಾಸರಗೋಡು, ಕಾಞಂಗಾಡು, ಮಂಜೇಶ್ವರ ಹಾಗೂ ನೀಲೇಶ್ವರ ಕಡಲ ಕಿನಾರೆಯ ತಟ ಪ್ರದೇಶವನ್ನು ಸಮುದ್ರ ನುಂಗಲಾರಂಭಿಸಿದೆ. ಏರು ಸಮುದ್ರ ಅಲೆಗಳ ರುದ್ರ ನರ್ತನ ಹಲವು ನಾಶ ನಷ್ಟಕ್ಕೆ ಕಾರಣವಾಗಿದೆ. ಜಿಲ್ಲೆಯ ಸಮುದ್ರ ತೀರದಲ್ಲಿ ಸುಮಾರು  ನೂರಕ್ಕೂ ಹೆಚ್ಚಿನ ತೆಂಗಿನ ಮರಗಳು ಅರಬಿ ಸಮುದ್ರ ಪಾಲಾಗಿವೆ. ಕೆಲ ಮನೆಗಳು ಧರಾಶಾಯಿಯಾಗಿದ್ದರೆ, ಇನ್ನೂ ಕೆಲ ಮನೆಗಳು ಸಮುದ್ರ ಪಾಲಾಗುತ್ತಿವೆ. ಇನ್ನುಳಿದ ಮನೆಗಳ ಸಮೀಪಕ್ಕೆ ಕಡಲಿನ ಅಲೆಗಳು ಅಪ್ಪಳಿಸುತ್ತಿದ್ದು ಮೀನುಗಾರರಲ್ಲಿ ಭೀತಿ ಹುಟ್ಟಿಸಿದೆ.
    ಕಾಸರಗೋಡಿನ ಚೆರೆಂಗೈ ಕಡಪ್ಪುರದಿಂದ ಲೈಟ್ ಹೌಸ್ ತನಕದ ಮೀನುಗಾರ ಕುಟುಂಬಗಳು ಸಮುದ್ರ ಆಕ್ರಮಣದಿಂದ ಭಯಭೀತವಾಗಿವೆ. ಮನೆಗಳು ಯಾವುದೇ ಸಮಯದಲ್ಲೂ ಧರಾಶಾಯಿಯಾಗಬಹುದೆನ್ನುವ ಭಯದ ವಾತಾವರಣ ಸೃಷ್ಠಿಯಾಗಿದೆ. ತೀರ ಪ್ರದೇಶವಾಸಿಗಳನ್ನು ಸೂಕ್ತ ರಕ್ಷಣೆಯೊಂದಿಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಬೇಕೆಂಬ ಬೇಡಿಕೆ ಹೆಚ್ಚಾಗತೊಡಗಿದೆ. ಸಣ್ಣ ಮಕ್ಕಳೊಂದಿಗೆ ವಾಸಿಸುವ ಮೀನುಗಾರ ಕುಟುಂಬಗಳು ಆತಂಕದಲ್ಲಿ ವಾಸಿಸುವ ಸಂದರ್ಭ ಎದುರಾಗಿದೆ. ಓಖೀ ದುರಂತದ ನಂತರ ರಾಜ್ಯದ ಮೀನುಗಾರರು ಪರಿಸ್ಥಿತಿ ಸುಧಾರಿಸುತ್ತಿದ್ದ ವೇಳೆ ಮಗದೊಂದು ಸಮಸ್ಯೆ ಬೆನ್ನ ಹಿಂದೆ ಬಿದ್ದಿದೆ.
   ಮಳೆಗಾಲದಲ್ಲಿ ಮೀನು ಹಿಡಿಯಲಾಗದ ದುಸ್ಥಿತಿಯು ಮೀನುಗಾರರ ಆಥರ್ಿಕತೆಯನ್ನು ಕುಗ್ಗಿಸಿದ್ದು ಕಠಿಣ ಸವಾಲುಗಳನ್ನು ತಂದೊಡ್ಡಿದೆ. ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಪ್ರದೇಶಗಳ ಜನಸಾಂದ್ರತೆಯು ಹೆಚ್ಚಿದ್ದು, ಪ್ರತಿ ವರ್ಷ ಎರಡರಿಂದ ಮೂರು ಮೀ. ಭೂಭಾಗಗಳನ್ನು ಆಕ್ರಮಿಸಿಕೊಳ್ಳುತ್ತಿರುವ ಸಮುದ್ರದ ಅಲೆಗಳು ಕರಾವಳಿ ತೀರವಾಸಿಗಳನ್ನು ಆತಂಕಿತರನ್ನಾಗಿಸಿದೆ. ಹಲವು ಬಾರಿ ಅಧಿಕಾರಿ ಸಹಿತ ಜನಪ್ರತಿನಿಧಿಗಳಲ್ಲಿ ಸಮುದ್ರ ಅಲೆಗಳಿಂದ ರಕ್ಷಣೆಗೆ ಅನುಕೂಲವಾಗುವಂತೆ ಸೂಕ್ತ ರಕ್ಷಣಾ ಗೋಡೆ ನಿಮರ್ಾಣಕ್ಕೆ ಹಲವು ಬಾರಿ ಬೇಡಿಕೆಗಳನ್ನು ಸಲ್ಲಿಸಿದ್ದರೂ ಯಾವುದೇ ಫಲಪ್ರದ ಬದಲಾವಣೆ ಕಂಡಿಲ್ಲ ಎನ್ನಲಾಗಿದೆ. ಕೆಲವಡೆಗಳಲ್ಲಿ ಅವೈಜ್ಞಾನಿಕವಾಗಿ ನಿಮರ್ಿಸಿದ್ದ ಸಮುದ್ರದ ತಡೆಗೋಡೆಗಳು ಭೇಧಿಸಲ್ಪಟ್ಟಿವೆ. ಮಂಜೇಶ್ವರ, ಉಪ್ಪಳ, ಕುಂಬಳೆ, ಅರಿಕ್ಕಾಡಿ, ಕೋಯಿಪ್ಪಾಡಿ, ಕಸಬ, ಚೆರೆಂಗೈ, ತೃಕ್ಕನಾಡು, ಕೋಟ್ಟಿಕುಳಂ, ಶಿರಿಯಾ, ಅಜಾನೂರು, ಚಿತ್ತಾರಿ, ನೀಲೇಶ್ವರ, ದಕ್ಷಿಣ ಕಡಪ್ಪುರ ತೀರಗಳಲ್ಲಿ ಸಮುದ್ರದ ಅಬ್ಬರ ಹೆಚ್ಚಿದ್ದು, ಸಮಸ್ಯೆ ಇಮ್ಮಡಿಯಾಗಿದೆ.
      ಮಂಜೇಶ್ವರದ ಉಪ್ಪಳದಲ್ಲೂ ಕಡಲಾಕ್ರಮಣ!
   ಹಲವು ವರ್ಷಗಳಿಂದ ಮುಂಗಾರು ಮಳೆಗಾಲದ ವೇಳೆ ಸಮುದ್ರದ ಏರು ಅಲೆಗಳಿಂದ ತೊಂದರೆಗೀಡಾಗುತ್ತಿದ್ದ ಕರಾವಳಿ ತೀರವಾಸಿಗಳು ಈ ಬಾರಿ ಅರಬ್ಬಿ ಕಡಲಿನ ರುದ್ರ ನರ್ತನಕ್ಕೆ ಮನೆ, ಮಠ ಕಳೆದುಕೊಳ್ಳುತ್ತಿದ್ದಾರೆ. ತೀರ ಪ್ರದೇಶದ ಕೆಲ ಮಂದಿ ತಮ್ಮ ಮನೆಗಳನ್ನು ಖಾಲಿ ಮಾಡಿ ಉಪ್ಪಳ, ಹೊಸಂಗಡಿ ಮಂಜೇಶ್ವರ ಪೇಟೆಯ ಬಾಡಿಗೆ ಮನೆಯಲ್ಲಿ ವಾಸಿಸತೊಡಗಿದ್ದಾರೆ.
   ಉಪ್ಪಳ ಕಡಲ ಕಿನಾರೆಯಲ್ಲಿ ಇಂತಹ ದೊಡ್ಡ ಸಮಸ್ಯೆ ಇದುವರೆಗೆ ಎದುರಾಗಿರಲಿಲ್ಲ, ಪ್ರಸ್ತುತ ವರ್ಷದಲ್ಲಿ ಸಮುದ್ರದ ಅಲೆಗಳ ಅಬ್ಬರ ಮತ್ತು ಪ್ರಭಾವ ಹೆಚ್ಚಿದೆ. ಹಿತ್ತಲಿನ ಹಲವು ತೆಂಗಿನ ಮರಗಳು ಈಗಾಗಲೇ ಸಮುದ್ರ ಪಾಲಾಗಿವೆ, ನಿತ್ಯಪಯೋಗಿ ಬಾವಿ ಸಹಿತ ಅನತಿ ದೂರದಲ್ಲಿದ್ದ ಪಾಯಿಖಾನೆಯನ್ನು ಸಮುದ್ರ ನುಂಗಿದೆ ಎನ್ನುತ್ತಾರೆ ಉಪ್ಪಳ ಮುಸೋಡಿ ವಾಸಿ ಅಬ್ದುಲ್ ಹಮೀದ್. ಈಗ ಸಮುದ್ರವು ಮನೆಯ 5 ಮೀ. ಸನಿಹದಲ್ಲಿದೆ, ಸುಮಾರು 50 ರಿಂದ 70 ಮೀ. ದೂರದಲ್ಲಿದ್ದ ಸಮುದ್ರವು ಹೆಚ್ಚಿನ ಭೂಭಾಗವನ್ನು ಆಕ್ರಮಿಸಿ, ಮನೆ ಹಿತ್ತಲಲ್ಲಿದ್ದ ಸುಮಾರು 20 ತೆಂಗಿನ ಮರಗಳನ್ನು ಬೃಹತ್ ಅಲೆಗಳು ಹೊತ್ತೊಯ್ದಿವೆ ಎನ್ನುತ್ತಾರೆ ಇವರು. ಪತ್ನಿ ಮಕ್ಕಳು ಸಹಿತ ನಿತ್ಯೋಪಯೋಗಿ ವಸ್ತುಗಳೊಂದಿಗೆ ಮನೆಯನ್ನು ಖಾಲಿಯಾಗಿಸಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸಿದ್ದತೆ ನಡೆಸಿದ್ದಾರೆ.
    ಅನತಿ ದೂರದಲ್ಲಿರುವ ಮನೆಯನ್ನು ಸಮುದ್ರವು ಭಾಗಶಃ ಆವರಿಸಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿದೆ. ಸನಿಹದಲ್ಲಿರುವ ಮಗದೊಂದು ಮನೆಯ ಕುರುಹು ಎಂಬಂತೆ ಮನೆ ಸಿಮೆಂಟ್ ಸ್ಲ್ಯಾಬ್ ಧರಾಶಾಯಿಯಾಗಿ ಸಮುದ್ರದ ನೀರಿನ ಹೊಡೆತಕ್ಕೆ ಚೂರಾಗಿದೆ. ಅಧಿಕ ಪ್ರದೇಶದಲ್ಲಿಯೂ ಸಮುದ್ರದ ಅಬ್ಬರ ಹೆಚ್ಚಿದ್ದು ತೀರ ಪ್ರದೇಶ ವಾಸಿಗಳು ಮನೆಗಳನ್ನು ಬಿಟ್ಟು ತೆರಳಿದ್ದಾರೆ. ರಫೀಕ್ ಎಂಬವರ ಸಂಶೀನಾ ಮಂಜಿಲ್ ಹಿಂಬದಿಯ ಅಡುಗೆ ಕೋಣೆಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದು ಕುಸಿದು ಬೀಳುವ ಹಂತದಲ್ಲಿದೆ. ಉಪ್ಪಳ ರೈಲ್ವೇ ನಿಲ್ದಾಣದ ಮೂಲಕ ಶಾರದಾ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಅಲೆಗಳ ಹೊಡೆತಕ್ಕೆ ತುತ್ತಾಗಿ 50 ಮೀ. ಉದ್ದದ ರಸ್ತೆ ಸಮುದ್ರ ಪಾಲಾಗಿದೆ. ಮೀನುಗಾರರ ರಕ್ಷಕ ದೈವ ವಾಮಂಜೂರು ಬಬ್ಬರ್ಯಕಟ್ಟೆಯ ಅರ್ಧ ಭಾಗ ಅಲೆಗಳ ಹೊಡೆತಕ್ಕೆ ಕುಸಿದು ಬಿದ್ದಿದ್ದು, ಕಲ್ಲುಗಳು ಉರುಳಿ ಸಮುದ್ರ ಸೇರಿವೆ. ಜನವಸತಿ ಕುರುಹುಗಳು ಎಂಬಂತೆ ಸಮುದ್ರ ಮಧ್ಯದಲ್ಲಿ ಬಾವಿಗಳ ಅಳಿದುಳಿದ ವೃತ್ತಾಕಾರದ ಸಿಮೆಂಟ್ ಕಟ್ಟೆಗಳು ಕಾಣುತ್ತಿವೆ.
    ಸಮೀಪದಲ್ಲಿ ನಿಮರ್ಾಣಗೊಳ್ಳುತ್ತಿರುವ ನೂತನ ಮಂಜೇಶ್ವರ ಬಂದರಿನಿಂದ ಸಮುದ್ರದ ಅಲೆಗಳು ದಿಕ್ಕು ಬದಲಿಸಿದ್ದು ಮನೆ, ಮರಗಳು ಸಮುದ್ರ ಪಾಲಾಗುವ ಸನ್ನಿವೇಶ ಹೆಚ್ಚಾಗಿದೆ ಎನ್ನುತ್ತಾರೆ ಅಧಿಕ ನಿವಾಸಿ ಅಬ್ದುಲ್ ರೆಹ್ಮಾನ್. ವರ್ಷದಿಂದ ವರ್ಷಕ್ಕೆ ಸಮುದ್ರದ ಅಬ್ಬರ ಹೆಚ್ಚುತ್ತಿದೆ, ಹಾರ್ಬರ್ ಎಂಜಿನಿಯರಿಂಗ್ ವಿಭಾಗವು ಸಮುದ್ರ ತೀರ ಪ್ರದೇಶವಾಸಿಗಳ ರಕ್ಷಣೆಗೆ ಸೂಕ್ತ ವ್ಯವಸ್ಥೆಯನ್ನು ಮಾಡದಿರುವುದೇ ಸಮಸ್ಯೆ ಹೆಚ್ಚುವಂತೆ ಮಾಡಿದೆ ಎನ್ನುತ್ತಾರೆ ಇವರು. ಹಾರ್ಬರ್ ಸನಿಹದಲ್ಲಿ ಭೂ ರಕ್ಷಣೆಗೆ ಹಾಸಿದ್ದ ಬೃಹತ್ ಕರಿಕಲ್ಲುಗಳು ಅಲೆಗಳ ಹೊಡೆತಕ್ಕೆ ನೀರು ಪಾಲಾಗಿವೆ. ಕೆಲ ಕಡೆಗಳಲ್ಲಿ ಸುಮಾರು 200 ಮೀ. ರಷ್ಟು ಭೂ ಪ್ರದೇಶವನ್ನು ಸಮುದ್ರ ನುಂಗಿದೆ ಎನ್ನುತ್ತಾರೆ ಇಲ್ಲಿನ ಮಂದಿ. ಸಂ ಭಾವ್ಯ ಸಮಸ್ಯೆಯನ್ನು ತಡೆಯಲು ಸರಕಾರ ಮತ್ತು ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳದೇ ಇರುವುದು ಅನಾಹುತಕ್ಕೆ ಮೂಲ ಕಾರಣ ಎನ್ನಲಾಗಿದೆ.
          ನೀಲೇಶ್ವರದಲ್ಲಿ ತಡೆಗೋಡೆ ಸಮುದ್ರಪಾಲು:
    ಜಿಲ್ಲೆಯ ದಕ್ಷಿಣದ ಪ್ರಮುಖ ಕರಾವಳಿ ಪ್ರದೇಶ ನೀಲೇಶ್ವರವೂ ಕಡಲಬ್ಬರ ಸಮಸ್ಯೆಯಿಂದ ಹೊರತಾಗಿಲ್ಲ. ನೀಲೇಶ್ವರ ನಗರಸಭಾ ಕೌನ್ಸಿಲರ್ ಬೀನಾ.ಟಿ.ಪಿ ತಾಯ್ಕಡಪ್ಪುರಂನ ತಮ್ಮ ಮನೆಯನ್ನು ತೊರೆದಿದ್ದಾರೆ. ಭಯಾನಕ ಅಲೆಗಳು ಮನೆ ಸಮೀಪದ ರಕ್ಷಣಾ ತಡೆಗೋಡೆಗಳನ್ನು ಕೆಡವಿದ್ದು, ಸಮುದ್ರದ ನೀರು ಆಕೆಯ ಹೆಂಚಿನ ಮನೆಗೆ ಅಪ್ಪಳಿಸಲಾರಂಭಿಸಿದೆ, ಸಮುದ್ರ ಅಲೆಗಳು ಮನೆಯನ್ನು ಸಮೀಪಿಸಿದ್ದು ಕೇವಲ 10 ಮೀ. ಅಂತರದಲ್ಲಿದೆ. ಪ್ರತಿ ವರ್ಷ ತಾಯ್ಕಡಪ್ಪುರದ 50 ಕುಟುಂಬಗಳು ಸಮಸ್ಯೆ ಎದುರಿಸಬೇಕಿದೆ ಎನ್ನುತ್ತಾರೆ ಇವರು. ಪ್ರಸ್ತುತ ಬೀನಾ ಎರಡು ಕಿ.ಮೀ ದೂರವಿರುವ ತನ್ನ ತಾಯಿ ವಾಸಿಸುತ್ತಿರುವ ಸುನಾಮಿ ಕಾಲನಿಗೆ ಸ್ಥಳಾಂತರಗೊಂಡಿದ್ದಾರೆ. ಆಕೆಯ ಸಮೀಪವತರ್ಿ ಶಾಂತಾಳ ಮನೆಯೂ ಹಾನಿಗೊಳಗಾಗಿದ್ದು ಸ್ಥಳಾಂತರಗೊಳ್ಳಲು ಅವಕಾಶ ವಂಚಿತಳಾಗಿದ್ದಾಳೆ. ಮಣ್ಣಿನ ಗೋಡೆಯ ಆಕೆಯ ಮನೆ ನೀರು ಅಪ್ಪಳಿಸಿ ಸಂಪೂರ್ಣ ತೊಯ್ದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಶಾಂತಾಳ ಹೆಸರಿದೆ ಆದರೆ ಕರಾವಳಿ ತೀರ ಪ್ರದೇಶದ ನಿರ್ಬಂಧಿತ ಪ್ರದೇಶದಲ್ಲಿ ಆಕೆಯ ಸ್ವಂತ ಸ್ಥಳವಿರುವ ಕಾರಣ ಮನೆ ನಿಮರ್ಾಣ ಸಾಧ್ಯವಿಲ್ಲದಾಗಿದೆ ಎನ್ನುತ್ತಾರೆ ನಗರಸಭಾ ಸದಸ್ಯೆ ರಶೀದಾ. ಮೀನುಗಾರಿಕಾ ಇಲಾಖೆ ಮತ್ತು ಸ್ಥಳೀಯ ನಗರಸಭೆಯು ಸೂಕ್ತ, ವೈಜ್ಞಾನಿಕ ಸಮುದ್ರ ರಕ್ಷಣಾ ತಡೆಗೋಡೆ ನಿಮರ್ಿಸದ ಹೊರತು ಇಲ್ಲಿ ವಾಸ್ತವ್ಯ ಕಠಿಣವಾಗಲಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಪ್ರಸೀದಾ. ಸಮೀಪದಲ್ಲೇ ಸರಕಾರಿ ಶಾಲೆ ಹಾಗೂ ಹಲವು ಮೀನುಗಾರರ ವಸತಿಗಳಿವೆ. ತಾಯ್ ಕಡಪ್ಪುರಂ, ಅಜಿತಲದ ಸಮುದ್ರ ತಟ ಪ್ರದೇಶದಲ್ಲಿನ ಒಟ್ಟು 50 ಮನೆಗಳು ಸಂಕಷ್ಟವನ್ನು ಎದುರಿಸಬೇಕಿದೆ. ಸುಮಾರು ನಾಲ್ಕರಿಂದ ಐದು ಮೀ. ಎತ್ತರದ ಸಮುದ್ರದ ಅಲೆಗಳು ಆತಂಕವನ್ನು ಹುಟ್ಟಿಸಿವೆ ಎನ್ನುತ್ತಾರೆ ಪ್ರಕಾಶ್. 
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries