ಎಂಡೋಸಲ್ಫಾನ್ ಪೀಡಿತ ಪ.ಜಾತಿ ಮಹಿಳೆಯ ಮನೆ ಧರಾಶಾಹಿ
ಪೆರ್ಲ:ಎಣ್ಮಕಜೆ ಗ್ರಾ.ಪಂ. ನಡುಬೈಲ್ ತೆರಳುವ ರಸ್ತೆಯ ಸಮೀಪದ ಪರಿಶಿಷ್ಟ ಜಾತಿಯ ಚೋಮು(45) ಎಂಬವರಿಗೆ ಸೇರಿದ ಮನೆ ಶುಕ್ರವಾರದ ಮಳೆಗೆ ಭಾಗಷಃ ಕುಸಿದಿದ್ದು ಈ ವೇಳೆ ಸಹೋದರಿಯ ಮನೆಗೆ ತೆರಳಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದ ಘಟನೆ ತಡವಾಗಿ ವರದಿಯಾಗಿದೆ.
ಅವಿವಾಹಿತೆಯಾದ ಚೋಮು ಎಂಡೋಸಲ್ಫಾನ್ ಪೀಡಿತೆಯಾಗಿದ್ದು, ತನ್ನ ಸಹೋದರನೊಂದಿಗೆ ಈ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಸಹೋದರ ಬಾಬು ನಾಲ್ಕು ತಿಂಗಳ ಹಿಂದೆ ರಕ್ತದೊತ್ತಡ, ಮೆದುಳು ಸಂಬಂಧಿತ ರೋಗದಿಂದ ಮರಣ ಹೊಂದಿದ್ದರು.
ಚೋಮು ಎಂಡೋಸಲ್ಫಾನ್ ಚಿಕಿತ್ಸಾ ಪಟ್ಟಿಯಲ್ಲಿದ್ದು ಸರಕಾರದ ಸಹಾಯ ಲಭಿಸುತ್ತಿದೆ. ತಂದೆ ಚನಿಯ ಹಾಗೂ ತಾಯಿ ಚನಿಯಾರು ಈ ಮೊದಲೇ ಮರಣ ಹೊಂದಿದ್ದು ಇದೀಗ ಸಹೋದರಿ ಜಯಂತಿ ಅವರೊಂದಿಗೆ ಬೆದ್ರಂಪಳ್ಳದ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.ಜಯಂತಿಯ ಮಗ ಪ್ರಕಾಶ ಬಸ್ ಕ್ಲೀನರ್ ವೃತ್ತಿ ನಡೆಸುತ್ತಿದ್ದು ಅದರಿಂದ ಸಿಗುವ ಅಲ್ಪ ವರಮಾನವಷ್ಟೇ ಇಡೀ ಕುಟುಂಬದ ಏಕೈಕ ಆಸರೆ.
ಮೂರು ವರ್ಷಗಳ ಹಿಂದೆ ಬ್ಲಾಕ್ ಪಂಚಾಯಿತಿ ಅನುದಾನದಿಂದ ಜಯಂತಿ ಅವರಿಗೆ ಮನೆ ಮಂಜೂರಾಗಿ ನಿಮರ್ಾಣ ಕಾರ್ಯ ಅರ್ಧದಲ್ಲಿ ಮೊಟಕುಗೊಂಡಿದ್ದು ಗುತ್ತಿಗೆ ವಹಿಸಿದ ವ್ಯಕ್ತಿಯು ಈ ವರೆಗಿನ ನಿಮರ್ಾಣದಿಂದ ನಷ್ಟ ಅನುಭವಿಸಿರುವುದಾಗಿ ಪ್ರತಿಕ್ರೀಯಿಸುತ್ತಾರೆ. ಗುತ್ತಿಗೆದಾರರ ನಿರ್ಲಕ್ಷ್ಯ ಧೋರಣೆಯಿಂದಾಗಿ ನಿಮರ್ಾಣ ಕಾರ್ಯ ಸ್ಥಗಿತ ಗೊಂಡಿರುವುದು ಮೇಲ್ನೋಟದಲ್ಲಿ ಕಂಡುಬರುತ್ತಿದೆ. ರಸ್ತೆ ಸೌಕರ್ಯವಿಲ್ಲದ ಕಾರಣ ರೋಗ ಪೀಡಿತ ಸಹೋದರಿಯನ್ನು ಚಿಕಿತ್ಸೆಗೆ ಕೊಂಡಯ್ಯಲು ಸಾಧ್ಯವಾಗುತ್ತಿಲ್ಲ ಎಂದು ಜಯಂತಿ ಹೇಳುತ್ತಾರೆ. ಗ್ರಾಮ ಕಛೇರಿ ಉದ್ಯೋಗಸ್ತರು ಧರಾಶಾಹಿಯಾದ ಮನೆಯ ಅವಲೋಕನ ನಡೆಸಿದ್ದಾರೆ. ಈ ಬಡ ಕುಟುಂಬಕ್ಕೆ ಸಂಬಂಧಿಸಿದ ಇಲಾಖೆ ಪರಿಹಾರ ಒದಗಿಸಿ ಶೀಘ್ರದಲ್ಲಿ ಯೋಗ್ಯ ಕ್ರಮ ಕೈಗೊಳ್ಳಬೇಕಾಗಿದೆ.