ಏಷ್ಯಾದ ಶ್ರೀಮಂತ ವ್ಯಕ್ತಿ; ಅಲಿಬಾಬಾ ಜಾಕ್ ಮಾ ಹಿಂದಿಕ್ಕಿದ ಮುಖೇಶ್ ಅಂಬಾನಿ
ನವದೆಹಲಿ: ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಲಿಬಾಬಾ ಡಾಟ್ ಕಾಮ್ ನ ಜಾಕ್ ಮಾ ಅವರನ್ನು ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಹಿಂದಿಕ್ಕಿದ್ದು, ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಬ್ಲೂಮ್ಬಗರ್್ ಶುಕ್ರವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ಅವರು ಅಲಿ ಬಾಬಾ ಡಾಟ್ ಕಾಂನ ಜಾಕ್ ಮಾ ಅವರನ್ನು ಹಿಂದಿಕ್ಕಿದ್ದಾರೆ. ಮುಖೇಶ್ ಅಂಬಾನಿ 44.3 ಬಿಲಿಯನ್ ಡಾಲರ್ ಸಂಪತ್ತು ಹೊಂದುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಜಾಕ್ ಮಾ ಅವರ ಒಟ್ಟು ಆಸ್ತಿ 44 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಮೂಲಕ ಅತ್ಯಂತ ಕಡಿಮೆ ಅಂತರದಿಂದ ಅಂಬಾನಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮಾರುಕಟ್ಟೆ 7 ಲಕ್ಷ ಕೋಟಿ ವರಮಾನ ಹೊಂದುವ ಮೂಲಕ ಟಿಸಿಎಸ್ನ ನಂತರ ಈ ಪ್ರಮಾಣದ ವಹಿವಾಟನ್ನು ನಡೆಸಿದ ದೇಶದ 2ನೇ ಸಂಸ್ಥೆಯಾಗಿ ದಾಖಲೆ ಬರೆದಿದೆ. ಈ ಬೆಳವಣಿಗೆಯ ನಂತರ ರಿಲಯನ್ಸ್ ಇಂಡಸ್ಟ್ರೀಸ್ನ ಷೇರು ಪ್ರಮಾಣದಲ್ಲಿಯೂ ಹೆಚ್ಚಳ ಕಂಡಿದ್ದು, ಇಂದು ಸಂಜೆಯೊಳಗೆ ಶೇ. 1.7ರಷ್ಟು ಹೆಚ್ಚಳಗೊಂಡಿದೆ.