ತರಬೇತಿಯಲ್ಲಿ ಲಭಿಸಿದ್ದು ತರಗತಿಯಲ್ಲಿ ಕಾಣಬೇಕು : ವಿದ್ಯಾಧಿಕಾರಿ ನಂದಿಕೇಶನ್
ಕಾಸರಗೋಡು: ವರ್ಷಕ್ಕೊಮ್ಮೆ ನಡೆಯುವ ಪುನ:ಶ್ಚೇತನ ಶಿಬಿರದಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಸ್ಕೌಟು ಗೈಡ್ ಅಧ್ಯಾಪಕರ ಕರ್ತವ್ಯ. ಅದೇ ರೀತಿ ಅಲ್ಲಿ ತಿಳಿದುಕೊಂಡ ವಿಚಾರಗಳನ್ನು ದಳದ ಸದಸ್ಯರಿಗೆ ತರಗತಿ ನಡೆಸುವಾಗ ಪ್ರತಿಬಿಂಬಿಸುವಂತೆ ಮಾಡಲು ಪ್ರಯತ್ನಿಸಬೇಕು ಎಂದು ಕೇರಳ ರಾಜ್ಯ ಭಾರತ್ ಸ್ಕೌಟ್ ಮತ್ತು ಗೈಡ್ ಕಾಸರಗೋಡು ಜಿಲ್ಲಾ ಮುಖ್ಯ ಆಯುಕ್ತರೂ ಆಗಿರುವ ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಹೇಳಿದರು.
ಅವರು ಕಾಸರಗೋಡು ಜಿಲ್ಲಾ ಮಟ್ಟದ ಸ್ಕೌಟ್ ಮತ್ತು ಗೈಡ್ ಅಧ್ಯಾಪಕರ ಪುನ:ಶ್ಚೇತನ ಶಿಬಿರಾಥರ್ಿಗಳನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ಪ್ರತಿಯೊಂದು ಶಾಲೆಯಲ್ಲೂ ಅತ್ಯಗತ್ಯವಾಗಿ ಒಂದಾದರೂ ಸ್ಕೌಟ್ ಗೈಡ್ ದಳವಿರಲೇಬೇಕು. ಆ ನಿಟ್ಟಿನಲ್ಲಿ ತಾನು ಶ್ರಮಿಸುವುದಾಗಿ ಭರವಸೆ ನೀಡಿದರಲ್ಲದೆ ಸದ್ಯವೇ ನಡೆಯಲಿರುವ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಮಾವೇಶದಲ್ಲಿ ಸ್ಕೌಟ್ ಮತ್ತು ಗೈಡ್ ಚಳವಳಿಯ ಮಾಹಿತಿ ತರಬೇತಿ ನೀಡಬೇಕು ಎಂದು ಕರೆಕೊಟ್ಟರು.
ಎರಡು ದಿನಗಳಲ್ಲಾಗಿ ನಡೆದ ತರಬೇತಿ ಶಿಬಿರವನ್ನು ಜಿಲ್ಲಾ ಗೈಡ್ ಆಯುಕ್ತೆ ಭಾರ್ಗವಿ ಕುಟ್ಟಿ ಉದ್ಘಾಟಿಸಿದರು. ಜಿಲ್ಲಾ ಸ್ಕೌಟ ಆಯುಕ್ತ ಗುರುಮೂತರ್ಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅನಂತರ ತರಬೇತಿಗೆ ನಾಯಕತ್ವವನ್ನು ವಹಿಸಿದರು. ಜಿಲ್ಲಾ ಗೈಡ್ ವಿಭಾಗದ ತರಬೇತಿ ಆಯುಕ್ತೆ ಆಶಾಲತಾ ಸ್ವಾಗತಿಸಿದರು. ಜಿಲ್ಲಾ ಕಾರ್ಯದಶರ್ಿ ಕಿರಣ್ ಪ್ರಸಾದ್ ವಂದಿಸಿದರು. ಮಂಜೇಶ್ವರ ಸ್ಥಳೀಯ ಸಂಸ್ಥೆಯ ಸಹಾಯಕ ಜಿಲ್ಲಾ ಆಯುಕ್ತ ವಿನೋದ ಚೇವಾರು, ಜಿಲ್ಲಾ ಸಂಘಟನೆ ಆಯುಕ್ತರಾದ ಪಿ.ಟಿ.ಉಷ, ಸಾಬು ತೋಮಸ್ ಸಹಾಯಕ ತರಬೇತುದಾರರಾಗಿ ಕಾರ್ಯನಿರ್ವಹಿಸಿದರು.