HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಪತ್ರಿಕಾ ವಿತರಕನಿಗೆ ಮಾಧ್ಯಮ ದಿನದಮದು ಗೌರವಾಭಿನಂದನೆ
    ಬದಿಯಡ್ಕ: ಪತ್ರಿಕೆ ಪ್ರತಿಯೊಬ್ಬ ಮನುಷ್ಯನ ಜೀವನದ ಒಂದು ಭಾಗ. ಸುದ್ದಿಗಳನ್ನು ಮನೆಬಾಗಿಲಿಗೆ ತಲುಪಿಸುವ ಈ ಸಂಗಾತಿಯನ್ನು ಬೆಳಗ್ಗಿನ ಜಾವ ಮನೆಮನೆಗಳಿಗೆ ತಲುಪಿಸುವ ಪತ್ರಿಕಾ ಮಾರಾಟಗಾರರ ಶ್ರಮ ಹಾಗೂ ಸಮಯಪ್ರಜ್ಞೆ ನಮ್ಮ ಗಮನಕ್ಕೆ ಬರುವುದೇ ಇಲ್ಲ. ಅಂತವರನ್ನು ಒಂದು ಸಂಘಟನೆ ಗುರುತಿಸಿ ಗೌರವಿಸಿದೆ ಎನ್ನುವುದು ಹೆಮ್ಮೆಯ ಹಾಗೂ ಪ್ರಶಂಸನೀಯ ವಿಷಯ ಎಂದು ಬದಿಯಡ್ಕ ಪಂಚಾಯತಿನ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಪ್ರಶಂಸಿದರು.
   ಅವರು ಭಾನುವಾರ ಪತ್ರಿಕಾ ದಿನಾಚರಣೆಯ ಅಂಗವಾಗಿ ಮೀಡಿಯಾ ಕ್ಲಾಸಿಕಲ್ ಕಾಸರಗೋಡು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪತ್ರಿಕಾ ಮಾರಾಟಗಾರರಾದ ಬೇಳ ಕುಮಾರಮಂಗಲದ ಶ್ರೀನಿವಾಸ ಭಟ್ ಇವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
   ಮೀಡಿಯಾ ಕ್ಲಾಸಿಕಲ್ ಸ್ಥಾಪಕರಾದ ಪತ್ರಕರ್ತ ಅಖಿಲೇಶ್ ನಗುಮುಗಂ ಜಗತ್ತನ್ನು ಅಂಗೈಯಲ್ಲಿ ತಂದು ನಿಲ್ಲಿಸುವ, ಸಚಿತ್ರ ವರದಿಗಳ ಮೂಲಕ ಜನಮಾನಸದಲ್ಲಿ ತನ್ನ ಮಹತ್ವವನ್ನು ಉಳಿಸಿಕೊಂಡಿರುವ ಪತ್ರಿಕೆಗಳಂತೆ ಅದನ್ನು ಮನೆಮನೆಗೆ ತಲುಪಿಸುವವರೂ ಗೌರವಕ್ಕೆ ಅರ್ಹರು ಎಂದು ಹೇಳಿದರು.
  ಶ್ರೀನಿವಾಸ ಭಟ್ ಕಳೆದ ಮೂವತ್ತೇಳು ವರ್ಷಗಳಿಂದ ಕಾಸರಗೋಡಿನಲ್ಲಿ ಮನೆಮನೆಗಳಿಗೆ ಪತ್ರಿಕೆ ಹಂಚುತ್ತಿದ್ದು ಈ ಕಾಯಕವೇ ಅವರ ಬದುಕಿಗೆ ಆಧಾರವಾಗಿದೆ. ಪತ್ರಿಕಾ ದಿನದಂದು ಅವರ ಪರಿಶ್ರಮ ಹಾಗೂ ಸುದೀರ್ಘ ಸೇವೆಯನ್ನು ಗುರುತಿಸಿ ಅವರ ನಿವಾಸಕ್ಕೆ ತೆರಳಿ ಶಾಲು ಹೊದಿಸಿ, ಹಣ್ಣುಹಂಪಲುಗಳನ್ನು ಹಾಗೂ ಅಕ್ಕಿಯನ್ನು ನೀಡಿ ಗೌರವಿಸಲಾಯಿತು.
ಪತ್ನಿ ಮಾಲಾ ಭಟ್ ಅವರೊಂದಿಗೆ ಕುಮಾರಮಂಗಲದಲ್ಲಿ ವಾಸವಾಗಿರುವ ಶ್ರೀನಿವಾಸ ಭಟ್ ಈಗಲೂ ಅದೇ ಕಾಯಕವನ್ನು ಪ್ರೀತಿಯಿಂದ ಮುನ್ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೀಡಿಯಾ ಕ್ಲಾಸಿಕಲ್ ಕಾರ್ಯದಶರ್ಿ ಕರುಣಾಕರನ್ ಆದೂರು, ಪ್ರೊ.ಎ. ಶ್ರೀನಾಥ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಶುಭ ಹಾರೈಸಿದರು. ದಯಾನಂದ, ವಸಂತ ಬಾರಡ್ಕ, ಅಶ್ವಿನ್ ಯಾದವ್ ಬದಿಯಡ್ಕ, ಬಾಲಸುಬ್ರಹ್ಮಣ್ಯ ಮವ್ವಾರ್ ಮುಂತಾದವರು ಜೊತೆಗಿದ್ದರು. ಕಬಡ್ಡಿ ತಾರೆ ರಮ್ಯಾ ಸ್ವಾಗತಿಸಿ ನಿತಿನ್ ವಂದಿಸಿಸದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries