HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಹಳೆಗನ್ನಡ ಸಾಹಿತ್ಯವು ಭಾಷೆ, ಸಂಸ್ಕೃತಿಯ ಅನನ್ಯ ಸಂಪತ್ತು
    ಮಧೂರು: ಕನ್ನಡವು ಎರಡು ಸಾವಿರ ವರ್ಷಗಳಿಗಿಂತ ಹಿಂದಿನ ಪವಿತ್ರ ಭಾಷೆಯಾಗಿದೆ. ಪ್ರಪ್ರಥಮ ರಾಷ್ಟ್ರಕವಿಯಾದ ದಿ.ಮಂಜೇಶ್ವರ ಗೋವಿಂದ ಪೈಗಳು ಕ್ರಿ.ಪೂ.2 ನೇ ಶತಮಾನದಿಂದಲೇ ಕನ್ನಡ ಪದಗಳು, ನುಡಿಗಟ್ಟುಗಳು ಪ್ರಯೋಗದಲ್ಲಿದ್ದುವು ಎಂದು ಸಂಶೋಧಿಸಿ ತಮ್ಮ ಲೇಖನದಲ್ಲಿ ದಾಖಲಿಸಿದ್ದಾರೆ. ಹಲ್ಮಿಡಿ, ಬಾದಾಮಿ ಶಿಲಾಶಾಸನಗಳು ಮತ್ತು ಇತ್ತೀಚೆಗೆ ಉಪಲಬ್ಧವಾದ ಅತ್ಯಂತ ಪ್ರಾಚೀನವಾದುದೆಂದು ಗುರುತಿಸಲ್ಪಟ್ಟ ತಾಳಗುಂದ ಶಿಲಾಶಾಸನ ಇತ್ಯಾದಿ ಕನ್ನಡ ಭಾಷೆ, ಸಾಹಿತ್ಯದ ಹಳಮೆ, ಭವ್ಯತೆಗೆ ಸಾಕ್ಷಿಯಾಗಿವೆ. ಪೂರ್ವದ ಹಳೆಗನ್ನಡ, ಹಳೆಗನ್ನಡ ಸಾಹಿತ್ಯವು ನಮ್ಮ ಭಾಷೆ, ಸಾಹಿತ್ಯ ಸಂಸ್ಕೃತಿಯ ಅನನ್ಯ ಸಂಪತ್ತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ.ಭಟ್ ಹೇಳಿದರು.
    ಅವರು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕವು ಡಯಟ್ ಮಾಯಿಪ್ಪಾಡಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
    ಹಳೆಗನ್ನಡ ಸಾಹಿತ್ಯದ ಸ್ವರೂಪ, ಲಕ್ಷಣ ಮತ್ತು ಹಿರಿಮೆ ಗರಿಮೆ ಕುರಿತು ನಿವೃತ್ತ ಪ್ರಾಂಶುಪಾಲ ಕವಿ. ಸಾಹಿತಿ, ಪ್ರೊ. ಪಿ.ಎನ್.ಮೂಡಿತ್ತಾಯ ಅವರು ಉಪನ್ಯಾಸ ನೀಡಿದರು. ಪೂರ್ವದ ಹಳೆಗನ್ನಡ, ಹಳೆಗನ್ನಡ ಸಾಹಿತ್ಯಕ್ಕೆ ಬೌದ್ಧರ, ಜೈನರ ಕೊಡುಗೆ ಅಪಾರವಾದುದು. ಕವಿರಾಜಮಾರ್ಗಂ, ವಡ್ಡಾರಾಧನೆ, ಆದಿಪುರಾಣ, ವಿಕ್ರಮಾಜರ್ುನ ವಿಜಯಂ, ಸಾಹಸ ಭೀಮ ವಿಜಯಂ, ಅಜಿತನಾಥ ಪುರಾಣ, ಶಾಂತಿ ಪುರಾಣ, ಯಶೋಧ ಚರಿತ್ರೆ, ಪಂಪ ರಾಮಾಯಣ ಮೊದಲಾದ ಕೃತಿಗಳನ್ನು ಹೆಸರಿಸುತ್ತಾ ಅವುಗಳ ಕುರಿತು ಉಪನ್ಯಾಸ ನೀಡಿದರು. ಚಂಪುವಿನ ಲಕ್ಷಣ, ಖ್ಯಾತ ಕನರ್ಾಟಕ ವೃತ್ಯಗಳು ಸ್ವರೂಪ ಇತ್ಯಾದಿ ವಿಷಯದ ಕುರಿತು ಉಪನ್ಯಾಸ ನೀಡಿದರು.
ಅಧ್ಯಾಪಕ ಇ.ಕೆ.ಸತ್ಯಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಟಿ.ಪುಷ್ಪಾ ಶುಭಹಾರೈಸಿದರು. ಪರಿಷತ್ತಿನ ಗೌರವ ಕಾರ್ಯದಶರ್ಿ ರಾಮಚಂದ್ರ ಭಟ್ ಪಿ. ಸ್ವಾಗತಿಸಿ, ಪರಿಷತ್ತಿನ ಪದಾಧಿಕಾರಿ ಸುಬ್ಬಣ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಥರ್ಿನಿಯರು ಪ್ರಾರ್ಥನೆ ಹಾಡಿದರು. ನಿಶಿತ್ ಕೆ.ಬಿ. ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries