HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಆಧುನಿಕ ಸ್ಪರ್ಶ ಇರಲಿ; ಪರಂಪರಾಗತ ಬೇಸಾಯವನ್ನು ಮರೆಯಬಾರದು-ನ್ಯಾಯವಾದಿ ಕೆ.ಶ್ರೀಕಾಂತ್-ಬೆಳ್ಳೂರಿನಲ್ಲಿ 'ಮಳೆ ಸೊಬಗು 2018' 
     ಮುಳ್ಳೇರಿಯ:ವಿಷಮುಕ್ತ ಆಹಾರ ಒದಗಿಸುವುದು ರೈತನ ಆದ್ಯ ಕರ್ತವ್ಯ. ವ್ಯವಸಾಯಕ್ಕೆ ಆಧುನಿಕ ಸ್ಪರ್ಶ ಬೇಕು.ಆದರೆ ಆಧುನಿಕತೆಯೇ ಬೇಸಾಯ ರೀತಿ ಆಗ ಕೂಡದು.ವಿಷಯುಕ್ತ  ರಾಸಾಯನಿಕಗಳ ಬಳಕೆ ರೈತನನ್ನು ಸಾವಯವ ಕೃಷಿ ಪದ್ಧತಿಯಿಂದ ವಿಮುಖರನ್ನಾಗುವಂತೆ  ಮಾಡಿದೆ. ಯಾವ ರೀತಿ ಕೃಷಿಗಾಗಿ ನವ ನವೀನ ರಾಸಾಯನಿಕ ವಿಷ ವಸ್ತುಗಳ ಬಳಕೆ ಮಾಡುತ್ತೇವೋ ಅದೇ ರೀತಿ  ಕಂಡು ಕೇಳರಿಯದ ಹೊಸ ಹೊಸ ಬಗೆಯ ರೋಗಗಳ ದಾಸರಾಗುತ್ತಿದ್ದೇವೆ. ವಿಷಯುಕ್ತ ಆಹಾರ ದೇಹದ ಆರೋಗ್ಯ ಕೆಡಿಸುತ್ತಿದೆಯಾದರೂ ಸಾವಯವ ಕೃಷಿ ಬಗ್ಗೆ ಗಂಭೀರ ಚಿಂತನೆ ಇನ್ನೂ ನಡೆಯುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
   ಬೆಳ್ಳೂರು ಗ್ರಾ.ಪಂ. ಕುಟುಂಬಶ್ರೀ ಆಶ್ರಯದಲ್ಲಿ ನಾಟೆಕಲ್ಲು ಕುದ್ವ ಗದ್ದೆಯಲ್ಲಿ ಭಾನುವಾರ ನಡೆದ  'ಮಳೆ ಸೊಬಗು 2018'  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
    ಪ್ರತಿಯೊಬ್ಬನಿಗೂ ವಿಷ ಮುಕ್ತ ಆಹಾರ ಸೇವನೆಯ ಹಕ್ಕಿದೆ. ಕೆಸರಲ್ಲಿ ದುಡಿದರೆ ಮಾತ್ರ ಮೊಸರು ಸವಿಯುವ ಭಾಗ್ಯ ಬರುವುದು. ಆಧುನಿಕತೆಯೊಂದಿಗೆ  ಸ್ಪಧರ್ಿಸುತ್ತಿರುವುದರಿಂದ ಭತ್ತದ ಕೃಷಿ  ಕುಂಠಿತವಾಗುತ್ತಾ ಬರುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದತ್ತ ಯುವ ಜನಾಂಗವನ್ನು ಸೆಳೆಯಲು ಇಂತಹ ಯತ್ನಗಳು ಅನಿವಾರ್ಯ ಎಂದು ಅವರು ತಿಳಿಸಿದರು.
    ಗ್ರಾಮ  ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್ ಕ್ರೀಡಾ ಮೇಳಕ್ಕೆ ಚಾಲನೆ ನೀಡಿದರು. ಸಿಡಿಎಸ್ ಅಧ್ಯಕ್ಷೆ ಸುಜಾತಾ ಎಂ. ಅಧ್ಯಕ್ಷತೆ ವಹಿಸಿ ಆಹಾರ ಸುರಕ್ಷೆ, ಹರಿ ಶ್ರೀ ಯೋಜನೆಗಳನ್ನು ಪರಿಚಯಿಸಿ ಪರಂಪರಾಗತ ಬೇಸಾಯದ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಜನರು ಕೃಷಿಯ ಕಡೆಗೆ ಆಸಕ್ತಿ ತೋರಬೇಕು ಎಂದರು.
    ಸ್ಥಾಯೀ ಸಮಿತಿ ಅಧ್ಯಕ್ಷರಾದ ಮಾಲತಿ ಜೆ ರೈ, ಗೀತಾ ಕೆ, ಕಾರಡ್ಕ  ಬ್ಲಾಕ್ ಪಂ. ಸದಸ್ಯರಾದ ಶ್ರೀಧರ ಎಂ, ಸತ್ಯವತಿ ಸಿ.ರೈ, ಪಂ. ಸದಸ್ಯರಾದ ವಿಶಾಲಾಕ್ಷಿ ಬಿ. ಆರ್., ಜಯಕುಮಾರ್ ಕೆ. ಉಷ, ರಾಧಾ ವಿ., ಸುಜಾತ ಎಂ.ರೈ ಕುಟುಂಬಶ್ರೀ ಜಿಲ್ಲಾ ಮಿಶನ್ ತರಬೇತುದಾರ ಸುಕುಮಾರನ್ ಬೆಳ್ಳೂರು ಶುಭ ಹಾರೈಸಿದರು.
     ಕೆ.ಶ್ರೀಕಾಂತ್ ಸ್ವಯಂ ಕೆಸರು ಗದ್ದೆಗಿಳಿದು ಆಹಾರ ಸುರಕ್ಷತೆ, ಗುಣಮಟ್ಟ ಭದ್ರತೆಯ ಪ್ರಮಾಣವಚನವನ್ನು ಬೋಧಿಸಿದರು.
     ಸಾರ್ವಜನಿಕರಿಗೆ ಹಾಗೂ ಬಾಲ ಸಭಾ ಮಕ್ಕಳಿಗೆ ನಾನಾ ಸ್ಪಧರ್ೆಗಳನ್ನು ಏರ್ಪಡಿಸಲಾಯಿತು. ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಹಾಗೂ  ಉತ್ತಮ ಕೃಷಿ ಸಂಘ ಪ್ರಶಸ್ತಿ ವಿಜೇತ ಮೂರನೇ ವಾಡರ್್ ನ ಪ್ರಗತಿ ಗುಂಪು, ಸಂಘ ಕೃಷಿ ಪದ್ಧತಿಯ ಉತ್ತಮ ಕೃಷಿಕೆ ಕಸ್ತೂರಿ, ರಾಷ್ಟ್ರ ಮಟ್ಟದ ವಾಲೀಬಾಲ್ ಆಟಗಾರ ಗಣೇಶ್ ರೈ, ಜಿಲ್ಲಾ ಮಟ್ಟದ ಕುಟುಂಬ ಶ್ರೀ ಕಲೋತ್ಸವದಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
  ಕುಟುಂಬಶ್ರೀ ಸದಸ್ಯೆ ಸುರೇಖಾ ಪ್ರಾಥರ್ಿಸಿ ಸಿಡಿಎಸ್ ಕಾರ್ಯದಶರ್ಿ, ಪಂಚಾಯಿತಿ ಗ್ರಾಮ ವಿಸ್ತರಣಾಧಿಕಾರಿ ಮಹಾದೇವ ಹೆಬ್ಬಾರ್ ಸ್ವಾಗತಿಸಿ ಲೆಕ್ಕ ಪರಿಶೋಧಕಿ ನಿವೇದಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕುಂಬ್ಡಾಜೆ ಗ್ರಾ.ಪಂ.ಕುಟುಬಶ್ರೀ ಸಿಡಿಎಸ್ ಅಧ್ಯಕ್ಷೆ ಮೀನಾಕ್ಷಿ,  ಬೆಳ್ಳೂರು ಸಹಕಾರಿ ಬ್ಯಾಂಕ್ ಆಡಳಿತ ನಿದರ್ೇಶಕ ಚಂದ್ರ ಶೇಖರ ಆಚಾರ್ಯ, ಕುಟುಂಬಶ್ರೀ ಎಡಿಎಸ್, ಸಿಡಿಎಸ್ ಸದಸ್ಯರು, ಬಾಲ ಸಭಾ ಮಕ್ಕಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, ಊರ ಪರಊರ ಸಾರ್ವಜನಿಕರು ಉಪಸ್ಥಿತರಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries