HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಶಾಲೆಗಳ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಾರ್ವಜನಿಕ ಸಹಭಾಗಿತ್ವ ಅಗತ್ಯ-ಜಿ.ಪಂ.ಅಧ್ಯಕ್ಷ ಎಜಿಸಿ ಬಶೀರ್.
          ನಾರಾಯಣಮಂಗಲ ಶಾಲೆಯಲ್ಲಿ ಕಲಿಕೋಪಕರಣ ವಿತರಣಾ ಕಾರ್ಯಕ್ರಮ
    ಕುಂಬಳೆ: ಸರಕಾರಿ ಶಾಲೆಗಳ ವಿದ್ಯಾಭ್ಯಾಸ ಗುಣಮಟ್ಟವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸಾರ್ವಜನಿಕ ಶಿಕ್ಷಣ ಯಜ್ಞದ ಮೂಲಕ ಯೋಜನೆಯನ್ನು ಜಾರಿಗೊಳಿಸುತ್ತಿದೆ.  ಸಹೃದಯ ನಾಗರಿಕರ ಸಹಭಾಗಿತ್ವದಲ್ಲಿ ಶಿಕ್ಷಣ ವ್ಯವಸ್ಥೆಗೆ ಹೊಸ ಕಾಯಕಲ್ಪ ನೀಡುವಲ್ಲಿ ಪ್ರತಿಯೊಬ್ಬರೂ ಕೈಜೊಡಿಸಿದಾಗ ಮುಂದಿನ ನಾಗರಿಕ ಪ್ರಪಂಚ ಸುದೃಢವಾಗಿ ಬೆಳೆಯಬಲ್ಲದು ಎಂದು ಜಿಲ್ಲಾ ಪಂಚಾಯತು ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಭಿಪ್ರಾಯ ವ್ಯಕ್ತಪಡಿಸಿದರು.
   ನಾರಾಯಣಮಂಗಲದ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಸೋಮವಾರ ಆಯೋಜಿಸಲಾಗಿದ್ದ ಉಚಿತ ಕಲಿಕೋಪಕರಣ ವಿತರಣಾ ಸಮಾರಂಭವನ್ನು ಉದ್ಘಾಟಿಸಿ, ಕಲಿಕೋಪಕರಣ ವಿತರಿಸಿ ಅವರು ಮಾತನಾಡಿದರು.
   ಭಾರತೀಯ ಪರಂಪರೆಯು ವಿದ್ಯೆ ಹಾಗೂ ಗುರುವಿಗೆ ನೀಡಿರುವ ಮಹತ್ವವು ವಿಶಿಷ್ಟವಾದುದು. ಜ್ಞಾನ ಸಂಪಾದನೆಯ ಮಾರ್ಗದ ಪ್ರಮುಖ ಘಟ್ಟವಾದ ಶಾಲಾ ವಿದ್ಯಾಭ್ಯಾಸವನ್ನು ಗ್ರಾಮೀಣ ಪ್ರದೇಶಗಳಲ್ಲಿ ಗುಣಾತ್ಮಕವಾಗಿ ಉನ್ನತಿಗೇರಿಸುವಲ್ಲಿ ಇನ್ನಷ್ಟು ಯತ್ನಗಳು ನಮ್ಮಲ್ಲಿ ನಡೆಯಬೇಕಿದೆ ಎಂದು ಅವರು ತಿಳಿಸಿದರು. ವಿವಿಧ ಸಂಪನ್ಮೂಲಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸುವ ಸಾಮಥ್ರ್ಯ ಎಲ್ಲಾ ಶಾಲೆಗಳಿಗೂ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ನಾರಾಯಣಮಂಗಲ ಶಾಲೆಯ ವಿದ್ಯಾಥರ್ಿಗಳ ಶ್ರೇಯೋಭಿವೃದ್ದಿಗೆ ಸ್ಥಳೀಯ ಮಹನೀಯರು ನೀಡುತ್ತಿರುವ ಕೊಡುಗೆಗಳು ಮಾದರಿ ಎಂದು ಅವರು ಶ್ಲಾಘಿಸಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅವರು ಮಾತನಾಡಿ, ವಿದ್ಯಾಥರ್ಿಗಳ ಸರ್ವತೋಮುಖ ವಿಕಾಸಕ್ಕೆ ಕಾರ್ಯವೆಸಗುವ ವಿದ್ಯಾಸಂಸ್ಥೆಗಳು ನಾಡಿನ ಬೆಳಕಾಗಿದ್ದು, ಪರಿಸರದ ನಾಗರಿಕರ ಸಹಕಾರ, ನೆರವುಗಳೊಂದಿಗೆ ಉತ್ತಮ ಸೌಕರ್ಯಗಳ ಸರಕಾರಿ-ಅನುದಾನಿತ ವಿದ್ಯಾಸಂಸ್ಥೆಗಳನ್ನು ಮುನ್ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು. ನಗರ ಪ್ರದೇಶಗಳಲ್ಲಿ ಇಂದು ಸೌಕರ್ಯಗಳಿರುವ ಶಾಲೆಗಳಿದ್ದರೂ ಕಲಿಕೆಗೆ ಪೂರಕ ವಾತಾವರಣ ಲಭ್ಯವಾಗುತ್ತಿಲ್ಲ. ಆದರೆ ನಾರಾಯಣಮಂಗಲದಂತಹ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳೊಂದಿಗೆ ಶಾಲೆ ಮುನ್ನಡೆಯುತ್ತಿರುವುದು ಸ್ಥಳೀಯರ ಅಹನರ್ಿಶಿ ಪ್ರಯತ್ನದಿಂದ ಎಂದು ಅವರು ತಿಳಿಸಿದರು.
    ಕುಂಬಳೆ ಗ್ರಾ.ಪಂ. ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್, ಬ್ಲಾಕ್ ಪಂಚಾಯತು ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಐತ್ತಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ಹೇಮಲತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಸ್ಮಿತಾಕುಮಾರಿ ವಂದಿಸಿದರು. ಸಮಾರಂಭದಲ್ಲಿ ಸ್ಥಳಿಯರಾದ ಬಾಲಸುಬ್ರಹ್ಮಣ್ಯ ಕೆ ಕೊಡುಗೆಯಾಗಿ ನೀಡಿದ ಉಚಿತ ಪುಸ್ತಕಗಳನ್ನು ಶಾಲೆಯ ವತಿಯಿಂದ ನೀಡಲಾದ ಸಮವಸ್ತ್ರಗಳನ್ನು ವಿತರಿಸಲಾಯಿತು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries