HEALTH TIPS

No title

               ಬೇಂಗಪದವು ಶಾಲಾ ವಿದ್ಯಾಥರ್ಿಗಳಿಗೆ ಭತ್ತದ ಕೃಷಿ ಪ್ರಾತ್ಯಕ್ಷಿಕೆ
   ಪೆರ್ಲ: ಸಾಂಪ್ರದಾಯಿಕ ಭತ್ತದ ಬೇಸಾಯದ ಬಗ್ಗೆ ವಿದ್ಯಾಥರ್ಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬೇಂಗಪದವು ಶ್ರೀಗಿರಿಜಾಂಬಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಮೂರು ಹಾಗೂ ನಾಲ್ಕನೇ ತರಗತಿಯ ಮಕ್ಕಳಿಗೆ ಗದ್ದೆ ಪ್ರವಾಸ ಏರ್ಪಡಿಸಲಾಯಿತು.
   ಪೂವನಡ್ಕದ ಕೋಟ್ಯಣ್ಣ ರೈಗಳ ಗದ್ದೆಗೆ ಭೇಟಿ ನೀಡಿದ ವಿದ್ಯಾಥರ್ಿಗಳಿಗೆ ನೇಜಿ ನೆಡುವುದು ಮತ್ತು ಕೀಳುವ ಕ್ರಮಗಳು, ಭತ್ತ ಬೇಸಾಯದ ಪ್ರಾಥಮಿಕ ಅಗತ್ಯಗಳು, ಕೈಗೊಳ್ಳಬೇಕಾದ ಗದ್ದೆಯ ವ್ಯವಸ್ಥೆಗಳ ಬಗ್ಗೆ ವಿದ್ಯಾಥರ್ಿಗಳಿಗೆ ಕೋಟ್ಯಣ್ಣ ರೈ ಮಾಹಿತಿ ಪ್ರಾತ್ಯಕ್ಷಿಕೆ ನೀಡಿದರು.
   ಗ್ರಾಮೀಣ ಪ್ರದೇಶವಾದ ಬೇಂಗಪದವಿನ ಸ್ಥಳೀಯ ಬಡ-ಮದ್ಯಮ ವರ್ಗದ ಜನಸಾಮಾನ್ಯರ ಮಕ್ಕಳ ಏಕೈಕ ವಿದ್ಯಾಕೇಂದ್ರವಾಗಿ, ಸಮಗ್ರ ಶಿಕ್ಷಣವನ್ನು ನೀಡುವಲ್ಲಿ ಗುರುತಿಸಿಕೊಂಡಿರುವ ಬೇಂಗಪದವು ಅನುದಾನಿತ ಶಾಲಾ ಶಿಕ್ಷಣ ವ್ಯವಸ್ಥೆ ಇತರೆಡೆಗಳಿಗೆ ಮಾದರಿಯಾಗಿದೆ. ಪ್ರತಿವರ್ಷವೂ ವೈವಿಧ್ಯಮಯ ಕಲಿಕಾ ಕಮ್ಮಟಗಳು, ಶಿಬಿರ, ಭೇಟಿಗಳನ್ನು ವಿಶೇಷವಾಗಿ ಏರ್ಪಡಿಸುವ ಮೂಲಕ ಗ್ರಾಮೀಣ ಮಕ್ಕಳ ಕಲಿಕಾ ಮಟ್ಟದ ಗರಿಷ್ಠ ಸುವ್ಯವಸ್ಥೆಗೆ ಇಲ್ಲಿ ಅವಕಾಶ ನೀಡಲಾಗುತ್ತಿದ್ದು, ಶಾಲಾಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರ ಅಹನರ್ಿಶಿ ಪ್ರಯತ್ನ ಶ್ಲಾಘನೀಯವಾಗಿ ಗುರುತಿಸಲ್ಪಡುತ್ತಿದೆ.
    ಮುಖ್ಯೋಪಾಧ್ಯಾಯ ಶಿವಕುಮಾರ್, ಶಿಕ್ಷಕಿಯರಾದ ಯಕ್ಷಿತಾ, ಶಿಲ್ಪ ಸಂಯೋಜಕಕರಾಗಿ ಕೃಷಿ ಪ್ರಾತ್ಯಕ್ಷಿಕಾ ಭೇಟಿಗೆ ಸಹಕರಿಸಿದರು.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries