HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                            ರೊಚ್ಚಿಗೆದ್ದ ಹಕ್ಕಿನ ಹೋರಾಟ
                       ಕನ್ನಡ ವಿದ್ಯಾಥರ್ಿಗಳಿಂದ ತರಗತಿ ಬಹಿಷ್ಕಾರ
     ಉಪ್ಪಳ: ಮಂಗಲ್ಪಾಡಿ ಸರಕಾರಿ ಹೈಸ್ಕೂಲು(ಕುಕ್ಕಾರು) ಕನ್ನಡ ಗಣಿತ ಶಿಕ್ಷಕರ ಹುದ್ದೆಗೆ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿ ಮಲೆಯಾಳ ಶಿಕ್ಷಕರನ್ನು ನೇಮಿಸಿರುವುದನ್ನು ವಿರೋಧಿಸಿ ಸೋಮವಾರ ಶಾಲೆಯಲ್ಲಿ ಕನ್ನಡ ವಿದ್ಯಾಥರ್ಿಗಳು ತರಗತಿ ಬಹಿಷ್ಕಾರ ನಡೆಸಿ ಪ್ರತಿಭಟನೆ ನಡೆಸಿದರು.
   ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನ ಗಣಿತ ಶಿಕ್ಷಕರಾಗಿ ಕಳೆದ ಸೋಮವಾರ ಮಲೆಯಾಳಿ ಶಿಕ್ಷಕನೋರ್ವನನ್ನು ಇಲಾಖೆ ನೇಮಿಸಿತ್ತು. ಆದರೆ ಭಾಷಾ ಅಲ್ಪಸಂಖ್ಯಾತ ಗಡಿನಾಡ ಕನ್ನಡಿಗರ ಸಾಂವಿಧಾನಿಕ ಹಕ್ಕುಗಳಲ್ಲೊಂದಾದ ಕನ್ನಡ ಶಾಲೆಗಳ ಯಾವುದೇ ಪಠ್ಯ ಬೋಧನೆಗೆ(ಭಾಷೆ ಹೊರತುಪಡಿಸಿ) ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಿಸಬೇಕೆಂಬ ಆದೇಶವನ್ನು ಸಂಪೂರ್ಣ ಗಾಳಿಗೆ ತೂರಿ ಈ ನೇಮಕಾತಿ ಮಾಡಲಾಗಿತ್ತು. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಕನ್ನಡಿಗರ ಹಕ್ಕನ್ನು ಕಸಿಯಲಾಗಿದೆ ಎಂಬ ಕಾರಣಗಳಿಂದ ಶಾಲಾ ರಕ್ಷಕ ಶಿಕ್ಷಕ ಸಮಿತಿಯು ಕನ್ನಡ ಹೋರಾಟ ಸಮಿತಿಯ ಸಹಕಾರದೊಂದಿಗೆ ಸೋಮವಾರ ತರಗತಿ ಬಹಿಷ್ಕಾರ ಚಳವಳಿ ನಡೆಸಿತು.
   ತರಗತಿ ಬಹಿಷ್ಕಾರ ಮತ್ತು ಪ್ರತಿಭಟನೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಅಂಬಾರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಯಾವ ಕಾರಣಕ್ಕೂ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಗೆ ಅವಕಾಶ ನೀಡಲಾಗದು. ಆ ಮೂಲಕ ಮಲೆಯಾಳ ಹೇರಿಕೆಯ ಯತ್ನ ಖಂಡನಾರ್ಹವಾಗಿದೆ ಎಂದು ತಿಳಿಸಿದರು. ಗಣಿತದಂತಹ ಸವಾಲಿನ ಪಠ್ಯಗಳನ್ನು ಮಾತೃಭಾಷೆಯಲ್ಲೇ ಕಲಿಸುವುದು ಸೂಕ್ತವಾಗಿದ್ದು, ಅರ್ಥವಾಗದ ಭಾಷಾ ಶಿಕ್ಷಕನನ್ನು ನೇಮಕಿಸುವ ಮೂಲಕ ವಿದ್ಯಾಥರ್ಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದರು.
  ಶಾಲಾ ಮಾತೃಸಂಘದ ಅಧ್ಯಕ್ಷೆ ಯಶೋಧಾ ಶೆಟ್ಟಿ, ಕನ್ನಡ ಹೋರಾಟ ಸಮಿತಿಯ ಕಾರ್ಯದಶರ್ಿ ಭಾಸ್ಕರ ಕುಂಬಳೆ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳಾದ ವಿಜಯ ರೈ ಮಂಗಲ್ಪಾಡಿ, ರವಿ ಹೇರೂರು, ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಚೆರುಗೋಳಿ ಮೊದಲಾದವರು ಮಾತನಾಡಿದರು.
   ಮುಗಿಲು ಮುಟ್ಟಿದ ಘೋಷಣೆ:
   ಹೈಸ್ಕೂಲಿನ ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿಗಳ ಕನ್ನಡ ಮಾಧ್ಯಮಗಳ ಸುಮಾರು 420 ವಿದ್ಯಾಥರ್ಿಗಳು ಸೋಮವಾರ ಬೆಳಿಗ್ಗೆ ತರಗತಿ ಆರಂಭವಾಗುತ್ತಿರುವಂತೆ ಘೋಷಣೆಗಳನ್ನು ಕೂಗಿ ತರಗತಿ ಬಹಿಷ್ಕರಿಸಿದರು. ಕನ್ನಡ ಬಲ್ಲ ಶಿಕ್ಷಕರನ್ನು ನೇಮಿಸುವ ವರೆಗೆ ತರಗತಿಗೆ ಪ್ರವೇಶಿಸುವುದಿಲ್ಲ, ನಮ್ಮ ಭವಿಷ್ಯವನ್ನು ಡೋಲಾಯಮಾನಗೊಳಿಸಿ ಅಧಃಪತನಕ್ಕೆ ತಳ್ಳುವ ಯತ್ನಗಳಿಗೆ ಬಲಿ ಬೀಳುವುದಿಲ್ಲ, ನಮ್ಮ ಹಕ್ಕನ್ನು ಸಂರಕ್ಷಿಸುವಲ್ಲಿವರೆಗೆ ಹೋರಾಡುತ್ತೇವೆ ಎಂಬಿತ್ಯಾದಿ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿ ಕನ್ನಡದ ಹಕ್ಕಿನ ಉಲ್ಲಂಘನೆಯ ಬಗ್ಗೆ ರಣ ಕಹಳೆಯೂದಿದರು.
   ಬಳಿಕ ರಕ್ಷಕ ಶಿಕ್ಷಕ ಸಮಿತಿ ಸಮಾಲೋಚನೆ ನಡೆಸಿ ಮಂಗಳವಾರ(ಇಂದು) ಸಂಜೆಯ ಮೊದಲು ನೇಮಕಾತಿ ನೀಡಲಾದ ಮಲೆಯಾಳ ಶಿಕ್ಷಕನ ಬದಲಿಗೆ ಕನ್ನಡ ಶಿಕ್ಷಕರ ನೇಮಕಾತಿಗಾಗಿ ತರಗತಿ ಬಹಿಷ್ಕಾರದಿಂದ ಹಿಂದೆ ಸರಿದಿರುವುದಾಗಿ ಪ್ರಕಟಿಸಿದರು. ಬುಧವಾರ ಬೆಳಿಗ್ಗೆ ಕನ್ನಡ ಶಿಕ್ಷಕರನ್ನು ನೇಮಿಸದಿದ್ದಲ್ಲಿ ಬೇಡಿಕೆ ಈಡೇರುವವ ವರೆಗೆ ನಿರಂತರ ಬಹಿಷ್ಕಾರ ನಡೆಸಲು ಈ ಸಂದರ್ಭ ತೀಮರ್ಾನಿಸಿರುವುದಾಗಿ ಪ್ರಕಟಿಸಿದರು.
   ಭಾಷಾ ರಾಜಕೀಯ(ಒಳ)ಸುಳಿ:
   ಸೋಮವಾರ ಒಂದೆಡೆ ಹೈಸ್ಕೂಲು ವಿದ್ಯಾಥರ್ಿಗಳು ತರಗತಿ ಬಹಿಷ್ಕಾರ ನಡೆಸಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವಂತೆ ಕೆಲವು ಮಲೆಯಾಳ ಮಾಧ್ಯಮ ವಿದ್ಯಾಥರ್ಿಗಳೂ ತರಗತಿಯಿಂದ ಹೊರಬಂದು ಕನ್ನಡ ವಿದ್ಯಾಥರ್ಿಗಳಿಗೆದುರಾಗಿ ಘೋಷಣೆ ಕೂಗತೊಡಗಿ ಗಲಭೆಗೆ ಯತ್ನಿಸಿದರು. ಈ ವೇಳೆ ವಿದ್ಯಾಥರ್ಿಗಳೊಳಗೇ ಕಲಹ ಏರ್ಪಟ್ಟು ಒಂದಷ್ಟು ಗಲಿಬಿಲಿಯ ವಾತಾವರಣ ಸೃಷ್ಟಿಯಾಯಿತು. ಈ ಸಂದರ್ಭ ಶಿಕ್ಷಕರು, ರಕ್ಷಕ ಶಿಕ್ಷಕ ಸಂಘ ವಿದ್ಯಾಥರ್ಿಗಳನ್ನು ನಿಯಂತ್ರಿಸಬೇಕಾಯಿತು.
   ಫಲಕಗಳ ನಾಶ:
  ಕನ್ನಡ ವಿದ್ಯಾಥರ್ಿಗಳು ಹಿಡಿದಿದ್ದ ಘೋಷವಾಕ್ಯಗಳ ಫಲಕಗಳಲ್ಲಿ ಕೆಲವನ್ನು ಮಲೆಯಾಳ ವಿದ್ಯಾಥರ್ಿಗಳು ಹರಿದು ಹಾಕಿ ಗೊಂದಲ ಸೃಷ್ಟಿಯಾಗಿ ಕಲಹ ತಾರಕ್ಕೇರಿತು. ಬಳಿಕ ಮಲೆಯಾಳಿ ವಿದ್ಯಾಥರ್ಿಗಳಿಗೆ ತಿಳಿಹೇಳಿ ಇಂತಹ ಘಟನೆಗಳು ಪುನರಾವರ್ತನೆಯಾಗುವುದು ಬೇಡ. ಇದು ಕನ್ನಡಿಗರ ಹಕ್ಕಿಗಾಗಿರುವ ಪ್ರತಿಭಟನೆಯಾಗಿದೆ ಎಂದು ತಾಕೀತು ನೀಡಲಾಯಿತು.
   ಪತ್ರಕತರ್ೆಯ ಮೇಲೆ ಹರಿಹಾಯ್ದ ಘಟನೆ:
   ವಿದ್ಯಾಥರ್ಿಗಳೊಳಗೆ ಉಂಟಾದ ಚಕಮಕಿಯ ಮಧ್ಯೆ ಘಟನೆಯ ವರದಿಗೆ ಆಗಮಿಸಿದ್ದ ಕನ್ನಡ ಪತ್ರಿಕೆಯ ವರದಿಗಾತರ್ಿಯ ಮೇಲೆ ಮಲೆಯಾಳಿ ವಿದ್ಯಾಥರ್ಿ ಹರಿಹಾಯ್ದ ಘಟನೆಯೂ ನಡೆಯಿತು. ಹಿರಿಯ ಪ್ರಾಥಮಿಕ ಶಾಲೆಯ ಮಲೆಯಾಳ ಮಾಧ್ಯಮದ ಮುಹಮ್ಮದ್ ಎಂಬ ವಿದ್ಯಾಥರ್ಿ ಪತ್ರಕತರ್ೆಯನ್ನು ಬೆದರಿಸಿ ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ. ನಾವು ಕನ್ನಡ ಹೋರಾಟಕ್ಕೆ ಅವಕಾಶ ನೀಡೆವು. ಕೂಡಲೇ ಹೊರಟುಹೋಗಿ ಎಂದು ಬೆದರಿಸಿದ್ದು, ಪತ್ರಕತರ್ೆ ಗದರಿದಾಗ ಕಾಯ್ಕಿತ್ತ ವಿದ್ಯಾಥರ್ಿ ಬಳಿಕ ಕನ್ನಡ ವಿದ್ಯಾಥರ್ಿಗಳ ವಿರುದ್ದ ಮಲೆಯಾಳಿ ವಿದ್ಯಾಥರ್ಿಗಳು ನಡೆಸಿದ ಚಕಮಕಿಯಲ್ಲಿ ಮುಂಚೂಣಿಯಲ್ಲಿ ನಿಂತಿರುವುದು ಕಂಡುಬಂತು.
   ಪತ್ರಕತರ್ೆಯನ್ನು ಹರಿಹಾಯ್ದ ವಿದ್ಯಾಥರ್ಿಯ ಆಟೋಪವನ್ನು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಕಟುವಾಗಿ ಖಂಡಿಸಿದ್ದು, ಇಂತಹ ಹೇಯ ಕೃತ್ಯ ಪುನರಾವರ್ತನೆಯಾದರೆ ಕಾನೂನು ಹೋರಾಟದ ಮೂಲಕ ಹಕ್ಕುಚ್ಯುತಿ, ಕರ್ತವ್ಯಕ್ಕೆ ಅಡ್ಡಿ ದೂರು ನೀಡಲಾಗುವುದೆಂದು ಎಚ್ಚರಿಸಿದೆ.
   ಇದೇ ಪ್ರಥಮ ಅಲ್ಲ:
   ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾಥರ್ಿಗಳಿಗೆ ಮಲೆಯಾಳಿ ಶಿಕ್ಷಕರನ್ನು ನೇಮಿಸುವ ಯತ್ನ ಸುಮಾರು ಐದು ವರ್ಷಗಳ ಹಿಂದೆಯೇ ನಡೆದಿತ್ತು. ಅಂದು 3 ಮಲೆಯಾಳಿ ಶಿಕ್ಷಕರನ್ನು ಗಡಿ ತಾಲೂಕು ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಶಾಲೆಗಳಿಗೆ ನೇಮಿಸಲಾಗಿತ್ತು. ಈ ಸಂದರ್ಭ ಬದಿಯಡ್ಕದ ಬೊಳ್ಪು ಸಂಘಟನೆ ತೀವ್ರ ಹೋರಾಟ ನಡೆಸಿ ನ್ಯಾಯಾಲಯದ ಮೂಲಕ ಹೋರಾಟ ನಡೆಸಿ ಜಯಗಳಿಸಿತ್ತು. ಆ ಬಳಿಕ ಎರಡು ವರ್ಷಗಳ ಹಿಂದೆ ಹೊಸದುರ್ಗ ಉಪಜಿಲ್ಲೆಯ ಬಂದಡ್ಕ ಶಾಲೆಗೆ ಮಲೆಯಾಳಿ ಶಿಕ್ಷಕಿಯನ್ನು ನೇಮಿಸಲು ಆದೇಶಿಸಿತ್ತು. ಆ ಸಂದರ್ಭ ಹೊಸದುರ್ಗ ತಾಲೂಕು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಯಶಸ್ವಿಯಾಯಿತು. ಆ ಬಳಿಕ ಇದೀಗ ಮತ್ತೆ ಅಂತದೇ ಯತ್ನ ನಡೆದಿದೆ.
   ಇನ್ನೂ ಐವರು ಬರುವರಿದ್ದಾರೆ:
   ಕಳೆದ ವರ್ಷ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಯ ವಿಜ್ಞಾನ ವಿಭಾಗಕ್ಕೆ ಇನ್ನೂ ಐವರು ಮಲೆಯಾಳಿ ಶಿಕ್ಷಕರು ಆಯ್ಕೆಗೊಂಡಿದ್ದು, ನೇಮಕಾತಿ ಆದೇಶಗಳಿಗೆ ಕಾಯುತ್ತಿರುವುದಾಗಿ ಮಾಹಿತಿ ಲಭಿಸಿದೆ. ಈ ವಷರ್ಾಂತ್ಯದೊಳಗೆ ಅವರ ನೇಮಕಾತಿ ನಡೆಯುವ ಸಾಧ್ಯತೆಗಳಿದ್ದು ಇದು ಇನ್ನಷ್ಟು ಪ್ರತಿಭಟನೆಗಳಿಗೆ ಕಾರಣವಾಗಲಿದೆ. ಅಲ್ಲದೆ ಕಳೆದ ವರ್ಷ ಲೋಕಸೇವಾ ಆಯೋಗ ನಡೆಸಿದ ಸಮಾಜ ಶಾಶ್ತ್ರ ಪರೀಕ್ಷೆಗಳಲ್ಲೂ ಕನ್ನಡ ವಿಭಾಗಕ್ಕೆ ಮಲೆಯಾಳ ಶಿಕ್ಷಕರು ಪರೀಕ್ಷೆ ಬರೆದಿರುವುದಾಗಿ ಮಾಹಿತಿ ಲಭಿಸಿದೆ. ಅದರ ಆದೇಶಗಳು ಇನ್ನಷ್ಟೇ ಬರಲಿದೆ ಎಂದು ಬಲ್ಲಮೂಲಗಳು ಮಾಹಿತಿ ನೀಡಿದ್ದಾರೆ.






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries