HEALTH TIPS

No title

             ಕನ್ನಡ ಗಝಲ್
                   ಕವಯಿತ್ರಿ ಚೇತನಾ ಕುಂಬಳೆ:
ಬರಿದಾಗಿದ್ದ ಮನದಲ್ಲಿ ಹೊಸ ಅಲೆಗೆ ಕಾರಣ.ನೀನಾದೆ
ನಡೆವ ಹಾದಿಯಲ್ಲಿ ಹೊಸ ತಿರುವಿಗೆ ಕಾರಣ ನೀನಾದೆ
  ಬಾಳ ದಾರಿಯಲ್ಲಿ  ಅನಿರೀಕ್ಷಿತ  ಭೇಟಿ ನಿನ್ನದು
  ಅರಳಿದ ಹೊಸ ಸ್ನೇಹದ ಬೆಸುಗೆಗೆ ಕಾರಣ ನೀನಾದೆ
ಕುಂಟು ನೆಪಗಳಿಗೆ ಜಗಳವಾಡಿ ಮುನಿಸಿಕೊಂಡದ್ದೆಷ್ಟೋ
ನಿಂತ ಮಾತುಗಳ ನಿರಂತರ ಹರಿವಿಗೆ ಕಾರಣ ನೀನಾದೆ
  ಮಾಡಿದ ಭೇಟಿಗಳಿಗೆ ಆಡಿದ ನುಡಿಗಳಿಗೆ ಲೆಕ್ಕವಿಲ್ಲ
  ಕೂಡಿಟ್ಟ ನೆನಪುಗಳಲ್ಲಿದ್ದ ಸಿಹಿಗೆ ಕಾರಣ ನೀನಾದೆ
ತನುವಿನ ಮನ ಬಯಸಿದ್ದೂ ನಿನ್ನಂಥವರ ಸಂಗವನ್ನೇ
ನನ್ನೊಳಗಿನ ಕವಿತೆಯ ಉಸಿರಿಗೆ ಕಾರಣ ನೀನಾದೆ

              ಚೇತನಾ ಕುಂಬಳೆ:

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries