ವ್ಯಾಪಾರಿ ಸಮಿತಿ ಸಂಯುಕ್ತ ಮಹಾಸಭೆ
ಪೆರ್ಲ:ಪೆರ್ಲ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಹಾಗೂ ವ್ಯಾಪಾರಿ ಕ್ಷೇಮಕಾರ್ಯ ಸಂಘದ ಸಂಯುಕ್ತ ಮಹಾಸಭೆ ಗುರುವಾರ ಸಂಜೆ ವ್ಯಾಪಾರಿ ಭವನದಲ್ಲಿ ನಡೆಯಿತು.
ಏಕೋಪನ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಅಹಮ್ಮದ್ ಶರೀಫ್ ಉದ್ಘಾಟಿಸಿ ಮಾತನಾಡಿ ಎಲ್ಲಾ ವ್ಯಾಪಾರಿಗಳನ್ನೂ ಕ್ಷೇಮ ಯೋಜನೆಯ ವ್ಯಾಪ್ತಿಗೆ ತರಬೇಕೆಂದು ವಿನಂತಿಸಿದರು. ಜಿ ಎಸ್ ಟಿ ಜಾರಿಯು ದೇಶದ ಆಥರ್ಿಕ ವ್ಯವಸ್ಥೆಯನ್ನು ಏಕೀಕರಣಗೊಳಿಸಿದ್ದು ತಲೆ ಹೊರೆ ಕಾಮರ್ಿಕರ ಕೂಲಿಯಲ್ಲೂ ಏಕೀಕರಣ ನಡೆಯಲಿದೆ. ವ್ಯಾಪಾರಿಗಳು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ ಉನ್ನತ ಶಿಕ್ಷಣ ಲಭಿಸುವಂತೆ ಮಾಡಬೇಕು ಎಂದರು.
ಸಮಿತಿಯ ಪೆರ್ಲ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ನೂರಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಶಂಕರ ನಾರಾಯಣ ಮಯ್ಯ, ಬದಿಯಡ್ಕ ವಲಯಾಧ್ಯಕ್ಷ ಕುಂಜಾರು ಮೊಹಮ್ಮದ್ ಹಾಜಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕೋಶಾಧಿಕಾರಿ ಗಣೇಶ್ ಪ್ರಸಾದ್ 2017-18ನೇ ವರ್ಷದ ವರದಿ-ಲೆಕ್ಕ ಪತ್ರಗಳನ್ನು ಮಂಡಿಸಿದರು. ಪೆರ್ಲ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಜಾರಾಂ ಬಾಳಿಗ ಪೆರ್ಲ ಅವರನ್ನು ಅಭಿನಂದಿಸಲಾಯಿತು. ಎಸ್ ಎಸ್ ಎಲ್ ಸಿ, ಪಿಯುಸಿ, ಪ್ಲಸ್ ಟು, ಪದವಿಗಳಲ್ಲಿ ಉತ್ತೀರ್ಣರಾದ ವ್ಯಾಪಾರಿ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ಪೆರ್ಲ ಘಟಕದ ಪ್ರಧಾನ ಕಾರ್ಯದಶರ್ಿ ಬಾಲಕೃಷ್ಣ ಟಿ ಪೆರ್ಲ ಸ್ವಾಗತಿಸಿ, ಉಪಾಧ್ಯಕ್ಷ ಪ್ರಸಾದ್ ಟಿ.ಪೆರ್ಲ ವಂದಿಸಿದರು.