ಶಾಲೆಯಲ್ಲಿ ಕಳೆಂಜ-ಸಂಸ್ಕೃತಿ ಪರಿಚಯ ಸುಯೋಗ
ಮುಳ್ಳೇರಿಯ: ಊರೂರು ತಿರುಗುವ ಕಳೆಂಜ ವರ್ಷವೂ ಆದೂರು ಶಾಲೆಗೆ ತಪ್ಪದೆ ಬರುತ್ತಾನೆ. ಈ ವರ್ಷ ಆಟಿ ತಿಂಗಳ ಮೊದಲ ದಿನವೇ ಅಂದರೆ ಮಂಗಳವಾರ ಶಾಲೆಗೆ ಭೇಟಿ ನೀಡಿದ. ಹಾಗೆಯೇ ಇಲ್ಲಿ ಕುಣಿದು ಮಾರಿಗಳನ್ನು ದೂರ ಮಾಡಿದ! ಇದು ಮಕ್ಕಳ ಪಾಲಿಗೆ ಹೊಸ ಕುತೂಹಲದ ಅನುಭವವನ್ನು ನೀಡಿತು. ಆಟಿಕಳೆಂಜನ ಬಗ್ಗೆ ಪಾಠಗಳ ಮೂಲಕ ತಿಳಿಯುವ ಮಕ್ಕಳಿಗೆ ಕಣ್ಣಾರೆ ಕಾಣುವ ಅವಕಾಶ ನೀಡಿತು. ಅದೂ ಶಾಲೆಯಲ್ಲಿಯೇ!
ಆದರೆ ಇಂದು ಅವತರಿಸುವ ಕಳೆಂಜನಿಗೆ ಸಾಂಪ್ರದಾಯಿಕವಾದ ವೇಷ ಭೂಷಣಗಳು ಕಡಿಮೆಯಾಗುತ್ತಿದೆ. ಓಲೆಕೊಡೆಯ ಬದಲು ಸಾದಾ ಕೊಡೆ ಹಿಡಿಯಲು ಕಲಿತಿದ್ದಾನೆ. ಪಾಡ್ದನವೂ ಕೇವಲವಾಗುತ್ತಿದೆ. ಆಷಾಡ ಮಾಸದ ಇಂತಹ ದೈವಗಳು, ನಂಬಿಕೆಗಳ ಬಗ್ಗೆ ಕೀಳರಿಮೆ ಮೂಡುತ್ತಿದ್ದರೂ ತನ್ನ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿವೆ.
ಆದೂರು ಕಲ್ಲುಟರ್ಿ-ಕಲ್ಕುಡ ದೈವಸ್ಥಾನದಲ್ಲಿ ಕೋಲ:
ಆಟಿ ತಿಂಗಳು ಪೂತರ್ಿ ಆದೂರು ಕಲ್ಲುಟರ್ಿ-ಕಲ್ಕುಡ ದೈವಸ್ಥಾನದಲ್ಲಿ ದೈವದ ಕೋಲ ನಡೆಯುವುದು ಒಂದು ವಿಶೇಷ. ಇದು ವರ್ಷಂಪ್ರತಿ ನಡೆಯುತ್ತದೆ. ಆದರೆ ಈ ಬಾರಿ ಆದೂರು ಗುತ್ತಿನವರಿಗೆ ಸೂತಕವು ಬಂದ ಕಾರಣ ಬುಧವಾರ ಆರಂಭಗೊಳ್ಳಬೇಕಿದ್ದ ದೈವದ ಕೋಲವು ಆರಂಭಗೊಂಡಿಲ್ಲ. ವರ್ಷ ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಿದ ಭಕ್ತಾದಿಗಳಿಂದ ಕ್ರಮ ಪ್ರಕಾರವಾಗಿ ಹರಿಕೆಕೋಲಗಳು ಇಲ್ಲಿ ನಡೆಯುತ್ತದೆ. ಸಿಂಹ ಸಂಕ್ರಮಣದ ಹಿಂದಿನ ದಿನ ಅಂದರೆ ಅಗೋಸ್ಟ್ 16 ರಂದು ದೈವದ ಕೂಡುವಿಕೆ ನಡೆದು, ಮರುದಿನ ಅಂದರೆ ಅಗೋಸ್ಟ್ 17 ರಂದು ವಿಶಿಷ್ಟ ನೇಮೋತ್ಸವ ನಡೆಯಲಿದೆ.