HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಡಿವೈಎಫ್ಐ ಮುಷ್ಕರ ಹಾಸ್ಯಾಸ್ಪದ : ಬಿಜೆಪಿ
     ಕುಂಬಳೆ: ಕುಂಬಳೆಯಲ್ಲಿ  ಡಿವೈಎಫ್ಐ ನಡೆಸಿದ ಪ್ರತಿಭಟನೆಯು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಹಾಗೂ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿಯು ಹೇಳಿದೆ.
     ಕಳೆದ ಹಲವಾರು ಸಮಯಗಳಿಂದ ಅರ್ಹರಿಗೆ ನೀಡಬೇಕಾದ ಪಿಂಚಣಿಗೆ ಸಂಬಂಧಿಸಿದ ಅಜರ್ಿಗಳನ್ನು  ವಿಲೇವಾರಿ ಮಾಡದೇ ಕೇರಳದ ಎಡರಂಗ ಸರಕಾರವು ಇಂಟರ್ನೆಟ್ ಸೈಟ್ ಬ್ಲಾಕ್ ಮಾಡಿಸಿದೆ. ಮಾತ್ರವಲ್ಲದೆ ರಾಜ್ಯದ ಎಲ್ಲಾ  ಕಡೆಗಳಲ್ಲಿ  ಸರಿಯಾಗಿ ನಡೆಸಲ್ಪಡುತ್ತಿದ್ದ  ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು  ಲೈಫ್ ಯೋಜನೆಯಾಗಿ ಬದಲಾಯಿಸಿ ಇದುವರೆಗೆ ಅರ್ಹರಿಗೆ ಯೋಜನೆಯನ್ನು  ಜಾರಿಗೊಳಿಸುವಲ್ಲಿ  ವೈಫಲ್ಯ ಅನುಭವಿಸಿದ ರಾಜ್ಯದ ಪಿಣರಾಯಿ ವಿಜಯನ್ ಸರಕಾರರ ವಿರುದ್ಧ  ಡಿವೈಎಫ್ಐ ಹೋರಾಟ ನಡೆಸಬೇಕಿತ್ತು  ಎಂದು ಬಿಜೆಪಿ ಪಂಚಾಯತು ಸಮಿತಿಯು ಮಾಮರ್ಿಕವಾಗಿ ತಿಳಿಸಿದೆ.
    ಕುಂಬಳೆ ಪೇಟೆಯ ಸಮಗ್ರ ಅಭಿವೃದ್ಧಿಗೆ ಕಾಸರಗೋಡು ಸಂಸದ ಮತ್ತು  ಮಂಜೇಶ್ವರ ಶಾಸಕರ ಅವಗಣನೆ ವಿರುದ್ಧ  ಹಾಗೂ ಕುಂಬಳೆ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು  ನೌಕರರನ್ನು  ಪದೇ ಪದೇ ವಗರ್ಾಯಿಸುವ ಆಡಳಿತ ಸರಕಾರದ ವಿರುದ್ಧ  ಡಿವೈಎಫ್ಐ ಚಳವಳಿ ನಡೆಸಲಿ ಎಂಬುದಾಗಿ ಬಿಜೆಪಿ ಪಂಚಾಯತಿ ಸಮಿತಿಯು ಅಪಹಾಸ್ಯದಿಂದ ಹೇಳಿಕೆ ನೀಡಿದೆ.
    ಈ ಬಗ್ಗೆ  ಕುಂಬಳೆ ಬಿಜೆಪಿ ಕಚೇರಿಯಲ್ಲಿ  ಜರಗಿದ ಸಭೆಯಲ್ಲಿ  ಕಮಲಾಕ್ಷ  ಕಂಚಿಕಟ್ಟೆ  ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಪಂಚಾಯತು ಘಟಕದ ಉಪಾಧ್ಯಕ್ಷ  ಬಾಬು ಗಟ್ಟಿ  ದೇವಿನಗರ, ಮಂಡಲ ಉಪಾಧ್ಯಕ್ಷ  ಕೆ.ವಿನೋದನ್, ಜಿಲ್ಲಾ  ಉಪಾಧ್ಯಕ್ಷ  ಎಚ್.ಸತ್ಯಶಂಕರ ಭಟ್, ಪಂಚಾಯತಿ ಸದಸ್ಯರಾದ ಕೆ.ಸುಧಾಕರ ಕಾಮತ್, ಕೆ.ರಮೇಶ್ ಭಟ್, ಕೆ.ಸುಜಿತ್ ರೈ ಮಾತನಾಡಿದರು. ಬಿಜೆಪಿ ಪಂಚಾಯತಿ ಸಮಿತಿಯ ಪ್ರಧಾನ ಕಾರ್ಯದಶರ್ಿ ವಸಂತಕುಮಾರ್ ಕೆ. ಸ್ವಾಗತಿಸಿ, ಓಬಿಸಿ ಮೋಚರ್ಾದ ಮಂಡಲ ಪ್ರಧಾನ ಕಾರ್ಯದಶರ್ಿ ಶಶಿ ಕುಂಬಳೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries