ಬ್ಯಾಂಕ್,ಗ್ರಾಹಕರ ನಡುವೆ ಆತ್ಮೀಯ ಭಾಂದವ್ಯ ಅಗತ್ಯ- ಶ್ರೀಪಡ್ರೆ
ಪೆರ್ಲ: ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಸಂಬಂಧ ಕೇವಲ ವ್ಯವಹಾರದ ಭಾಂದವ್ಯವಾಗಿರದೆ ಪರಸ್ಪರ ಪರಿಚಯದ, ಆತ್ಮೀಯ ಭಾಂದವ್ಯವಾಗಿರಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಈ ಬೆಳವಣಿಗೆ ಕಂಡು ಬರುತ್ತಿದೆ. ಗ್ರಾಹಕರ ಕುಂದು ಕೊರತೆಯ ಕುರಿತು ನೇರ ಸಂವಾದದ ಮೂಲಕ ತಿಳಿಯುವುದು ಹೆಚ್ಚು ಪರಿಣಾಮಕಾರಿ ಎಂದು ಹಿರಿಯ ಪತ್ರಕರ್ತ ಶ್ರೀಪಡ್ರೆ ಹೇಳಿದರು.
ಸ್ವರ್ಗದಲ್ಲಿ ಕಾಯರ್ಾಚರಿಸುತ್ತಿರುವ ಕೇರಳ ಗ್ರಾಮೀಣ ಬ್ಯಾಂಕ್ ವಾಣೀನಗರ ಶಾಖೆಯಲ್ಲಿ ಮಲಬಾರ್ ಬ್ಯಾಂಕ್ಗಳ ವಿಲಿನೀಕರಣದ ಐದನೇ ವಾಷರ್ಾಚರಣೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಖೆಯಲ್ಲಿ ಸಿಬಂದಿ ಕೊರತೆ ಇದೆ. ವ್ಯವಹಾರಗಳಿಗೆ ಹೆಚ್ಚುವರಿ ಸಮಯ ತಗಲುತ್ತಿದ್ದು ಶೀಘ್ರದಲ್ಲಿ ಹೆಚ್ಚುವರಿ ಸಿಬಂದಿ ನೇಮಕಗೊಳಿಸಿ ಗ್ರಾಹಕರ ಅನುಕೂಲತೆಗೆ ಎಟಿಎಂ ಸ್ಥಾಪಿಸುವಂತೆ ಆಗ್ರಹಿಸಿದರು.
ಗ್ರಾಮ ಪಂಚಾಯತು ಪ್ರತಿನಿಧಿ ಚಂದ್ರಾವತಿ ಅಧ್ಯಕ್ಷತೆ ವಹಿಸಿದರು. ಸಂಪನ್ಮೂಲ ವ್ಯಕ್ತಿ, ಕೇರಳ ಗ್ರಾಮೀಣ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ, ಜ್ಞಾನ ಜ್ಯೋತಿ ಆಥರ್ಿಕ ಸಾಕ್ಷರತಾ ಕೇಂದ್ರ ಕಾಸರಗೋಡು ತರಬೇತುದಾರ ಕಮಲಾಕ್ಷ ಕೆ. ಮಾತನಾಡಿ, ಗ್ರಾಮೀಣ ಬ್ಯಾಂಕ್ 630 ಶಾಖೆಗಳನ್ನು ಹೊಂದಿದ್ದು ಕಳೆದ ರೂ. 35,000 ಕೋಟಿಗಳ ವಹಿವಾಟು ನಡೆಸಿದೆ. ಓಣಂ ಋತುವಿನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಅಂತಜರ್ಾಲ ಬ್ಯಾಂಕಿಂಗ್ ಆರಂಭಿಸಲು ಉದ್ದೇಶಿಸಲಾಗಿದೆ.ಠೇವಣಿ ನಿಕ್ಷೇಪಿಸುವ, ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವ ಗ್ರಾಹಕರೇ ಬ್ಯಾಂಕಿನ ಆಸ್ತಿ ಎಂದರು.ಗ್ರಾಹಕ ಶಿವ ಪ್ರಕಾಶ್ ದೇಲಂತರು ಮಾತನಾಡಿದರು.
ಕ್ಲಪ್ತ ಸಮಯದಲ್ಲಿ ಸಾಲ ಸಂದಾಯ ಮಾಡಿದ ಗ್ರಾಹಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಕೇರಳ ಗ್ರಾಮೀಣ ಬ್ಯಾಂಕ್ ವಾಣೀನಗರ ಶಾಖೆ ಪ್ರಬಂದಕ ಕೆ.ಚಂದ್ರಶೇಖರನ್ ನಾಯರ್ ಸ್ವಾಗತಿಸಿ, ಗ್ರಾಹಕ ಕಾತರ್ಿಕ್ ಶಾಸ್ತ್ರಿ ಅಗ್ನಿಗರ್ಭ,ಪೂಕೆರೆ ವಂದಿಸಿದರು. ಸಿಬ್ಬಂದಿಗಳಾದ ಜಗದೀಶ್ ಸಿ.ಎಚ್., ಸುನಿಲ್,ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ, ಬ್ಯಾಂಕ್ ಗ್ರಾಹಕರು ಉಪಸ್ಥಿತರಿದ್ದರು.
ಸೌತ್ ಮಲಬಾರ್ ಬ್ಯಾಂಕ್ ಹಾಗೂ ನೋತರ್್ ಮಲಬಾರ್ ಬ್ಯಾಂಕ್ಗಳು 2013ರ ಜುಲೈ 9ರಂದು ಪರಸ್ಪರ ವಿಲೀನಗೊಂಡು ಕೇರಳ ಗ್ರಾಮೀಣ ಬ್ಯಾಂಕ್ ಆಗಿ ಪರಿವರ್ತನೆ ಹೊಂದಿದ್ದು ಅದರ ಐದನೇ ವಾಷರ್ಿಕವನ್ನು ಆಚರಿಸಲಾಗಿತ್ತು.