HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಪ್ರೇರಣಾ ಗ್ರಂಥಾಲಯ ವತಿಯಿಂದ `ಪುಸ್ತಕ ಭಿಕ್ಷಾ ಅಭಿಯಾನ'
   ಮಂಜೇಶ್ವರ: ಪ್ರೇರಣಾ ಸಾರ್ವಜನಿಕ ಲೈಬ್ರೆರಿ ಗುವೆದಪಡ್ಪು ಇದರ ವತಿಯಿಂದ ಗ್ರಂಥಾಲಯಕ್ಕೆ ಪುಸ್ತಕ ಸಂಗ್ರಹ ಕಾರ್ಯಕ್ರಮದ `ಪುಸ್ತಕ ಭಿಕ್ಷಾ ಅಭಿಯಾನ'ವು ದೈಗೋಳಿಯ ಭಾಸ್ಕರ ಶೆಟ್ಟಿಗಾರ್ ಅವರ ಮನೆಯಲ್ಲಿ ಇತ್ತೀಚೆಗೆ ಜರಗಿತು.
   ಸಮಾರಂಭದಲ್ಲಿ ಭಾಸ್ಕರ ಶೆಟ್ಟಿಗಾರ್ ಪ್ರೇರಣಾ ಸಾರ್ವಜನಿಕ ಗ್ರಂಥಾಲಯದ ಕಾರ್ಯದಶರ್ಿ ಅಶೋಕ್ ಕೊಡ್ಲಮೊಗರು ಅವರಿಗೆ ಪುಸ್ತಕವನ್ನು ನೀಡಿ ಪುಸ್ತಕ ಭಿಕ್ಷಾ ಅಭಿಯಾನ ಕಾರ್ಯಕ್ರಮ-2 ನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಓದುವಿಕೆಯ ಮೂಲಕ ಸಮಾಜದ ಸಾಮರಸ್ಯವನ್ನು ಉಳಿಸಿ ಬೆಳೆಸಬಹುದು. ಮಕ್ಕಳಲ್ಲಿ ಸೃಜನಾತ್ಮಕ ಚಿಂತನೆಗಳನ್ನು ಮೂಡಿಸುವಲ್ಲಿ ಪುಸ್ತಕಗಳ ಓದುವಿಕೆ ಪ್ರಧಾನ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಪ್ರೇರಣಾ ಸಾರ್ವಜನಿಕ ಗ್ರಂಥಾಲಯದ ಈ ಕಾರ್ಯವು ಶ್ಲಾಘನೀಯವಾಗಿದ್ದು ಕಾಸರಗೋಡಿನ ಗಡಿನಾಡ ಪ್ರದೇಶದಲ್ಲಿ ಇನ್ನಷ್ಟು ಕೆಲಸ ಕಾರ್ಯಕ್ರಮಗಳು ಜರಗಲಿ ಎಂದು ಹಾರೈಸಿದರು.
   ಈ ಸಂದರ್ಭದಲ್ಲಿ ರಾಜೀವಿ ಟೀಚರ್ ಕಳಿಯೂರು ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಜಾನಕಿ ಬೋಳ್ನ, ಆರತಿ ಟೀಚರ್ ದೈಗೋಳಿ ಹಾಗೂ ಗ್ರಂಥಾಲಯದ ಉಪಾಧ್ಯಕ್ಷ ಜಯರಾಮ ಕೊಣಿಬೈಲ್ ಉಪಸ್ಥಿತರಿದ್ದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries