HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ತಲಪಾಡಿಯಿಂದ ಕುಂಬಳೆ ತನಕ ರಾ. ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮರಣಗುಂಡಿಗಳು: ಇನ್ನೂ ಎಚ್ಚೆತ್ತುಗೊಳ್ಳದ ಅಧಿಕೃತರು

    ಮಂಜೇಶ್ವರ : ತಲಪಾಡಿಯಿಂದ ಕುಂಬಳೆ ತನಕ ರಾ.ಹೆದ್ದಾರಿಯಲ್ಲಿ ಮರಣಗುಂಡಿಗಳು ಸೃಷ್ಟಿಯಾಗಿದ್ದು ರಾ .ಹೆದ್ದಾರಿ  ಅಗಲೀಕರಣ  ಹೆಸರಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆದ್ದಾರಿ ದುರಸ್ಥಿಗೆ ಮೀನ ಮೇಷ ಎಣಿಸುತ್ತಿರುವುದಾಗಿ ಜನ ಸಾಮಾನ್ಯರು ಅರೋಪಿಸುತ್ತಿದ್ದಾರೆ.
   ಕುಂಜತ್ತೂರು ಹಳೆ ಅರ್ ಟಿ ಓ, ಗೋವಿಂದ ಪೈ ಕಾಲೇಜು,ಪೊಸೋಟು, ಕುಂಬಳೆ ಕಣಿಪುರ ಕ್ಷೇತ್ರ ಸನಿಹ, ಮಾವಿನಕಟ್ಟೆ ರಾ. ಹೆದ್ದಾರಿ ಸಹಿತ ಹಲವೆಡೆ ಭಾರೀ ಆಳದ ಮರಣ ಗುಂಡಿಗಳು ಪ್ರತ್ಯಕ್ಷಗೊಂಡಿದ್ದು ಇದು ರಾತ್ರಿ  ಹೊತ್ತಿನಲ್ಲಿ ಅಪಘಾತಕ್ಕೆ ಕಾರಣವಾಗುತ್ತಿದ್ದು ಸಾವು ಕೂಡಾ  ಸಂಭವಿಸುತ್ತಿದೆ.
  ಕೆಲ ದಿನಗಳ ಹಿಂದೆ ಉಪ್ಪಳ ಕೈಕ0ಬದ ರಾ.ಹೆದ್ದಾರಿಯಲ್ಲಿ ಬೈಕೊಂದು ಗುಂಡಿಗೆ ಬಿದ್ದು ಹಾವೇರಿ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಜನ ಪ್ರತಿನಿಧಿಗಳಾಗಲೀ ಅಧಿಕಾರಿಗಳಾಗಲೀ ಮೌನವನ್ನು ಪಾಲಿಸುತ್ತಿರುವುದು ಜನರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಜೊತೆಗೆ ಮಂಗಳವಾರ ಸಂಜೆ ಕುಂಬಳೆ ಮಾವಿನಕಟ್ಟೆ ರಾ. ಹೆದ್ದಾರಿಯಲ್ಲಿ ಬೋವಿಕ್ಕಾನ ನಿವಾಸಿ ರಾಜೇಶ್(25)  ಎಂಬವರು ಸ್ಕೂಟರಿನಲ್ಲಿ ಸಾಗುತ್ತಿರುವಾಗ ಹೊಂಡಕ್ಕೆ ಬಿದ್ದು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
   ಪೊನೋಟಿನಲ್ಲಿ ಹಾಗೂ ಗೋವಿಂದ ಪೈ ಕಾಲೇಜು ಹಾಗೂ ಕುಂಜತ್ತೂರು ಹಳೆ ಅರ್ ಟಿ ಓ  ಹೆದ್ದಾರಿಗಳಲ್ಲಿ ತುತರ್ು ಡಾಮಾರೀಕರಣ ಅತೀ ಅಗತ್ಯವಾಗಿದೆ. ಈ ಸ್ಥಳಗಳಲ್ಲಿ ಅತೀ  ಹೆಚ್ಚಿನ ಅಪಘಾತ ಸಂಭವಿಸುತ್ತಿದೆ.
   ಕುಂಬಳೆ ಕಣಿಪುರ ಕ್ಷೇತ್ರ ಸಮೀಪದ ಕುಂಬಳೆ ನದಿ ಸೇತುವೆಯ ಬಳಿಯಲ್ಲೂ ಭಾರೀ ಗಾತ್ರದ ಬೃಹತ್ ಹೊಂಡಗಳು ಪ್ರತ್ಯಕ್ಷಗೊಂಡಿರುವುದರಿಂದ ಬೆಳಿಗ್ಗೆ ಹಾಗೂ ಸಂಜೆ ವೇಳೆಗಳ ವಾಹನ ದಟ್ಟಣೆಯ ಸಂದರ್ಭ ಸಂಚಾರ ಮೊಟಕು, ಚಿಕ್ಕಪುಟ್ಟ ಅಪಘಾತ, ಗದ್ದಲಗಳು ಉಂಟಾಗುತ್ತಿವೆ.
  ಮರು  ಡಾಮಾರೀಕರಣದ ಅವಧಿ ಕಳೆದಿದ್ದರೂ  ಅಪಫಾತದಲ್ಲಿ ಸಂಭವಿಸುತ್ತಿರುವ ಸಾವುಗಳನ್ನು ಕಂಡೂ ಕಾಣದ ರೀತಿಯಲ್ಲಿ ಜಾಣ ಕುರುಡುತನವನ್ನು ಪ್ರದಶರ್ಿಸುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ  ಎಚ್ಚತ್ತುಕೊಳ್ಳಬೇಕಾಗಿದೆ ಎಂಬುದು ನಾಗರಿಕರ ಒತ್ತಾಯ.
     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries