HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಧಾಮರ್ಿಕ ನೆಲೆಯಲ್ಲಿ ಸಮಾಜ ಕಟ್ಟುವ ಕೆಲಸವಾಗಬೇಕು : ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ
  ಮಧೂರು: ಗುರುಮಠ-ದೇವಸ್ಥಾನ, ಸಮಾಜವು ಅನ್ಯೋನ್ಯವಾಗಿದ್ದು ಒಂದನ್ನು ಬಿಟ್ಟರು ಇನ್ನೊಂದಕ್ಕೆ ಅಸ್ತಿತ್ವವಿಲ್ಲ ಎಂದು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರು ನುಡಿದರು.
   ಅವರು ಮಧೂರು ಶ್ರೀ ಕಾಳಿಕಾಂಬ ದೇಗುಲಕ್ಕೆ ಚಾತುಮರ್ಾಸ್ಯ ಪೂರ್ವಭಾವಿಯಾಗಿ ನೀಡಿದ ಭೇಟಿಯ ವೇಳೆ ನೆರೆದ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.
     ಧಾಮರ್ಿಕ ನೆಲೆಯಲ್ಲಿ ಕಟ್ಟುವ ಸಮಾಜವು ಸುದೀರ್ಘವಾಗಿ ಬಾಳಿಕೆ ಬರುವುದು. ಸಂಸ್ಕಾರ ಮತ್ತು ಸಂಸ್ಕೃತಿಯ ಬೇರು ಆಳಕ್ಕೆ ಇಳಿದಾಗಲೇ ಸಮಾಜವು ಮತ್ತು ನಮ್ಮ ತನದ ಬಗ್ಗೆ ಅಭಿಮಾನ ಮೂಡುವುದು. ಪ್ರತಿಯೊಂದು ಮನೆಯ ಕಿರಿಯರಲ್ಲಿ ಸಂಸ್ಕಾರದ ಬೀಜ ಬಿತ್ತಿದಾಗ ಅದು ಮುಂದೆ ಸಂಪೂರ್ಣ ಸಮಾಜದ ವ್ಯಾಪ್ತಿಯಲ್ಲಿ ಹರಡುವುದು. ಈ ಉದ್ದೇಶದಿಂದಲೇ ಚಾತುಮರ್ಾಸ್ಯ ಕಾಲದಲ್ಲಿ ಯುವ ವೈದಿಕ ಮತ್ತು ಮಹಿಳಾ ಸಮ್ಮೇಳನಗಳನ್ನು ಹಮ್ಮಿಕೊಂಡಿರುವುದಾಗಿ ಶ್ರೀಗಳವರು ತಿಳಿಸಿದರು.
   ಶ್ರೀ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ನೆರೆದ ಭಕ್ತರಿಗೆ ಶುಭಾಶೀರ್ವನಗೈದು ಫಲ, ಮಂತ್ರಾಕ್ಷತೆ ನೀಡಿದರು. ಚಾತುಮರ್ಾಸ್ಯವು ಯಶಸ್ವಿಯಾಗಿ ಸಂಪನ್ನಗೊಳ್ಳಲು ಎಲ್ಲರು ಶ್ರಮಿಸಬೇಕೆಂದು ತಮ್ಮ ಆಶೀರ್ವಚನದಲ್ಲಿ ಕರೆ ನೀಡಿದರು.
   ಕಾರ್ಯಕ್ರಮದ ಪೂರ್ವದಂತೆ ಶ್ರೀ ಸ್ವಾಮಿಗಳಿಗೆ ಕ್ಷೇತ್ರಾಡಳಿತ ಸಮಿತಿ, ಮಹಿಳಾ ಸಮಿತಿ, ಯುವಕ ಸಂಘ, ಭಜನಾ ಸಂಘ, ವಿವಿಧ ಪ್ರಾಂತ್ಯ ಸಮಿತಿ ಪ್ರಮುಖರು ಪೂರ್ಣ ಕುಂಭದೊಂದಿಗೆ ಬರಮಾಡಿಕೊಂಡರು.
   ಮಧೂರು ಶ್ರೀ ಕಾಳಿಕಾಂಬ ಕ್ಷೇತ್ರದ ಅಧ್ಯಕ್ಷ ಪರಮೇಶ್ವರ ಆಚಾರ್ಯ ನೀಚರ್ಾಲು ಸ್ವಾಗತಿಸಿದರು. ಆನೆಗುಂದಿ ಮಠದ ಪ್ರಧಾನ ಕಾರ್ಯದಶರ್ಿ ಲೋಕೇಶ್ ಎಂ.ಬಿ.ಆಚಾರ್ ಕಂಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರು ಪೀಠದ ಅಧ್ಯಕ್ಷ ಸೂರ್ಯ ಕುಮಾರ್ ಹಳೆಯಂಗಡಿ, ಕೋಶಾಧಿಕಾರಿ ಯಜ್ಞೇಶ್ ಆಚಾರ್ಯ, ಪದಾಧಿಕಾರಿಗಳಾದ ಕನ್ಯಾನ ಜನಾರ್ದನ ಆಚಾರ್ಯ, ವೈ.ಧಮರ್ೇಂದ್ರ ಆಚಾರ್ಯ ಮಧೂರು, ಬಂಗ್ರಮಂಜೇಶ್ವರ ಶ್ರೀ ಗುರು ಸೇವಾ ಪರಿಷತ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries