HEALTH TIPS

No title

          ಸಾಧನೆಗೆ ಸ್ಪಷ್ಟ ಗುರಿ ಮತ್ತು ಕೌಶಲ್ಯ ಬೇಕು : ಎನ್.ನಂದಿಕೇಶನ್
    ಕಾಸರಗೋಡು: ಯಾವುದೇ ಸಾಧನೆಯನ್ನು ಸಾಧಿಸಬೇಕಿದ್ದಲ್ಲಿ ಒಂದು ಸ್ಪಷ್ಟವಾದ ಗುರಿ ಇರಬೇಕು. ಆ ಗುರಿಯ ಬೆನ್ನಲ್ಲೇ ಕಠಿಣ ದುಡಿಮೆ, ಓದು ಅನಿವಾರ್ಯ. ವಿದ್ಯಾಥರ್ಿ ಜೀವನದಲ್ಲಿ ಗುರಿ ಮತ್ತು ಕಲಿಕಾ ಕೌಶಲ್ಯವನ್ನು ಅಳವಡಿಸಿಕೊಂಡಲ್ಲಿ ನಿರೀಕ್ಷೆಯಂತೆ ಸಾಧನೆ ಸಾಧ್ಯವಾಗುವುದು ಎಂದು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಎನ್.ನಂದಿಕೇಶನ್ ಅವರು ಹೇಳಿದರು.
   ಕಾಸರಗೋಡಿನ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ ಹಾಗೂ ಪುನರ್ನವ ಟ್ರಸ್ಟ್ ಕಾಸರಗೋಡು ಇದರ ಜಂಟಿ ಆಶ್ರಯದಲ್ಲಿ ಅಭಯನಿಕೇತನದಲ್ಲಿ  ಬಿ.ಇ.ಎಂ. ಪ್ರೌಢ ಶಾಲೆಯ ವಿದ್ಯಾಥರ್ಿಗಳಿಗಾಗಿ ಶನಿವಾರ ಆಯೋಜಿಸಿದ `ಗುರಿ ಮತ್ತು ಕಲಿಕಾ ಕೌಶಲ್ಯ' ಕಾಯರ್ಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಆಧುನಿಕ ಜಗತ್ತಿನಲ್ಲಿ ಕಲಿಕೆಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಚಾಣಾಕ್ಷತೆಯಿಂದ ಬಳಸಿಕೊಳ್ಳಬೇಕು. ಶಾಲಾ ಜೀವನದಿಂದಲೇ ಕಲಿಕೆಯಲ್ಲಿ ಹೆಚ್ಚೆಚ್ಚು ಆಸಕ್ತಿಯ ವಹಿಸುವ ಮೂಲಕ ಸ್ಪಧರ್ಾ ಯುಗದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾಥರ್ಿಗಳಿಗಾಗಿ ಆಯೋಜಿಸಿದ ಈ ಕಾಯರ್ಾಗಾರದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
   ಅತಿಥಿಯಾಗಿ ಉಪಸ್ಥಿತರಿದ್ದ ಬಿ.ಇ.ಎಂ. ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ರಾಜೇಶ್ ಚಂದ್ರ ಕೆ.ಪಿ. ಅವರು ಮಾತನಾಡಿ ವಿದ್ಯಾಥರ್ಿ ಮಟ್ಟದಲ್ಲೇ ಕಲಿಕೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಬೇಕು. ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಜೊತೆಗೆ ಕಲಿಕೆಯಲ್ಲಿ ಕೌಶಲ್ಯವನ್ನು ಜೊತೆಗೂಡಿಸಿಕೊಂಡಲ್ಲಿ ನಮ್ಮ ನಿರೀಕ್ಷೆಯಂತೆ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಅದಕ್ಕಾಗಿ ಗುರಿಯನ್ನು ಮುಂದಿಟ್ಟು ಕಠಿಣ ಪ್ರಯತ್ನವನ್ನು ಮಾಡಬೇಕಾದುದು ಅನಿವಾರ್ಯ ಎಂದರು.
   ುಪಸ್ಥಿತರಿದ್ದು ಮಾತನಾಡಿದ ಪತ್ರಕರ್ತ ಪ್ರದೀಪ್ ಬೇಕಲ್ ಅವರು ವಿವಿಧ ಮಾಧ್ಯಮಗಳಿಂದಾಗಿ ಯುವ ತಲೆಮಾರು ಅಡ್ಡದಾರಿ ಹಿಡಿಯುತ್ತಿದ್ದು, ಈ ಬಗ್ಗೆ ಹೆತ್ತವರು ಸಾಕಷ್ಟು ಗಮನ ಹರಿಸಬೇಕು. ಈ ಮೂಲಕ ಮಕ್ಕಳನ್ನು ರಕ್ಷಿಸಬೇಕು. ವಿದ್ಯಾಥರ್ಿಗಳು ಶಾಲಾ ದಿನಗಳಲ್ಲಿ ಒಂದು ಸ್ಪಷ್ಟವಾದ ಗುರಿಯಿರಿಸಿಕೊಂಡು ಮುನ್ನಡೆದರೆ ಎಲ್ಲಾ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದರು.
   ಕಾರ್ಯಕ್ರಮದಲ್ಲಿ ಅಭಯನಿಕೇತನದ ಉಪಾಧ್ಯಕ್ಷೆ ಬಿ.ಎಂ.ಶ್ರೀಮತಿ ಅಧ್ಯಕ್ಷತೆ ವಹಿಸಿದರು.
  ಅಭಯನಿಕೇತನದ ಪ್ರಧಾನ ಕಾರ್ಯದಶರ್ಿ ಪಿ.ಲತಾ  ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜೊತೆ ಕಾರ್ಯದಶರ್ಿ ಬಿ.ಪ್ರೇಮ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪುನರ್ನವ ಟ್ರಸ್ಟ್ನ ಟ್ರಸ್ಟಿ ನವೀನ್ ಎಲ್ಲಂಗಳ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಗತಿ ನಡೆಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries