HEALTH TIPS

No title

                 ಸವಾಕ್ ಕಾರಡ್ಕ ಬ್ಲಾಕ್ ಸಮಾವೇಶ
     ಮುಳ್ಳೇರಿಯ: ಸಂಘಟನಾತ್ಮಕವಾಗಿ ಒಗ್ಗಟ್ಟಾದಾಗ ಉದ್ದೇಶಿತ ಲಕ್ಷ್ಯ ಪ್ರಾಪ್ತಿ ಸುಲಭವಾಗುತ್ತದೆ. ವರ್ತಮಾನದ ಪರಿಸರದೊಂದಿಗೆ ಹೊಂದಾಣಿಕೆಯೊಂದಿಗೆ ಮುಂದುವರಿಯುವ ಮನೋಸ್ಥಿತಿ ಎಲ್ಲರಿಗೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಲಾ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಕಾರ್ಯವೆಸಗುತ್ತಿರುವ ಕಲಾವಿದರ-ಪರಿಚಾರಕರ ಆಶೋತ್ತರಗಳಿಗೆ ಸಕಾಲಕ್ಕೆ ಸ್ಪಂಧಿಸುವಲ್ಲಿ ಸವಾಕ್ ಕಟಿಬದ್ದವಾಗಿದೆ ಎಂದು ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್ ಓಫ್ ಕೇರಳ(ಸವಾಕ್) ನ ಜಿಲ್ಲಾ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಸವಾಕ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಮುಳ್ಳೇರಿಯದ ಗಜಾನನ ಅನುದಾನಿತ ಶಾಲಾ ಪರಿಸರದಲ್ಲಿ ಆಯೋಜಿಸಲಾಗಿದ್ದ ಸವಾಕ್ ಕಾರಡ್ಕ ಬ್ಲಾಕ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಕಾಸರಗೋಡಿನ ಬಹುತೇಕ ಅಶಕ್ತ ಕಲಾವಿದರು ಸರಕಾರದ ಪಿಂಚಣಿಯಂತಹ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟದಲ್ಲಿರುವರು. ಸರಕಾರ ಕಾಲಾಕಾಲಕ್ಕೆ ಕೊಡಮಾಡುವ ಇತರ ಸೌಲಭ್ಯಗಳು ಗಡಿನಾಡಿನ ಈ ತುದಿಗೆ ತಲಪುವಲ್ಲಿ ಸೋತುಹೋಗಿದೆ.ಈ ಹಿನ್ನೆಲೆಯಲ್ಲಿ ಸಂಘಟನಾತ್ಮಕವಾಗಿ ಒಗ್ಗೂಡಿ ಹಕ್ಕು ಸಂರಕ್ಷಣೆಗೆ ಹೋರಾಡುವ ಅನಿವಾರ್ಯತೆ ಇದೆ ಎಂದು ಅವರು ಈ ಸಮದರ್ಭ ತಿಳಿಸಿದರು. ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಸಕ್ರಿಯವಾಗಿರುವ ಸವಾಕ್ ಕಲಾವಿದರ ಆಶೋತ್ತರಗಳನ್ನು ಪೂರೈಸುವಲ್ಲಿ ಸಫಲವಾಗಿದ್ದು, ಜಿಲ್ಲೆಯಲ್ಲೂ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು ಎಂದು ಕರೆನೀಡಿದರು.
   ಸವಾಕ್ ಕಾರಡ್ಕ ಬ್ಲಾಕ್ ಅಧ್ಯಕ್ಷ ಎ.ಬಿ.ಮಧುಸೂದನ ಬಲ್ಲಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರಡ್ಕ ಬ್ಲಾಕ್ ವ್ಯಾಪ್ತಿಯಲ್ಲಿ 250ಕ್ಕಿಂತಲೂ ಮಿಕ್ಕಿದ ಕಲಾವಿದರನ್ನು ಗುರುತಿಸಿ ಈಗಾಗಲೇ ಗುರುತುಪತ್ರ ನೀಡಲಾಗಿದೆ. ಅಶಕ್ತ ಕಲಾವಿದರನ್ನು ಪತ್ತೆಹಚ್ಚಿ ಸರಕಾರದ ನೆರವಿಗೆ ಪ್ರಯತ್ನಿಸುವ ಚಟುವಟಿಕೆ ನಡೆಯುತ್ತಿದೆ ಎಂದು ತಿಳಿಸಿದರು.
   ಸವಾಕ್ ಜಿಲ್ಲಾ ಕಾರ್ಯದಶರ್ಿ ತುಳಸೀಧರನ್, ಕಾರಡ್ಕ ಬ್ಲಾಕ್ ಕಾರ್ಯದಶರ್ಿ ಸುಂದರ ಮವ್ವಾರು ಉಪಸ್ಥಿತರಿದ್ದು ಮಾತನಾಡಿದರು. ಕಾರಡ್ಕ ಬ್ಲಾಕ್ ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ, ಜೊತೆ ಕಾರ್ಯದಶರ್ಿ ವಿನು ಬೋವಿಕ್ಕಾನ, ಉಪಾಧ್ಯಕ್ಷೆ ಮೋಹಿನಿ ಮುಳಿಯಾರ್ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಂಘಟನೆಗೆ ಸೇರ್ಪಡೆಗೊಂಡ ಹೊಸ ಸದಸ್ಯರನ್ನು ಸ್ವಾಗತಿಸಿ, ಗುರುತುಪತ್ರ ವಿತರಿಸಲಾಯಿತು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries