ಮಾನವ ಕಳ್ಳಸಾಗಣೆಗೆ ಅಂಕುಶ ಹಾಕುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
ನವದೆಹಲಿ: ಮಾನವ ಕಳ್ಳಸಾಗಣೆ ತಡೆಗೆ ರೂಪಿಸಲಾಗಿರುವ ಸಮಗ್ರ ಮಸೂದೆಗೆ ಗುರುವಾರ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಇನ್ನು ಮುಂದೆ ಮಾನವ ಕಳ್ಳಸಾಗಣೆ, ಮಾರಾಟ ಗುರುತರ ಅಪರಾಧವಾಗಲಿದೆ.
ಮಾನವ ಸಾಗಣೆ ತಡೆ, ರಕ್ಷಣೆ ಪುನರ್ವಸತಿ ಮಸೂದೆ-2018 ಯ ಪ್ರಕಾರ ಸಂತ್ರಸ್ತರು, ಸಾಕ್ಷಿ, ದೂರುದಾರರ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳಗುತ್ತದೆ. ಮಸೂದೆಯಲ್ಲಿ ಲೈಂಗಿಕ ಕಾರ್ಯಕರ್ತರಿಗೆ ತೊಂದರೆ ನೀಡುವಂತಿಲ್ಲ ಎಂಬ ಅಂಶವೂ ಸೇರಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ಈ ಮಸೂದೆ ಲೈಂಗಿಕ ಕಾರ್ಯಕರ್ತರಿಗೆ ಕಿರುಕುಳ ನೀಡುವ ಮಸೂದೆಯಲ್ಲ, ಬದಲಾಗಿ ಲೈಂಗಿಕ ಶೋಷಣೆಯ ಜಾಲಕ್ಕೆ ತುತ್ತಾಗಿರುವ ಸಂತ್ರಸ್ತರ ದೃಷ್ಟಿಯಿಂದ ರೂಪಿಸಲಾದ ಮಸೂದೆ ಎಂದು ಮನೇಕಾ ಗಾಂಧಿ ಹೇಳಿದ್ದಾರೆ. ಮಸೂದೆಯ ಪ್ರಕಾರ ಪ್ರತಿ ಜಿಲ್ಲಾ, ರಾಜ್ಯ ಹಾಗೂ ಕೇಂದ್ರಗಳ ಮಟ್ಟದಲ್ಲಿ ಮಾನವ ಕಳ್ಳಸಾಗಣೆ ತಡೆಗಟ್ಟಲ್ಪು ಸಾಂಸ್ಥಿಕ ವ್ಯವಸ್ಥೆ ಜಾರಿಗೆ ಬರಲಿದ್ದು ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ, ಕನಿಷ್ಟ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.