HEALTH TIPS

No title

                  ಪಳ್ಳತ್ತಡ್ಕ ಶಾಲಾ ಮಕ್ಕಳಿಂದ ಭತ್ತ ಬೇಸಾಯ ವೀಕ್ಷಣೆ
    ಪೆರ್ಲ: ಶಿಕ್ಷಣ ಪರಿಕಲ್ಪನೆಯನ್ನು ಪರಿಪೂರ್ಣ ಮಟ್ಟದಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ವ್ಯವಸ್ಥೆಗಳು ವಿವಿಧ ಉಪಕ್ರಮಗಳಿಗೆ ಮುಂದಾಗುತ್ತಿದ್ದು, ಪ್ರಸ್ತುತ ವಿದ್ಯಾಥರ್ಿಗಳಲ್ಲಿ ಕೃಷಿಯಂತಹ ಪಾರಂಪರಿಕ ವ್ಯವಸ್ಥೆಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳು ನಡೆಯುತ್ತಿವೆ.
  ಮಕ್ಕಳಿಗೆ ಎಳವೆಯಲ್ಲಿಯೇ ಕೃಷಿಯ ಬಗ್ಗೆ ಅರಿವು ಹಾಗೂ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಪಳ್ಳತ್ತಡ್ಕ ಅನುದಾನಿತ ಶಾಲಾ ಮಕ್ಕಳಿಗೆ ಕಲಿಕೆಯ ಭಾಗವಾಗಿ ಸಮೀಪದ ಭತ್ತದ ಗದ್ದೆಯ ವೀಕ್ಷಣೆಯ ಸದವಕಾಶವನ್ನು ಇತ್ತೀಚೆಗೆ ಕಲ್ಪಿಸಲಾಯಿತು.
    ಸ್ಥಳೀಯ ಸುರೇಶ ಭಟ್ ಪಳ್ಳತ್ತಡ್ಕ ಅವರ ಭತ್ತದ ಗದ್ದೆಗೆ ಭೇಟಿ ನೀಡಿ ನೇಜಿ ನೆಡುವ ಪ್ರಕ್ರಿಯೆಯನ್ನು ಮಕ್ಕಳು ಸೂಕ್ಷ್ಮವಾಗಿ ನಿರೀಕ್ಷಿಸಿದರು.
   ಆಧುನಿಕತೆಗೆ ತಕ್ಕಂತೆ ಕೃಷಿ ಪದ್ಧತಿಯೂ ಬದಲಾಗುತ್ತಿದೆ. ಗ್ರಾಮೀಣ ಭಾಗದ ಕೃಷಿಕರು ಭತ್ತ ಬೇಸಾಯದಿಂದ ವಿಮುಖರಾಗುತ್ತಿದ್ದು ವಾಣಿಜ್ಯ ಬೆಳೆಗಳತ್ತ ಆಕಷರ್ಿತರಾಗುತ್ತಿದ್ದಾರೆ. ಹೊಸ ತಲೆಮಾರು ಕೃಷಿಯಿಂದ ದೂರ ಸರಿಯುತ್ತಿದೆ. ಕೃಷಿಯನ್ನೂ, ಕೃಷಿಕರನ್ನು ಪ್ರೋತ್ಸಾಹಿಸ ಬೇಕಾದ ಅನಿವಾರ್ಯತೆ ಇದೆ. ನೋಡಿ ಕಲಿ ಎಂಬಂತೆ ಪಂಚೇಂದ್ರಿಯಗಳ ಅನುಭವದ ಮೂಲಕ ಕಲಿಯುವ ವಿದ್ಯೆ ಮಕ್ಕಳ ಮನಸಿನಲ್ಲಿ ಅಚ್ಚಳಿಯದೆ ಉಳಿಯಬೇಕೆಂಬುದು ಉದ್ದೇಶವೆಂದು ಶಾಲಾ ಶಿಕ್ಷಕರು ಪತ್ರಿಕೆಗೆ ತಿಳಿಸಿದ್ದಾರೆ.
    ಭತ್ತದ ಗದ್ದೆಯ ಭೇಟಿಯ ಸಂದರ್ಭ ಶಾಲಾ ಶಿಕ್ಷಕರು, ಸುರೇಶ್ ಭಟ್ ಪಳ್ಳತ್ತಡ್ಕ ಮಾಹಿತಿಗಳನ್ನು ನೀಡಿ ಸಹಕರಿಸಿದರು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries