HEALTH TIPS

No title

                   ಸಹಜ ಕೃಷಿ ಜೀವನ ಮೈಗೂಡಿಸಬೇಕು-ನ್ಯಾಯವಾದಿ ಕೆ.ಶ್ರೀಕಾಂತ್           
     ಬದಿಯಡ್ಕ : ಪರಂಪರಾಗತ ಕೃಷಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಆಧುನಿಕ ಯುಗದಲ್ಲೂ ಕೆಸರಿಗಿಳಿಯುವ ಮನೋಭಾವವಿರಬೇಕು. ಮೊಬೈಲ್ ಹಾಗೂ ಇಂಟರ್ ನೆಟ್ ಬಳಕೆಯಲ್ಲಿ ಕಾಲಕಳೆಯುವುದರ ಬದಲು ಸಹಜವಾದ ಕೃಷಿಜೀವನವನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿದರು.
ಬದಿಯಡ್ಕ ಗ್ರಾಮಪಂಚಾಯತ್ ಮತ್ತು ಕುಟುಂಬಶ್ರೀ ಸಿ.ಡಿ.ಎಸ್.ನ ಆಶ್ರಯದಲ್ಲಿ 6ನೇ ವಾಡರ್ು ಕರಿಂಬಿಲದಲ್ಲಿ ಭಾನುವಾರ ನಡೆದ `ಮಳೆ-ಬೆಳೆ ಮಹೋತ್ಸವ'ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
   ಇಂದು ಕಾಲ ಬದಲಾಗುತ್ತಿದ್ದು, ಎಷ್ಟೋ ಜನ ಯುವಕರು ಕೃಷಿಯತ್ತ ಗಮನಹರಿಸುವುದು ಕಂಡುಬರುತ್ತದೆ. ಸಾವಯವ ಕೃಷಿಯನ್ನು ಮಾಡುವುದರಿಂದ ಉತ್ತಮ ಆರೋಗ್ಯವಂತರಾಗಿ ಬಾಳಲು ಸಾಧ್ಯ ಎಂದರು.
ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಿರಿಯರ ಕಾಲದಲ್ಲಿ ಗದ್ದೆಬೇಸಾಯವಿಲ್ಲದ ಮನೆಗಳಿರುತ್ತಿರಲಿಲ್ಲ. ತಮ್ಮ ಮನೆಗಿರುವ ಆಹಾರವನ್ನು ಅವರೇ ಉತ್ಪಾದಿಸಿ ಉಳಿಕೆಯನ್ನು ದಾನಮಾಡುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಕಾಲಬದಲಾಗಿದ್ದು ಗದ್ದೆ ಬೇಸಾಯದಲ್ಲಿ ನಾವು ಹಿಂದೆ ಉಳಿಯಬಾರದು. ಸರಕಾರವು ನೀಡುತ್ತಿರುವ ಸಹಾಯಧನ ಹಾಗೂ ಪ್ರೋತ್ಸಾಹವನ್ನು ಸಮರ್ಪಕವಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಇಳುವರಿಯನ್ನು ಪಡೆಯಬೇಕು ಎಂದರು.
ಬದಿಯಡ್ಕ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಸೈಬುನ್ನೀಸ ಮೊಯ್ದೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಜಯಂತಿ, ಲಕ್ಷ್ಮೀನಾರಾಯಣ ಪೈ, ಪ್ರೇಮ, ಕೃಷಿ ಅಧಿಕಾರಿ ಮೀರಾ, ಕುಟುಂಬಶ್ರೀಯ ಗ್ರೇಸಿ ಡಿಸೋಜ ಮೊದಲಾದವರು ಪಾಲ್ಗೊಂಡರು. ವಾಡರ್ು ಸದಸ್ಯ ವಿಶ್ವನಾಥ ಪ್ರಭು ಕರಿಂಬಿಲ ಸ್ವಾಗತಿಸಿ, ಕುಟುಂಬಶ್ರೀ ಸಿ.ಡಿ.ಎಸ್. ಅಧ್ಯಕ್ಷೆ ಸುಧಾ ಜಯರಾಂ ವಂದಿಸಿದರು.
ಜನಪ್ರತಿನಿಧಿಗಳು ಕೃಷಿಕರೊಂದಿಗೆ ನೇಜಿಯನ್ನು ನೆಟ್ಟು ಸಂಭ್ರಮಿಸಿದರು. ಕೆಸರು ಗದ್ದೆಯಲ್ಲಿ ವಿವಿಧ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು. ಕಬಡಿ, ಹಗ್ಗಜಗ್ಗಾಟ, 100 ಮೀಟರ್ ಓಟ, ಲಿಂಬೆ ಚಮಚ, ನೇಜಿ ನೆಡುವುದು, ವೇಗದ ನಡೆತ ಮೊದಲಾದ ಸ್ಪಧರ್ೆಗಳನ್ನು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿತ್ತು. ಉತ್ತಮ ಕೃಷಿಕರಿಗಿರುವ ಪ್ರಶಸ್ತಿಗೆ ಆಯ್ಕೆಯಾದ ಕೆ.ಕೇಶವ ಪ್ರಭು ಕರಿಂಬಿಲ, ಮದರು ಪೀಳಿತ್ತಡ್ಕ, ಚಂದ್ರಾವತಿ ವಳಮಲೆ, ಸುಂದರಿ ಕಾಡಮನೆ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮಳೆ ಬೆಳೆ ಮಹೋತ್ಸವವು ಊರಿನಲ್ಲಿ ಹಬ್ಬದ ವಾತಾವರಣವನ್ನು ಉಂಟುಮಾಡಿತ್ತು. ರವಿಕಾಂತ ಕೇಸರಿ ಕಡಾರು ಹಾಗೂ ಅನಿತಾ ಟೀಚರ್ ನಿಣರ್ಾಯಕರಾಗಿ ಪಾಲ್ಗೊಂಡರು. ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries