HEALTH TIPS

No title

                ಪರಂಬಳ - ಜೋಡುಕಲ್ಲು ರಸ್ತೆ ಅವ್ಯವಸ್ಥೆ ; ನಾಗರಿಕ ಹೋರಾಟ ಸಮಿತಿಯಿಂದ ರಸ್ತೆ ತಡೆ
    ಉಪ್ಪಳ: ಪರಂಬಳ- ಜೋಡುಕಲ್ಲು ರಸ್ತೆಯ ದುರವಸ್ಥೆಯನ್ನು  ಪ್ರತಿಭಟಿಸಿ  ನಾಗರಿಕ  ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ರಸ್ತೆ ತಡೆ ನಡೆಯಿತು.
   ಕಯ್ಯಾರು  ಡೋನ್ಬೋಸ್ಕೊ ಪರಂಬಳ ಸ್ಟೋರ್ ಪರಿಸರದಿಂದ ಮೆರವಣಿಗೆ ಮೂಲಕ ಆಗಮಿಸಿದ ನೂರಾರು ಮಂದಿ ರಸ್ತೆ ತಡೆದು ಪ್ರತಿಭಟನೆ  ವ್ಯಕ್ತಪಡಿಸಿದರು.
    ಮೆರವಣಿಗೆಗೆ  ಕಯ್ಯಾರು  ಕ್ರಿಸ್ತ ರಾಜ ದೇವಾಲಯದ  ಧರ್ಮಗುರು  ಫಾದರ್ ವಿಕ್ಟರ್ ಡಿಸೋಜ   ಚಾಲನೆ ನೀಡಿದರು.
ಕಯ್ಯಾರು  ಜಂಕ್ಷನ್ನಲ್ಲಿ  ನಡೆದ ಪ್ರತಿಭಟನೆಯನ್ನು ಫಾದರ್ ವಿಕ್ಟರ್ ಡಿಸೋಜ ಉದ್ಘಾಟಿಸಿದರು.
    ಕಯ್ಯಾರು ಶೀಮಹಮ್ಮಾಯಿ  ದೇವಸ್ಥಾನದ ಸಿ.ಟಿ.ನಾಯಕ್, ಪರಂಬಳ ಮಸೀದಿಯ ಖತೀಬ್ ಮುಹಮ್ಮದ್ ಉಸ್ತಾದ್,  ಬೇಬಿ ಶೆಟ್ಟಿ, ಅಬ್ದುಲ್ಲ  ಕು0ಞಿ, ಜೋನ್ ಡಿಸೋಜ, ಪ್ರಸಾದ್ ರೈ, ರಾಜೀವಿ ರೈ, ಕರೀಂ, ಪದ್ಮನಾಭ, ಜೋಜರ್್ ಡಿ ಅಲ್ಮೇಡಾ,  ರಾಜ್ಕುಮಾರ್, ರೇಣುಕಾ  ಮೊದಲಾದವರು ನೇತೃತ್ವ ನೀಡಿದರು.   
    ಪ್ರತಿಭಟನೆಗೆ  ವ್ಯಾಪಾರಿಗಳು ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ನೀಡಿದರು. ಆಟೋ-ಟ್ಯಾಕ್ಸಿ, ಇತರ ವಾಹನ ಮಾಲಕರು,  ಕಾಮರ್ಿಕರು, ವಿವಿಧ ಸಂಘಟನೆಗಳು, ಕ್ಲಬ್,ವಿವಿಧ ಧಾಮರ್ಿಕ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಗೆ  ಬೆಂಬಲ ಸೂಚಿಸಿದರು.
   ರಸ್ತೆ ಅವ್ಯವಸ್ಥೆ ಬಗ್ಗೆ ಸಚಿವರು, ಸಂಸದ, ಶಾಸಕರು, ಅಧಿಕಾರಿ ಹಾಗೂ ಇತರ ಜನಪ್ರತಿನಿಧಿಗಳಿಗೆ ಮನೆವಿ ಸಲ್ಲಿಸಲು ಕ್ರೀಯಾ ಸಮಿತಿ ತೀಮರ್ಾನಿಸಿದೆ.
    ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಹದಗೆಟ್ಟು ಸಂಚಾರ ಅಯೋಗ್ಯವಾಗಿದ್ದರೂ ದುರಸ್ತಿಗೆ ಮುಂದಾಗಿಲ್ಲ. ಇದರಿಂದ  ಸಂಚರಿಸಲು  ಸಾಧ್ಯವಾಗುತ್ತಿಲ್ಲ. ಹೊಂಡ- ಗುಂಡಿಗಳಿಂದ ತುಂಬಿರುವ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗುತ್ತಿದೆ.  ಶಾಲೆ, ಮಸೀದಿ , ದೇವಸ್ಥಾನ , ಚಚರ್್ , ಅಂಗನವಾಡಿ , ಗ್ರಾಮ ಕಚೇರಿ ಹಾಗೂ ಇತರ ಸಂಸ್ಥೆಗಳು, ದಿನಂಪ್ರತಿ ಸಾವಿರಾರು ಮಂದಿ  ತೆರಳುವ ಈ ರಸ್ತೆ  ಕುರಿತ ನಿರ್ಲಕ್ಷದ ವಿರುದ್ಧ  ನಾಗರಿಕರಿಂದ ಆಕ್ರೋಶ ಕೇಳಿ ಬರುತ್ತಿದ್ದು , ತೀವ್ರ ಹೋರಾಟಕ್ಕೆ  ಮುಂದಾಗಿದ್ದು, ಹಂತಹಂತವಾಗಿ ಹೋರಾಟ ತೀವ್ರಗೊಳಿಸಲು ಹೋರಾಟ ಸಮಿತಿ  ತೀಮರ್ಾನಿಸಿದೆ.
     ತೋಡಿನಂತಾಗಿರುವ  ರಸ್ತೆ:
  ರಸ್ತೆ ಸಂಪೂರ್ಣ ತೋಡಿನಂತಾಗಿದ್ದು,  ನಾಲ್ಕು  ಕಿ.ಮೀ ಉದ್ದದ  ರಸ್ತೆಯಲ್ಲಿ  ಗೋಚರಿಸುವುದು ಹೊಂಡಗಳು ಮಾತ್ರ.   ಬೃಹತ್ ಹೊಂಡಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಪ್ರತಿಭಟನಾಕಾರರು ಬಾಳೆ, ಮರ ಗಿಡಗಳನ್ನು ಹೊಂಡ ದಲ್ಲಿ ನೆಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬೃಹತ್   ಹೊಂಡಗಳಲ್ಲಿ ತುಂಬಿರುವ ನೀರಿನಲ್ಲಿ  ದೋಣಿಯನ್ನು  ಬಳಸುವ ಮೂಲಕ ಹೋರಾಟ ಗಮನ ಸೆಳೆಯಿತು. ಬೃಹತ್ ಸಂಖ್ಯೆಯಲ್ಲಿ  ಪಕ್ಷ, ಜಾತಿ ಬೇಧವಿಲ್ಲದೆ ಹೋರಾಟಕ್ಕೆ ಕೈ ಜೋಡಿಸಿದ್ದು, ಆಡಳಿತ ವರ್ಗ ಮತ್ತು  ಅಧಿಕಾರಿಗಳು ಕೂಡಲೇ ಕಣ್ತೆರೆಯುವಂತೆ  ಒತ್ತಾಯಿಸಿದರು.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries