HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಪ್ರಜಾಪ್ರಪ್ರತ್ವ ಪ್ರಕ್ರಿಯೆಯಲ್ಲಿ  ಜನರ ಸಹಭಾಗಿತ್ವ ಅಗತ್ಯ-ಜಿಲ್ಲಾಧಿಕಾರಿ
     ಕಾಸರಗೋಡು: ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ  ಕಾಸರಗೋಡು ಜಿಲ್ಲೆಯಿಂದ ಹೆಚ್ಚಿನ ಜನರ ಸಹಭಾಗಿತ್ವ ಇರಬೇಕು ಎಂದು ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಹೇಳಿದ್ದಾರೆ. ಹಾಗಾದಲ್ಲಿ  ಮಾತ್ರ ಪ್ರಜಾಪ್ರಭುತ್ವವನ್ನು  ಉಳಿಸಿ ಬೆಳೆಸಲು ಸಹಕಾರ ನೀಡಿದಂತಾಗುತ್ತದೆ. ಅಲ್ಲದೆ ಜಿಲ್ಲೆಯಲ್ಲಿ  ಪ್ರಜಾಪ್ರಭುತ್ವಕ್ಕೆ ಮತ್ತಷ್ಟು  ಮನ್ನಣೆ ಲಭಿಸಿದಂತಾಗುತ್ತದೆ ಎಂದು ಅವರು ನುಡಿದರು.
    2019ರಲ್ಲಿ  ನಡೆಯಲಿರುವ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ  ಸ್ವೀಪ್ (ಎಸ್ವಿಇಇಪಿ - ಸಿಸ್ಟಮ್ಯಾಟಿಕ್ ವೋಟಸರ್್ ಎಜ್ಯುಕೇಶನ್ ಆ್ಯಂಡ್ ಎಲೆಕ್ಟೋರಲ್ ಪಾಟರ್ಿಸಿಪೇಶನ್) ಸಭೆಯಲ್ಲಿ  ಅವರು ಮಾತನಾಡಿದರು.
    ಮತದಾರರ ಪಟ್ಟಿಯಲ್ಲಿ  ಹೆಸರಿರುವವರ ಸಂಖ್ಯೆಯಲ್ಲಿ  ಪ್ರಸ್ತುತ ಕೇರಳ ರಾಜ್ಯದ ಸರಾಸರಿಗಿಂತ ಕಾಸರಗೋಡು ಜಿಲ್ಲೆಯು ಭಾರೀ ಹಿನ್ನಡೆಯಲ್ಲಿದೆ. ಅದನ್ನು  ದಾಟಿ ಮುಂದೆ ಸಾಗಲು ನಮಗೆ ಸಾಧ್ಯವಾಗಬೇಕು. ಈ ಮೂಲಕ ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
   ಮುಂಬರುವ ಲೋಕಸಭಾ ಚುನಾವಣೆಗಿಂತ ಮೊದಲು ಅರ್ಹರಾದ ಎಲ್ಲರನ್ನು  ಮತದಾರರ ಪಟ್ಟಿಯಲ್ಲಿ  ಸೇರಿಸಲು ಅಗತ್ಯದ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಸಂಪೂರ್ಣ ಸಹಕಾರ ನೀಡಲು ಸಿದ್ಧರಾಗಬೇಕು. ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಅಲ್ಲದೆ ಸಂಘಟನೆಗಳು ಈ ನಿಟ್ಟಿನಲ್ಲಿ  ಗಮನ ಹರಿಸ ಬಹುದಾಗಿದೆ ಎಂದು ನುಡಿದರು.
   ಜಿಲ್ಲೆಯಲ್ಲಿ  ಒಟ್ಟು  ಜನಸಂಖ್ಯೆಯ ಶೇಕಡಾ 70.73ರಷ್ಟು  ಮಂದಿ ಮಾತ್ರ ಮತದಾರರ ಪಟ್ಟಿಯಲ್ಲಿ  ಹೆಸರು ನೋಂದಾಯಿಸಿದ್ದಾರೆ. ಇದು ರಾಜ್ಯದ ಸರಾಸರಿಗಿಂತ ಶೇಕಡಾ 72.86ರಷ್ಟು  ಕಡಿಮೆಯಾಗಿದೆ. ಜಿಲ್ಲೆಯ ಹಿಂದುಳಿದ ವಲಯಗಳಲ್ಲಿ  ಒಳಗೊಂಡವರನ್ನು  ಮತದಾರರ ಪಟ್ಟಿಯಲ್ಲಿ  ಸೇರಿಸಲು ಸಂಬಂಧಪಟ್ಟವರು ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.
   ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ  ಮತದಾನದ ಹಕ್ಕು ವಿನಿಯೋಗಿಸುವ ಅಗತ್ಯದ ಕುರಿತು ಮತ್ತು  ಹೆಚ್ಚಿನವರನ್ನು  ಮತದಾರರ ಪಟ್ಟಿಯಲ್ಲಿ  ಸೇರ್ಪಡೆಗೊಳಿಸುವುದು ಮೊದಲಾದ ಪ್ರಕ್ರಿಯೆಗಳಿಗಾಗಿ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಜುಲೈ 9ರಂದು ಸ್ವೀಪ್ನ ವಿವಿಧ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲು ನಿರ್ಧರಿಸಲಾಯಿತು. ಇದರ ಅಂಗವಾಗಿ ವಿವಿಧ ಯೋಜನೆಗಳನ್ನು  ತಯಾರಿಸಲಾಯಿತು.
   ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ  ಮತದಾರರ ಪಟ್ಟಿಯಲ್ಲಿ  ಅತ್ಯಧಿಕ ಮಂದಿ ಇರುವುದು ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಾಗಿದೆ. ಉಳಿದಂತೆ ಕಾಸರಗೋಡು, ಉದುಮ, ಕಾಂಞಂಗಾಡು, ತೃಕ್ಕರಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ  ಮತದಾರರ ಪಟ್ಟಿಗೆ ಜನರ ಸೇರ್ಪಡೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕೆಂದು ಜಿಲ್ಲಾಧಿಕಾರಿ ಇದೇ ಸಂದರ್ಭ ಕರೆ ನೀಡಿದರು.
    ಮಂಜೇಶ್ವರದಲ್ಲಿ  ಶೇಕಡಾ 73.54 ಮಂದಿ ಮತದಾರರಿದ್ದಾರೆ. ಕಾಂಞಂಗಾಡು ವಿಧಾನಸಭಾ ಕ್ಷೇತ್ರದಲ್ಲಿ  ಅತಿ ಕಡಿಮೆ ಅಂದರೆ ಶೇಕಡಾ 69.24 ಮಂದಿಯ ಹೆಸರು ಮಾತ್ರ ಮತದಾರರ ಪಟ್ಟಿಯಲ್ಲಿದೆ. 2018ರ ಜನವರಿ 1ರ ವರೆಗಿನ ಲೆಕ್ಕಾಚಾರ ಇದಾಗಿದೆ. ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ  ಶೇಕಡಾ 70.49, ಕಾಸರಗೋಡಿನಲ್ಲಿ  ಶೇಕಡಾ 70.48 ಮತ್ತು  ಉದುಮ ಕ್ಷೇತ್ರದಲ್ಲಿ  ಶೇಕಡಾ 69.99 ಮಂದಿ ಮತದಾರರಿರುವುದಾಗಿ ಸಭೆಯಲ್ಲಿ  ವಿವರಿಸಲಾಯಿತು.
    ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ತಹಸೀಲ್ದಾರರು, ಗ್ರಾಮಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಪ್ರಮೋಟರ್ಗಳು ಮುಂತಾದವರು ಸಭೆಯಲ್ಲಿ  ಉಪಸ್ಥಿತರಿದ್ದರು.
     ಜಿಲ್ಲೆಯ ಒಟ್ಟು  ಮತದಾರರ ವಿವರ : ನೂತನ ಅಂಕಿ ಅಂಶದಂತೆ ಕಾಸರಗೋಡು ಜಿಲ್ಲೆಯ ಒಟ್ಟು  ಜನಸಂಖ್ಯೆ 13,73,083 ಆಗಿದೆ. ಇದರಲ್ಲಿ  ಮತದಾರರ ಪಟ್ಟಿಯಲ್ಲಿ  ಹೆಸರಿರುವುದು 9,71,215 ಆಗಿರುತ್ತದೆ. ಅಂದರೆ ಒಟ್ಟು  ಜನಸಂಖ್ಯೆಯ ಶೇಕಡಾ 70.73 ಮಂದಿಯ ಹೆಸರು ಮಾತ್ರ ಮತದಾರರ ಪಟ್ಟಿಯಲ್ಲಿದೆ. ಜಿಲ್ಲೆಯಲ್ಲಿ  6,63,959 ಪುರುಷರು ಹಾಗೂ 7,09,129 ಮಂದಿ ಮಹಿಳೆಯರಿದ್ದಾರೆ. ಇದರಲ್ಲಿ  ಅನುಕ್ರಮವಾಗಿ 4,73,832 ಮಂದಿ ಪುರುಷರು ಮತ್ತು 4,97,383 ಮಂದಿ ಮಹಿಳೆಯರು ಮತದಾರರ ಪಟ್ಟಿಯಲ್ಲಿದ್ದಾರೆ. ಕೇರಳ ರಾಜ್ಯದಲ್ಲೇ ಕಾಸರಗೋಡು ಜಿಲ್ಲೆಯ ಮತದಾರರ ಪಟ್ಟಿಯನ್ನು  ನಂಬರ್ ವನ್ ಮಾಡಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕೆಂದು ಸಭೆಯಲ್ಲಿ  ನಿದರ್ೇಶನ ನೀಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries